Times of Deenabandhu
  • Home
  • ಪ್ರಧಾನ ಸುದ್ದಿ
  • ಮುಖ್ಯಮಂತ್ರಿಗಳ ಜತೆ ಮೋದಿ ಸಮಾಲೋಚನೆ: ಲಾಕ್‌ಡೌನ್‌ ಗೊಂದಲಕ್ಕೆ ತೆರೆ ಸಾಧ್ಯತೆ!
ಪ್ರಧಾನ ಸುದ್ದಿ ಮುಖ್ಯಾಂಶಗಳು

ಮುಖ್ಯಮಂತ್ರಿಗಳ ಜತೆ ಮೋದಿ ಸಮಾಲೋಚನೆ: ಲಾಕ್‌ಡೌನ್‌ ಗೊಂದಲಕ್ಕೆ ತೆರೆ ಸಾಧ್ಯತೆ!

 

ಹೊಸದಿಲ್ಲಿ: ಏಪ್ರಿಲ್‌ 14ರ ಬಳಿಕ ದೇಶಾದ್ಯಂತ ಲಾಕ್‌ಡೌನ್‌ ಇದೇ ರೀತಿ ಮುಂದುವರಿಯಲಿದೆಯೇ? ಮತ್ತಷ್ಟು ಕಠಿಣ ನಿರ್ಬಂಧ ಜಾರಿಯಾಗಲಿದೆಯೇ? ಅಥವಾ ಕೊಂಚ ಸಡಿಲವಾಗಲಿದೆಯೇ? ಹಲವುದಿ ನಗಳಿಂದ ಜನರನ್ನ ಕಾಡುತ್ತಿರುವ ಈ ಪ್ರಶ್ನೆಗಳಿಗೆ ಶನಿವಾರ ಸ್ಪಷ್ಟ ಉತ್ತರ ಸಿಗುವ ಸಾಧ್ಯತೆಯಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲಾರಾಜ್ಯಗಳ ಸಿಎಂಗಳ ಜತೆ ಶನಿವಾರ ವಿಡಿಯೊ ಕಾನ್ಫರೆನ್ಸ್‌ ಮೂಲಕ ಸಮಾಲೋಚನೆ ನಡೆಸಲಿದ್ದು, ಮುಂದಿನ ಕ್ರಮದ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ.ಕೊರೊನಾ ಸೋಂಕು ನಿಯಂತ್ರಣ ಮೀರಿ ಹಬ್ಬುತ್ತಿರುವ ಹಿನ್ನೆಲೆಯಲ್ಲಿಲಾಕ್‌ಡೌನ್‌ ಮುಂದುವರಿಯುವುದು ಬಹುತೇಕ ಖಚಿತವಾಗಿದ್ದರೂ, ಅದರ ಸ್ವರೂಪ ಅಲ್ಪ ಬದಲಾಗುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ಏ.14ರಂದು ಹಾಲಿ ಲಾಕ್‌ಡೌನ್‌ ಅವಧಿ ಅಂತ್ಯವಾಗುವ ಹಿನ್ನೆಲೆಯಲ್ಲಿಅಷ್ಟರೊಳಗೆ ಪ್ರಧಾನಿ ಮೋದಿ ಅವರು ಮಂಗಳವಾರದ ಒಳಗಾಗಿ ಮತ್ತೊಮ್ಮೆ ದೇಶದ ಜನರನ್ನುದ್ದೇಶಿಸಿ ಮಾತನಾಡಿ, ಈ ಬಗ್ಗೆ ಅಧಿಕೃತ ಘೋಷಣೆ ಹೊರಡಿಸಲಿದ್ದಾರೆ ಎಂದು ತಿಳಿದುಬಂದಿದೆ.

ಒಡಿಶಾ ಬಳಿಕ ಪಂಜಾಬ್‌ ಲಾಕ್‌ಡೌನ್‌ ಅವಧಿಯನ್ನು ಮೇ. 1ರವರೆಗೂ ವಿಸ್ತರಿಸಿದೆ. ಆ ಮೂಲಕ ಲಾಕ್‌ಡೌನ್‌ ವಿಸ್ತರಣೆ ಘೋಷಿಸಿದ ಎರಡನೇ ರಾಜ್ಯವೆನಿಸಿದೆ. ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ಸಹ ಲಾಕ್‌ಡೌನ್‌ ಮುಂದುವರಿಸಲು ಒಲವು ವ್ಯಕ್ತಪಡಿಸಿವೆ.

ಲಾಕ್‌ಡೌನ್‌ ನಡುವೆಯೇ ದೇಶಾದ್ಯಂತ 10 ದಿನಗಳಲ್ಲಿಯೇ ಇಪಿಎಫ್‌ ಸದಸ್ಯರು 280 ಕೋಟಿ ರೂ. ಮೊತ್ತವನ್ನು ಕ್ಲೇಮ್‌ ಮಾಡಿಕೊಂಡಿದ್ದಾರೆ. ಲಾಕ್‌ಡೌನ್‌ ಅವಧಿಯಲ್ಲಿ1.37 ಲಕ್ಷ ಇಪಿಎಫ್‌ ಸದಸ್ಯರು ತಮ್ಮ ಖಾತೆಯಲ್ಲಿನ ಹಣವನ್ನು ವಿತ್‌ಡ್ರಾ ಮಾಡಿಕೊಂಡಿದ್ದಾರೆ.

 

ಎನ್‌ಪಿಎಸ್‌ ವಿತ್‌ಡ್ರಾಗೆ ಅವಕಾಶ

 

ಕೋವಿಡ್‌-19 ಚಿಕಿತ್ಸೆ ಸಂಬಂಧಿ ವೆಚ್ಚಗಳಿಗಾಗಿ ರಾಷ್ಟ್ರೀಯ ಪಿಂಚಣಿ ಯೋಜನೆ(ಎನ್‌ಪಿಎಸ್‌) ಸದಸ್ಯರಿಗೂ ಭಾಗಶಃ ಹಣ ಹಿಂತೆಗೆತಕ್ಕೆ ಕೇಂದ್ರ ಸರಕಾರ ಅನುಮತಿ ನೀಡಿದೆ.

ಭಾರತದಲ್ಲಿ ಕೊರೊನಾ ವೈರಸ್‌ ಸೋಂಕು ಹರಡುವಿಕೆಯ ವೇಗ ಪ್ರಾಧಿಕಾರಗಳ ನಡುವೆ ಅರಿವಿನ ಜಿಜ್ಞಾಸೆ ಸೃಷ್ಟಿಸಿದೆ. ವಿಶ್ವ ಆರೋಗ್ಯ ಸಂಸ್ಥೆ ಭಾರತದಲ್ಲಿಇನ್ನೂ ಕ್ಲಸ್ಟರ್‌ ಹಂತದಲ್ಲಿಯೇ ಇದ್ದು, ಸಮುದಾಯಕ್ಕೆ ಹರಡಿಲ್ಲ ಎಂದು ಹೇಳಿದೆ. ಆದರೆ, ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್‌) ಮೂರನೇ ಹಂತಕ್ಕೆ ತಲುಪಿರುವ ಸಾಧ್ಯತೆ ಇದೆ ಎಂದು ಸಂಶಯ ವ್ಯಕ್ತಪಡಿಸಿದೆ.

 

ಕೊರೊನಾ ಮೀಟರ್‌

 

ರಾಜ್ಯ : ಸೋಂಕಿತರು-207 ಸಾವು-06

ದೇಶ: ಸೋಂಕಿತರು- 7062 ಸಾವು-244

ವಿಶ್ವ:ಸೋಂಕಿತರು- 16,32,577 ಸಾವು-97,583

Related posts

9 ಜಿಲ್ಲೆಗಳಲ್ಲಿ ಭಾರಿ ಮಳೆ ಸಾಧ್ಯತೆ

₹21,246 ಕೋಟಿ ಬಜೆಟ್ ಪೂರಕ ಬೇಡಿಕೆ ಮಂಡಿಸಿದ ವಿತ್ತ ಸಚಿವೆ

Times fo Deenabandhu

ಮದುವೆ ಬೆನ್ನಲ್ಲೇ ಪತಿ ಆತ್ಮಹತ್ಯೆ: ಶಾಪಿಂಗ್​ ಮಾಲ್​ನ ಮೂರನೇ ಮಹಡಿಯಿಂದ ಜಿಗಿದ ನವವಧು

Times fo Deenabandhu