Times of Deenabandhu
  • Home
  • ಜಿಲ್ಲೆ
  • ಮದ್ಯ ಮುಕ್ತ ರಾಜ್ಯಕ್ಕೆ ಸುವರ್ಣಾವಕಾಶ – ಶ್ರೀ ಡಾ. ಪಂಡಿತಾರಾಧ್ಯ ಶ್ರೀಗಳು
ಚಿತ್ರದುರ್ಗ ಜಿಲ್ಲೆ ಮುಖ್ಯಾಂಶಗಳು

ಮದ್ಯ ಮುಕ್ತ ರಾಜ್ಯಕ್ಕೆ ಸುವರ್ಣಾವಕಾಶ – ಶ್ರೀ ಡಾ. ಪಂಡಿತಾರಾಧ್ಯ ಶ್ರೀಗಳು

“ಸಿರಗುಪ್ಪಾದಲ್ಲಿ ಕೊರೊನಾ ಎಫೆಕ್ಟ್, ಅಬಕಾರಿ ಕಚೇರಿಗೆ ಕನ್ನ” ಎನ್ನುವ ವರದಿ ಬಂದಿದೆ. ಕೊರೊನ ತಡೆಗಟ್ಟುವ ನೆಲೆಯಲ್ಲಿ ದೇಶದ ಎಲ್ಲೆಡೆ ಮದ್ಯ ಮಾರಾಟ ನಿಲ್ಲಿಸಿರುವುದನ್ನ ಎಲ್ಲ ಮಹಿಳೆಯರೂ ಒಕ್ಕೊರಲಿನಿಂದ ಸ್ವಾಗತಿಸಿದ್ದಾರೆ. ಸಂಪೂರ್ಣ ಮದ್ಯ ನಿಷೇಧ ಮಾಡಲು ಎಲ್ಲ ಸರ್ಕಾರಗಳಿಗೆ ಇದೊಂದು ಸುವರ್ಣಾವಕಾಶ. ಕೆಲವರು ಅತಿಯಾದ ಮದ್ಯ ವ್ಯಸನಿಗಳಾಗಿ ಅದು ಸಿಗದ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡಿರುವ ವರದಿಗಳೂ ಬಂದಿವೆ. ಇದಕ್ಕೆ ಹೆದರಿಯೋ, ಅಬಕಾರಿ ಇಲಾಖೆಯಿಂದ ಬರುವ ಆದಾಯ ನಿಂತಿದೆ ಎನ್ನುವ ಕಾರಣಕ್ಕೋ ವೈದ್ಯರ ಸಲಹೆಯ ಮೇರೆಗೆ ಅಂತಹವರಿಗೆ ಮದ್ಯ ಒದಗಿಸಬೇಕೆಂದು ಕೇರಳ ಸರ್ಕಾರ ಆದೇಶ ಮಾಡಿದೆಯಂತೆ! ನಾಳೆ ಕರ್ನಾಟಕದಲ್ಲೂ ಅದಕ್ಕೆ ಬೇಡಿಕೆ ಬರಬಹುದು. ಮುಖ್ಯಮಂತ್ರಿ ಯಡಿಯೂರಪ್ಪನವರು ಮೊದಲಿನಿಂದಲೂ ಮದ್ಯ ನಿಷೇಧಿಸುವ ಚಿಂತನೆಯುಳ್ಳವರು. ಅವರು ಕುಡುಕರ ಅಥವಾ ಅವರನ್ನು ಬೆಂಬಲಿಸುವ ಜನಪ್ರತಿನಿಧಿಗಳ ಮಾತಿಗೆ ಸೊಪ್ಪು ಹಾಕದೆ ಕರ್ನಾಟಕ ರಾಜ್ಯವನ್ನು ಮದ್ಯ ಮುಕ್ತ ರಾಜ್ಯವನ್ನಾಗಿ ಮಾಡುವ ಸತ್ಸಂಕಲ್ಪ ತೆಗೆದುಕೊಳ್ಳಬೇಕು. ಇದಕ್ಕೆ ವಿಧಾನ ಸಭೆಯ ಒಳಗೆ ಪರ-ವಿರೋಧದ ಅಭಿಪ್ರಾಯಗಳು ಬರಬಹುದು. ಜನರ ಆರೋಗ್ಯ ಮುಖ್ಯವೇ ಹೊರತು ಆದಾಯವಲ್ಲ. ಇದನ್ನು ಗಮನಿಸಿ ಕರ್ನಾಟಕದ ಜನರನ್ನು ಆರೋಗ್ಯವಂತರನ್ನಾಗಿಸುವ ನಿಟ್ಟಿನಲ್ಲಿ ಕೊರೊನ ಮಾರಿಯನ್ನೇ ಕಾರಣವಾಗಿಸಿಕೊಂಡು ಮದ್ಯ ನಿಷೇಧಿಸಿ ನಮ್ಮ ತಾಯಂದಿರ ಮಾಂಗಲ್ಯ ಭಾಗ್ಯವನ್ನು ಉಳಿಸುವ ಜೊತೆಗೆ ಆ ಮನೆಯ ಬೆಳಕು ಆರದಂತೆ ನೋಡಿಕೊಳ್ಳುವ ಜನಪರ ಮುಖ್ಯಮಂತ್ರಿ ನೀವಾಗಬೇಕೆಂದು ಆಶಿಸುತ್ತೇವೆ ಶ್ರೀ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Related posts

ಬಿಗ್ ಬಾಸ್ ಮನೆಯಲ್ಲಿ ವಾಸುಕಿ ವೈಭವ್ ಬಳಸಿದ ಪದ ಬಳಕೆಗೆ ಎಲ್ಲೆಡೆ ಆಕ್ರೋಶ; ಟ್ರೋಲ್ ಪೇಜ್‌ಗಳಿಗೆ ಆಹಾರವಾದ ವಾಸುಕಿ

Times fo Deenabandhu

ಐದು ಮೀಟರ್ ಅಂತರದಲ್ಲಿರುವ ಆ ಪಂಚ ಬಾವಿಗಳ ನೀರಿನ ರುಚಿ ಬೇರೆ ಬೇರೆ ಇದೆಯಂತೆ…!

Times fo Deenabandhu

ಬಿಎಸ್‌ವೈಗೆ ಸಿದ್ದರಾಮಯ್ಯ ಸರಣಿ ಪತ್ರ, ಬಜೆಟ್‌ಗೂ ಮುನ್ನ ಬೇಡಿಕೆಯ ಸರಮಾಲೆ ಮುಂದಿಟ್ಟ ಮಾಜಿ ಸಿಎಂ

Times fo Deenabandhu