Times of Deenabandhu
ಆರೋಗ್ಯ ಪ್ರಧಾನ ಸುದ್ದಿ ಮುಖ್ಯಾಂಶಗಳು

ಮೈಸೂರು: ಒಂದೇ ದಿನ ಐವರಿಗೆ ಮಾಹಾಮಾರಿ ಕೊರೊನಾ ದೃಢ

ಮೈಸೂರು: ಒಂದೇ ದಿನ ಐವರಿಗೆ ಮಾಹಾಮಾರಿ ಕೊರೊನಾ ದೃಢ

ಮೈಸೂರು: ಕೊರೊನಾ ವೈರಾಣು ಸೋಂಕು ದಿನದಿಂದ ದಿನಕ್ಕೆ ಜನರಲ್ಲಿ ಆತಂಕ ಮನೆ ಮಾಡುವಂತೆ ಮಾಡಿದೆ. ಅದರಲ್ಲೂ ಮೈಸೂರಿನಲ್ಲಿ ಶನಿವಾರ ಒಂದೇ ದಿನ ಮತ್ತೆ ಐವರಲ್ಲಿ ಕೊರೊನಾ ಪಾಸಿಟಿವ್‌ ಪ್ರಕರಣ ಕಾಣಿಸಿಕೊಂಡಿದೆ. ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 82ಕ್ಕೆ ಏರಿಕೆಯಾಗಿದೆ, ಜಿಲ್ಲೆಯಲ್ಲಿ 8 ಕ್ಕೆ ಏರಿಕೆಗೊಂಡಿದೆ.

ಕಳೆದೆರಡು ದಿನಗಳ ಹಿಂದಷ್ಟೇ ನಂಜನಗೂಡಿನ ಓರ್ವ ವ್ಯಕ್ತಿಗೆ ಸೋಂಕು ಪತ್ತೆಯಾಗಿತ್ತು. ಆತನ ಜತೆ ಸಂಪರ್ಕ ಹೊಂದಿದ್ದ ಐವರಿಗೂ ಈ ಮಾಹಾಮಾರಿ ಕೊರೊನಾ ಸೋಂಕು ಕಂಡು ಬಂದಿದೆ.

ಮೊದಲಿಗೆ ಜುಬಿಲೆಂಟ್ ಕಾರ್ಖಾನೆಯ ಉದ್ಯೋಗಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ಆತ ಸಿಂಗಾಪುರದಿಂದ ಆಗಮಿಸಿದ್ದ ಸ್ನೇಹಿತನೊಂದಿಗೆ ಸಂಪರ್ಕಗೊಂಡು ಕಾರ್ಖಾನೆಗೆ ಆಗಮಿಸಿದ್ದ. ಅಲ್ಲಿ ಎಲ್ಲರ ಸಂಪರ್ಕಕ್ಕೂ ಬಂದಿದ್ದ. ಈ ಹಿನ್ನೆಲೆ ಕಾರ್ಖಾನೆಯ ಐವರಲ್ಲಿ ಕೊರೊನಾ ಸೋಂಕು ದೃಢಪಟ್ಟಿರುವುದು ಆತಂಕಕ್ಕೆ ಎಡೆಮಾಡಿಕೊಟ್ಟಿದೆ.

ಇನ್ನು ಈ ಐವರಲ್ಲಿ ನಾಲ್ವರು ನಂಜನಗೂಡು ನಿವಾಸಿಗಳಾಗಿದ್ದು, ನಂಜನಗೂಡಿನ ಪಟ್ಟಣದ ಚಾಮುಂಡಿಪುರ, ರೈಲ್ವೆ ಬಡಾವಣೆ, ರಾಮಸ್ವಾಮಿ ಬಡಾವಣೆ ನಿವಾಸಿಗಳಾಗಿದ್ದು ಮತ್ತೋರ್ವ ಹಾಗೂ ಗೋವಿಂದ ರಾಜ್ ಬಡಾವಣೆ ನಿವಾಸಿಯಾಗಿದ್ದಾರೆ. ಇದು ನಂಜನಗೂಡಿನ ವ್ಯಕ್ತಿಗಳಾದರೆ ಮತ್ತೋರ್ವ ಯರಗನಹಳ್ಳಿ ಬಡಾವಣೆ ನಿವಾಸಿಯಾಗಿದೆ. ಅಂದರೆ ಈ ನಾಲ್ವರು ಪಿ. 52ನೇ ಕೊರೊನಾ ಪಾಸಿಟಿವ್‌ ಪ್ರಕರಣದೊಂದಿಗೆ ನೇರ ಲಿಂಕ್‌ ಹೊಂದಿದ್ದಾರೆ.

ಮೊನ್ನೆಯಷ್ಟೇ ನಂಜನಗೂಡು ಕೈಗಾರಿಕಾ ಪ್ರದೇಶದಲ್ಲಿ 890 ಜನರಿಗೆ ಸ್ಟ್ಯಾಂಪ್ ಹಾಕಲಾಗಿತ್ತು. ಈಗ ಅದರ ರಿಸಲ್ಟ್‌ ಹೊರಬಂದಿದ್ದು, ಈಗ ಪಟ್ಟಣದಲ್ಲೇ‌ 5 ಮಂದಿಗೆ ಕೊರೊನಾ ದೃಢವಾಗಿದೆ. ಈಗಿನಂತೆ, ಎಲ್ಲವೂ ಸ್ಥಿರವಾಗಿವೆ.

ಈಗಾಗಲೇ ಕಾರ್ಖಾನೆಯ ಸಿಬ್ಬಂದಿಯ ಆರೋಗ್ಯದ ಮೇಲೆ ನಿಗಾ ಇಡಲಾಗಿದೆ. ಒಟ್ಟು ಜಿಲ್ಲೆಯಲ್ಲಿ 8 ಜನರಿಗೆ ಸೋಂಕು ದೃಢಪಟ್ಟಿದೆ. ಇನ್ನು ಮಧ್ಯರಾತ್ರಿಯಿಂದಲೇ ನಂಜನಗೂಡು ತಾಲೂಕನ್ನು ಸಂಪೂರ್ಣವಾಗಿ ಲಾಕ್‍ಡೌನ್ ಮಾಡಲು ಜಿಲ್ಲಾಡಳಿತ ನಿರ್ಧರಿಸಿದೆ.

ನಂಜನಗೂಡಿಗೆ ಒಳ ಮತ್ತು ಹೊರ ಹೋಗುವ ಎಲ್ಲ ವಾಹನಗಳ ಮೇಲೆ ನಿರ್ಬಂಧ ವಿಧಿಸಲಾಗಿದ್ದು, ತಾಲೂಕಿಗೆ ಸಂಪರ್ಕ ಕಲ್ಪಿಸುವ ಎಲ್ಲ ಮಾರ್ಗಗಳನ್ನು ಬಂದ್ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

Related posts

ಕೇಂದ್ರದ ಒಪ್ಪಿಗೆ ಸಿಕ್ಕರೆ ಸೇನಾ ಕಾಪ್ಟರ್‌ ತಯಾರಿಸಲು ಸಿದ್ಧ: ಎಚ್‌ಎಎಲ್‌ ಘೋಷಣೆ

ರಾಜ್ಯದ ಕೊರೊನಾ ಪರಾಮರ್ಶೆ ನಡೆಸಿದ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ

Times fo Deenabandhu

ಶಬ್ದಕ್ಕಿಂತಲೂ ಹೆಚ್ಚು ವೇಗವಾಗಿ ಅಪ್ಪಳಿಸುವ ಬ್ರಹ್ಮೋಸ್‌ ಕ್ಷಿಪಣಿ ಉಡಾವಣೆ ಯಶಸ್ವಿ

Times fo Deenabandhu