Times of Deenabandhu
  • Home
  • ಪ್ರಧಾನ ಸುದ್ದಿ
  • ನಂಜನಗೂಡಿನಲ್ಲಿ ನಂಜು ಹರಡಿದ ಜ್ಯುಬಿಲಿಯೆಂಟ್ ಕಾರ್ಖಾನೆ ವಿರುದ್ಧ ಕ್ರಮ: ಸೋಮಣ್ಣ
ಪ್ರಧಾನ ಸುದ್ದಿ ಮುಖ್ಯಾಂಶಗಳು

ನಂಜನಗೂಡಿನಲ್ಲಿ ನಂಜು ಹರಡಿದ ಜ್ಯುಬಿಲಿಯೆಂಟ್ ಕಾರ್ಖಾನೆ ವಿರುದ್ಧ ಕ್ರಮ: ಸೋಮಣ್ಣ

ಮೈಸೂರು: ಸುಮಾರು 26 ಜನರಿಗೆ ಕೊರೊನಾ ಸೋಂಕು ತಗುಲಲು ಕಾರಣವಾಗಿದೆ ಎನ್ನಲಾದ ನಂಜನಗೂಡಿನ ಜುಬಿಲಿಯೆಂಟ್ ಕಂಪನಿ ವಿರುದ್ಧ ಕಾನೂನು ರೀತಿಯಲ್ಲಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ತಿಳಿಸಿದರು.

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಸುದೀರ್ಘವಾಗಿ ಈ ಕುರಿತು ಚರ್ಚೆ ನಡೆಸಲಾಗಿದೆ. ನಾನು ಹಾಗೂ ಆರೋಗ್ಯ ಸಚಿವ ಶ್ರೀರಾಮುಲು ಅವರು ಮುಖ್ಯಮಂತ್ರಿಗೆ ಮಾಹಿತಿ ನೀಡಿದ್ದೇವೆ. ಈಗ ಅಲ್ಲಿನ 1500 ನೌಕರರ ರಕ್ಷಣೆ ಹಾಗೂ ಸೋಂಕು ಹರಡದಂತೆ ತಡೆಯುವುದು ಸರಕಾರದ ಮೊದಲ ಕರ್ತವ್ಯ ಆಗಿದೆ. ಬಳಿಕ ಕಾನೂನು ಚೌಕಟಿನೊಳಗೆ ಕ್ರಮ ತೆಗೆದುಕೊಳ್ಳುವುದರಲ್ಲಿ ಯಾವುದೇ ಅನುಮಾನ ಇಲ್ಲ ಎಂದು ಸೋಮಣ್ಣ ಹೇಳಿದರು.

‘ಇಷ್ಟೊತ್ತಿಗೆ ಜನಗಣಮನ ಹಾಡಿರುತ್ತಿದ್ದರು..!’

ನಾನು ಅಂದು ಜುಬಿಲಿಯಂಟ್ ಕಂಪನಿಗೆ ಭೇಟಿ ನೀಡಿದಾಗ ನೀವ್ಯಾರೂ ಬರಲಿಲ್ಲ. ನಾನು ಪ್ರಾಣದ ಹಂಗು ತೊರೆದು ಹೋಗಿದ್ದೆ. ಒಂದು ವೇಳೆ ನನಗೆ ಏನಾದರೂ ಆಗಿದ್ದರೆ, ನೀವೆಲ್ಲ ಇಷ್ಟು ಹೊತ್ತಿಗೆ ಜನಗಣಮನ ಹಾಡಿರುತ್ತಿದ್ದೀರಿ ಎಂದು ಸಚಿವ ಸೋಮಣ್ಣ ಮಾಧ್ಯಮದವರ ಮುಂದೆ ಹಾಸ್ಯದ ಚಟಾಕಿ ಹಾರಿಸಿದರು.

ಇದೇ ವಿಚಾರವಾಗಿ ಬುಧವಾರವಷ್ಟೇ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದ ನಂಜನಗೂಡು ಶಾಸಕ ಹರ್ಷವರ್ಧನ್, ಕೊರೊನಾ ಹಾಟ್‌ ಸ್ಪಾಟ್‌ ಎಂದೇ ಬಿಂಬಿತವಾದ ಜುಬಿಲಿಯೆಂಟ್‌ ಕಾರ್ಖಾನೆಯನ್ನು ಪುನರಾರಂಭಿಸುವಂತೆ ಒತ್ತಡ ಬರುತ್ತಿದೆ. ಒತ್ತಡ ಹಾಕುತ್ತಿರುವವರು ಎಲ್ಲ ದೊಡ್ಡವರೇ ಎಂದು ಸ್ಪೋಟಕ ಮಾಹಿತಿಯನ್ನು ಬಿಚ್ಚಿಟ್ಟಿದ್ದರು.

ಕಾರ್ಖಾನೆ ಪುನಾರಂಭಕ್ಕೆ ಒತ್ತಡ ಹಾಕುತ್ತಿರುವವರಲ್ಲಿ ರಾಜಕಾರಣಿಗಳು, ಉದ್ಯಮಿಗಳಿದ್ದಾರೆ. ಆದ್ರೆ, ನಾನು ಯಾರ ಒತ್ತಡಕ್ಕೂ ಮಣಿಯುವ ಪ್ರಮೇಯವೇ ಇಲ್ಲ ಎಂದಿದ್ದ ಹರ್ಷವರ್ಧನ್, ಸದ್ಯದ ಪರಿಸ್ಥಿತಿಯಲ್ಲಿ ಕಾರ್ಖಾನೆ ನಡೆಸುವುದು ಬೇಡ ಎಂದು ಹೇಳಿದರು.

 

Related posts

ಸಿಗರೇಟು ಎಳೆಯಲು ಬೆಂಕಿ ಪೊಟ್ಟಣ ಕೇಳಿ ಮರೆಯಾಗುತ್ತದೆಯಂತೆ ಆ ಬ್ರಿಟಿಷ್ ವ್ಯಕ್ತಿಯ ಪ್ರೇತಾತ್ಮ…!

Times fo Deenabandhu

ಅಂತರ ಜಿಲ್ಲಾ ಸಂಚಾರ ನಿರ್ಬಂಧಕ್ಕೆ ಎಚ್‌.ಡಿ. ಕುಮಾರಸ್ವಾಮಿ ಒತ್ತಾಯ!

ಸಚಿವ ಸಂಪುಟ ಸಸ್ಪೆನ್ಸ್‌: ಭಾನುವಾರವೇ ವಿಸ್ತರಣೆಗೆ ಬಿಎಸ್‌ವೈ ರೆಡಿ

Times fo Deenabandhu