Times of Deenabandhu
ನಮ್ಮ ವಿಶೇಷ

ಕರೋನ ಗಜಲ್

ನನ್ನ ಒಡಲ ನುಡಿಗಳನ್ನು ಬಿತ್ತರಿಸಲು ಈಗ ಸಮಯ ಬಂದಿದೆ
ದಾರಿದ್ರ್ಯ ಕರೋನ ವೈರಸ್ಸಿಗೆ ಕಡಿವಾಣ ಹಾಕಲು ಈಗ ಸಮಯ ಬಂದಿದೆ

ಹಸಿದ ಒಡಲುಗಳು ಒಂದೂರಿಂದ ಮತ್ತೊಂದೂರಿಗೆ ಹೆಜ್ಜೆ ಊರಿದ್ದರು
ಕರೋನ ಸೋಂಕಿನ ಭಯದಿ ನಮ್ಮ ಗೂಡು ಬಿಟ್ಟು ಹೋಗದಿರಲು ಈಗ ಸಮಯ ಬಂದಿದೆ

ಸೋಂಕು ಆಚೆಗಟ್ಟಲು ಕೆಲ ದಿವಸದವರೆಗೆ ನಾವು ನಮ್ಮ ಮನೆಯಲ್ಲಿರೊಣ
ಎಲ್ಲೆಡೆ ಮೌನ ಸ್ತಭ್ದವಾಗಿ ನಮಗೆ ನಾವೆ ಅವಕಾಶಕೊಂಡುಕೊಳ್ಳಲು ಈಗ ಸಮಯ ಬಂದಿದೆ

ಸಮಾಜ ಸೇವೆಗೆ ಖಾಕಿ ತೊಟ್ಟ ಪೋಲಿಸ್ ರು ದಿನವಿಡಿ ಶ್ರಮವಹಿಸಿದ್ದಾರೆ
ಒಂದು ಚೂರಾದರು ಅವರ ಮಾತಿಗೆ ಮೌನದಿ ಪಾಲಿಸಲು ಈಗ ಸಮಯ ಬಂದಿದೆ

ಯುವಕ ಯುವತಿಯರೆ ಪುಟ್ಟಹಸುಳೆಗಳೆ ಇಳಿಯರೆ ಅಂಗಡಿ ಮಾಲಿಕರೆ
ಕರೋನ ವೈರಸ್ ತಡೆಯಲು “ಶಂಕರ” ತಿಳಿಹೇಳಲು ಈಗ ಸಮಯ ಬಂದಿದೆ

ಶಿವಶಂಕರ ಕಡದಿನ್ನಿ…..

 

 

Related posts

ಬಾಸ್ ತನ್ನ ಉದ್ಯೋಗಿಗಳಿಗೆ ಕೊಟ್ಟ ಕೆಂಪು ಲಕೋಟೆಯಲ್ಲಿ ಏನಿತ್ತು? ಕೇಳಿದ್ರೆ ಹೌಹಾರುತ್ತೀರಿ..

Times fo Deenabandhu

2020ರಲ್ಲಿ ಹನ್ನೆರಡು ರಾಶಿಗಳ ಫಲಾಫಲ ಹೇಗಿರಲಿದೆ ಗೊತ್ತಾ? ಇಲ್ಲಿದೆ ನೋಡಿ ವಾರ್ಷಿಕ ಭವಿಷ್ಯ

Times fo Deenabandhu

ಮಳೆದೇವರು ಕಿಗ್ಗಾದ ಋಷ್ಯಶೃಂಗನಿಗೆ ಅಷ್ಟ ಬಂದ ಮತ್ತು ಕುಂಭಾಭಿಷೇಕ ಸಂಬ್ರಮ

Times fo Deenabandhu