Times of Deenabandhu
  • Home
  • ಧರ್ಮ
  • ಕ್ರಿಸ್ತ ಶಿಲುಬೆಗೇರಿದ ನಾಡಲ್ಲೂ ಕೊರೊನಾ..! ಐತಿಹಾಸಿಕ ಚರ್ಚ್‌ ಕಾಯುವ ಕಾಯಕ ಮುಸ್ಲಿಮರದ್ದು..!
ಧರ್ಮ ಪ್ರಧಾನ ಸುದ್ದಿ ಮುಖ್ಯಾಂಶಗಳು

ಕ್ರಿಸ್ತ ಶಿಲುಬೆಗೇರಿದ ನಾಡಲ್ಲೂ ಕೊರೊನಾ..! ಐತಿಹಾಸಿಕ ಚರ್ಚ್‌ ಕಾಯುವ ಕಾಯಕ ಮುಸ್ಲಿಮರದ್ದು..!

ಜೆರುಸಲೇಂ: ಏಸು ಕ್ರಿಸ್ತನ ಪವಿತ್ರ ಪಾವನ ಭೂಮಿಗೂ ಕೊರೊನಾ ವೈರಸ್‌ ಎಫೆಕ್ಟ್‌ ತಟ್ಟಿದೆ. ಕ್ರಿಸ್ತ ಶಿಲುಬೆಗೇರಿದ ಸ್ಥಳದಲ್ಲಿನ ಚರ್ಚ್, ಶತಮಾನಗಳ ಬಳಿಕ ಬಾಗಿಲು ಮುಚ್ಚಿದೆ..! ಜೆರುಸಲೇಂನ ಐತಿಹಾಸಿಕ ಚರ್ಚ್‌ಗೆ ಪಾದ್ರಿಗಳು ಭಾರವಾದ ಮನಸ್ಸಿನಿಂದ ಬೀಗ ಹಾಕಿದ್ದಾರೆ. 1349ರ ಬಳಿಕ ಇದೇ ಮೊದಲ ಬಾರಿಗೆ ಜೆರುಸಲೇಂನ ಚರ್ಚ್‌ ಮುಚ್ಚಲಾಗಿದೆ. ಮಹಾಮಾರಿ ಪ್ಲೇಗ್‌ ಆರ್ಭಟಿಸುತ್ತಿದ್ದ ಆ ದಿನಗಳಲ್ಲಿ, ಜೆರುಸಲೇಂನ ಚರ್ಚ್‌ ಬಂದ್ ಮಾಡಲಾಗಿತ್ತು. ಇದಾದ ಬಳಿಕ ಇತಿಹಾಸದಲ್ಲೇ ಎರಡನೇ ಬಾರಿಗೆ ಜೆರುಸಲೇಂನ ಚರ್ಚ್‌ಗೆ ಬೀಗ ಬಿದ್ದಿದೆ. ಇಲ್ಲೊಂದು ಅಚ್ಚರಿಯ ವಿಷಯವೂ ಇದೆ..! ಚರ್ಚ್‌ಗೆ ಬೀಗ ಹಾಕಿದ್ದು, ಮುಸ್ಲಿಮರು..!
​ಮುಸ್ಲಿಮರ ಕೈಯ್ಯಲ್ಲಿ ಐತಿಹಾಸಿಕ ಚರ್ಚ್‌ನ ಕೀ..!
ಹೌದು.. ಜೆರುಸಲೇಂನ ಐತಿಹಾಸಿಕ ಚರ್ಚ್‌ನ ಬೀಗದ ಕೀ ಇದೀಗ ಮುಸ್ಲಿಮರ ಬಳಿ ಇದೆ. ಇದು ಇಂದು ನಿನ್ನೆಯ ಮಾತಲ್ಲ..! 7ನೇ ಶತಮಾನದಿಂದಲೂ ಮುಸ್ಲಿಮರೇ ಈ ಚರ್ಚ್‌ನ ಭದ್ರತೆಯ ಹೊಣೆ ಹೊತ್ತಿದ್ದಾರೆ. ಒಟ್ಟೋಮಾನ್ ತುರುಷ್ಕರ ಕಾಲದಲ್ಲಿ ಆದ ವ್ಯವಸ್ಥೆ ಇದು. ಅಂದಿನಿಂದ ಇಂದಿನವರೆಗೂ ಮುಸ್ಲಿಂ ಕುಟುಂಬವೇ ಚರ್ಚ್‌ನ ಭದ್ರತೆಯ ಹೊಣೆ ಹೊತ್ತಿದೆ. ಸುನ್ನಿ ಮುಸ್ಲಿಂ ಕುಟುಂಬ ಶತಮಾನಗಳಿಂದಲೂ ಚರ್ಚ್‌ನ ಸೆಕ್ಯುರಿಟಿ ಕಾರ್ಯ ನೋಡಿಕೊಳ್ಳುತ್ತಿದೆ.

​ಐತಿಹಾಸಿಕ ಚರ್ಚ್‌ಗೆ ಮುಸ್ಲಿಂ ವಾಚ್‌ಮನ್..!
ಮುಸ್ಲಿಮರು ಹಾಗೂ ಕ್ರೈಸ್ತರ ನಡುವಣ ಸಮರ ಇಂದು ನಿನ್ನೆಯದಲ್ಲ. ಆದ್ರೆ, ಮುಸ್ಲಿಮರು ಕ್ರೈಸ್ತರ ಚರ್ಚ್‌ ರಕ್ಷಣೆ ಮಾಡುವ ಹೊಣೆ ಹೊತ್ತಿರುವ ಸಂಗತಿ ನಿಮಗೆ ಗೊತ್ತಾ..? ಇದು ಅಚ್ಚರಿಯಾದ್ರೂ ಸತ್ಯ..! ಜೆರುಸಲೆಂನಲ್ಲಿ ಕ್ರಿಸ್ತನನ್ನು ಶಿಲುಬೆಗೇರಿಸಿದ ಸ್ಥಳದಲ್ಲಿ ನಿರ್ಮಿಸಿರುವ ಚರ್ಚ್‌ ಕಾಯುತ್ತಿರೋದು ಮುಸ್ಲಿಮರು. ಇದು ಒಂದೆರಡು ದಿನಗಳ ಕಥೆಯಲ್ಲ.. ಶತ ಶತಮಾನಗಳಿಂದಲೂ ಮುಸ್ಲಿಂ ಕುಟುಂಬವೇ ಈ ಐತಿಹಾಸಿಕ ಚರ್ಚ್‌ನ ಗೇಟ್‌ ಕೀಪರ್‌ ಆಗಿ ಕಾರ್ಯ ನಿರ್ವಹಿಸುತ್ತಿದೆ. 1187ರಿಂದಲೂ ಮುಸ್ಲಿಮರ ಕುಟುಂಬಕ್ಕೆ ಚರ್ಚ್‌ನ ರಕ್ಷಣೆಯ ಹೊಣೆ ನೀಡಲಾಗಿದ್ದು, ಅವರು ತಲೆತಲಾಂತರಗಳಿಂದ ಈ ಕಾರ್ಯವನ್ನು ಅತ್ಯಂತ ಶ್ರದ್ಧೆಯಿಂದ ನಿರ್ವಹಿಸಿಕೊಂಡು ಬರ್ತಿದ್ಧಾರೆ.

​ಚರ್ಚ್‌ ಒಳಗೆ ಪ್ರವೇಶಿಸೋದಿಲ್ಲ ಮುಸ್ಲಿಮರು..!
ಶತಮಾನಗಳಿಂದಲೂ ಕ್ರೈಸ್ತರ ಪುಣ್ಯಕ್ಷೇತ್ರವನ್ನು ಮುಸ್ಲಿಮರು ಗೇಟ್‌ ಕೀಪರ್‌ಗಳಾಗಿ ಕಾಯುತ್ತಿದ್ಧಾರೆ. ಆದ್ರೆ, ಅವರು ಚರ್ಚ್‌ ಒಳಗೆ ಮಾತ್ರ ಹೋಗೋದಿಲ್ಲವಂತೆ. ಏಕೆಂದರೆ, ಅದಕ್ಕೂ ಒಂದು ಕಥೆ ಇದೆ. ಬಹಳ ಹಿಂದೆ ಓಮರ್ ಬಿನ್ ಅಲ್ಖತಾಬ್ ಎಂಬ ಮುಸ್ಲಿಂ ವ್ಯಕ್ತಿಯನ್ನು ಜೇರುಸಲೇಂನ ಪಾದ್ರಿಗಳು ಚರ್ಚ್ ಒಳಗೆ ಬರುವಂತೆ ಆಹ್ವಾನಿಸಿದ್ದರಂತೆ. ಆದ್ರೆ, ಆತ ಅವರ ಆಹ್ವಾನವನ್ನು ನಿರಾಕರಿಸಿದ. ಏಕೆಂದರೆ, ನನ್ನ ನಂತರವೂ ಮುಸ್ಲಿಮರು ಚರ್ಚ್ ಒಳಗೆ ಪ್ರವೇಶಿಸುವಂತಾದರೆ ಅವರು ಆ ಚರ್ಚನ್ನು ಮಸೀದಿಯನ್ನಾಗಿ ಪರಿವರ್ತಿಸುತ್ತಾರೆ. ಅದು ನನಗೆ ಇಷ್ಟವಿಲ್ಲ ಎಂದಿದ್ದನಂತೆ ಆತ..! ಹೀಗಾಗಿ, ಮುಸ್ಲಿಂ ಗೇಟ್ ಕೀಪಿಂಗ್ ಮಾಡುತ್ತಿರುವವರು ತಮ್ಮ ಓಡಾಟವನ್ನು ಗೇಟ್ ಬಳಿಗೆ ಸೀಮಿತ ಮಾಡಿಕೊಂಡಿದ್ದಾರೆ. ಹಾಗೆ ನೋಡಿದ್ರೆ, ಜೆರುಸಲೇಂ, ಬೆತ್ಲಹೇಂ, ಜೆರಿಕೋ, ನಜರೆತ್ ಸೇರಿದಂತೆ 8ಕ್ಕೂ ಹೆಚ್ಚು ಐತಿಹಾಸಿಕ ಚರ್ಚ್‌ಗಳಲ್ಲಿ ಗೇಟ್‌ ಕೀಪರ್‌ಗಳಾಗಿ ಕಾರ್ಯನಿರ್ವಹಿಸುತ್ತಿರೋದು ಮುಸ್ಲಿಮರೇ..!

​ಸಹಬಾಳ್ವೆಯ ಸಂಕೇತವಿದು..!
ಹಾಗೆ ನೋಡಿದ್ರೆ ಇಂದಿಗೂ ಕೂಡಾ ಮುಸ್ಲಿಂ ಹಾಗೂ ಕ್ರೈಸ್ತನ ನಡುವಣ ಕಲಹ ನಡೆದುಕೊಂಡೇ ಬಂದಿದೆ. ಒಟ್ಟೋಮಾನ್ ತುರುಷ್ಕರ ಕಾಲದಲ್ಲಂತೂ ಈ ಕಲಹ ತಾರಕಕ್ಕೇರಿತ್ತು. ಆದ್ರೆ, ಏಸು ಕ್ರಿಸ್ತನ ಮಹಾ ಬಲಿದಾನವಾದ ಭೂಮಿಯಲ್ಲಿ ಸೌಹಾರ್ದತೆ, ಸಹಬಾಳ್ವೆಯನ್ನು ಕಾಯ್ದುಕೊಳ್ಳುವ ಉದ್ದೇಶದಿಂದ ಸಣ್ಣದೊಂದು ಹೊಂದಾಣಿಕೆ ಮಾಡಿಕೊಳ್ಳಲಾಯ್ತು. ಚರ್ಚ್‌ನ ಪಾದ್ರಿಗಳು ಹೊರಗೆ ಹೋದ ನಂತರ, ಚರ್ಚ್‌ನ ಮುಖ್ಯ ದ್ವಾರಕ್ಕೆ ಬೀಗ ಹಾಕಿ ಅದನ್ನು ತಮ್ಮ ಬಳಿ ಇಟ್ಟುಕೊಳ್ಳುವ ಜವಾಬ್ದಾರಿ ಮಾತ್ರ ಮುಸ್ಲಿಮರದ್ದು. ಈ ಹೊಂದಾಣಿಕೆಯೇ ಇಂದಿನ ಧರ್ಮಾಂಧತೆಗೆ ಒಳ್ಳೆಯ ಪಾಠ ಅಂದ್ರೆ ತಪ್ಪಾಗಲಾರದು..!

Related posts

ಮಂಗಳೂರಲ್ಲಿ ‘ಪೌರತ್ವ’ ಪ್ರತಿಭಟನೆ ಉದ್ವಿಗ್ನ; ನಾಳೆ ಮಧ್ಯರಾತ್ರಿವರೆಗೂ ಕರ್ಫ್ಯೂ ಜಾರಿ, ಕಂಡಲ್ಲಿ ಗುಂಡು ಆದೇಶ

Times fo Deenabandhu

ಪುಲ್ವಾಮಾ ದಾಳಿಯ ವರ್ಷದ ಬಳಿಕ ಮೊದಲ ಆರೋಪಿ ಬಂಧನ: ವಿಚಾರಣೆ ವೇಳೆ ಸ್ಫೋಟಕ ಮಾಹಿತಿ ಬಹಿರಂಗ

Times fo Deenabandhu

 89 ಆ್ಯಪ್‌, ಫೇಸ್‌ಬುಕ್ ಖಾತೆ ಡಿಲೀಟ್‌ ಮಾಡುವಂತೆ ಸೈನಿಕರಿಗೆ ಕಟ್ಟುನಿಟ್ಟಿನ ಸೂಚನೆ