Times of Deenabandhu
  • Home
  • ಮುಖ್ಯಾಂಶಗಳು
  • ಮಾನವೀಯತೆ ಮೆರೆದ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ -ಕರೋನಾದಿಂದ ಸಮಾಜವನ್ನು ರಕ್ಷಿಸುವ ಸಲುವಾಗಿ ಒಂದು ದಿನದ ವೇತನ
ಅಂಕಣ ಮುಖ್ಯಾಂಶಗಳು ರಾಜ್ಯ

ಮಾನವೀಯತೆ ಮೆರೆದ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ -ಕರೋನಾದಿಂದ ಸಮಾಜವನ್ನು ರಕ್ಷಿಸುವ ಸಲುವಾಗಿ ಒಂದು ದಿನದ ವೇತನ

ಶಿವಮೊಗ್ಗ ಮಾರ್ಚ್ 26: ಮಾರಣಾಂತಕ ಕಾಯಿಲೆಯಾದ ಕರೋನಾದಿಂದ ಸಮಾಜವನ್ನು ರಕ್ಷಿಸುವ ಉದ್ದೇಶದಿಂದ ಸರ್ಕಾರಿ ನೌಕರರು ಒಂದು ದಿನದ ವೇತನವನ್ನು ದೇಣಿಗೆಯಾಗಿ ನೀಡಲು ಒಪ್ಪಿದ್ದಾರೆ.

ಇಂದು ಬೆಳಿಗ್ಗೆ ಸರ್ಕಾರಿನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಪತ್ರಿಕಾಗೋಷ್ಟಿಯಲ್ಲಿ ಸಂಘದ ನಿರ್ಧಾರವನ್ನು ಪ್ರಕಟಿಸಿ, ಸರ್ಕಾರಿ ನೌಕರರು ಮಾರ್ಚ್ ಅಥವಾ ಏಪ್ರಿಲ್ ತಿಂಗಳ ವೇತನದಲ್ಲಿ ಒಂದು ದಿನದ ವೇತನವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ದೇಣಿಗೆಯಾಗಿನೀಡಲು ಒಪ್ಪಿದ್ದಾರೆ. ಇದು ಸಂತೋಷದ ವಿಷಯವಾಗಿದೆ ಎಂದರು.

ಸರ್ಕಾರಿ ನೌಕರರು ಸುಮಾರು 6 ಲಕ್ಷ ಇರಬಹುದು. ಅವರ ಒಂದು ದಿನದ ವೇತನ ಒಟ್ಟು 200 ಕೋಟಿ ರೂ. ಆಗುತ್ತದೆ. ಈ ಹಣವನ್ನು ಕರೋನಾ ವೈರಸ್ ಪೀಡಿತರ ಚಿಕಿತ್ಸೆಗೆ ಹಾಗೂ ವೈರಾಣು ತಡೆಯಲು ಅಗತ್ಯ ಸೇವೆ ಅಡಿಯಲ್ಲಿ ಹಗಲಿರುಳು ಸೇವೆ ಸಲ್ಲಿಸುತ್ತಿರುವ ಆರೋಗ್ಯ, ಪೊಲೀಸ್ ಇನ್ನಿತರ ಇಲಾಖೆ ನೌಕರರಿಗೆ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವವರಿಗೆ ಮತ್ತು ಸುರಕ್ಷತಾ ಸಾಮಾಗ್ರಿಗಳನ್ನು ಖರೀದಿಸಲು ಬಳಸುವಂತೆ ಮಾಡಿಕೊಳ್ಳಲಾಗುವುದು ಎಂದರು.

ಕರೋನಾ ಇಂದು ಜಗತ್ತನ್ನು ತಲ್ಲಣಗೊಳಿಸುತ್ತಿದೆ. ಭಾರತ ದೇಶ ಹಾಗೂ ಕರ್ನಾಟಕ ರಾಜ್ಯವೂ ಇದರಿಂದ ಹೊರತಾಗಿಲ್ಲ. ಪೊಲೀಸ್ ಹಾಗೂ ಆರೋಗ್ಯ, ಗ್ರಾಮೀಣಾಭಿವೃದ್ದಿ ಇಲಾಖೆ ಮತ್ತಿತರ ಇಲಾಖೆಯ ಸರ್ಕಾರಿ ನೌಕರರು ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜ್ಯದ ಜನರು ಕೂಡ ಇವರನ್ನು ಅಭಿನಂದಿಸುತ್ತಿದ್ದಾರೆ. ಇದು ಹೆಮ್ಮೆಯ ವಿಷಯವಾಗಿದೆ. ಸರ್ಕಾರಿ ನೌಕರರ ಈ ಸಹಾಯ ಇತರೆ ಎಲ್ಲ ಸಂಘ ಸಂಸ್ಥೆಗಳಿಗೆ ಮಾದರಿಯಾಗಬೇಕಾಗಿದೆ ಎಂದರು.

ಇದಲ್ಲದೇ ಕಳೆದ 15 ದಿನಗಳಿಂದ ರಾಜ್ಯದ ಆರ್ಥಿಕ ಪರಿಸ್ಥಿತಿ ಮೇಲೆ ಒತ್ತಡ ಬೀರಿದೆ. ದಿನಗೂಲಿ ನೌಕರರು, ರಸ್ತೆ ಬದಿ ವ್ಯಾಪಾರಿಗಳು, ಬಡವರು, ತುಂಬಾ ಸಂಕಷ್ಟಪಡುತ್ತಿದ್ದಾರೆ. ಸರ್ಕಾರಿ ನೌಕರರು ಈ ಬಗ್ಗೆ ಕೂಡ ಸಹಾಯಹಸ್ತ ಚಾಚಬೇಕಾಗಿದೆ ಎಂದರು.

ಇಂತಹ ಸಮಯದಲ್ಲಿ ಉದ್ಯಮಿಗಳು, ವ್ಯಾಪಾರಸ್ಥರು, ವಾಣಿಜ್ಯೋದ್ಯಮಿಗಳು, ಕೈಗಾರಿಕೊದ್ಯಮಿಗಳು, ದಾನಿಗಳು ಸಹಾಯಹಸ್ತ ನೀಡಬೇಕು, ಎಲ್ಲರೂ ಒಟ್ಟಾಗಿ ಕೋವಿಡ್-19 ನ್ನು ನಿಯಂತ್ರಣಗೊಳಿಸಬೇಕು. ಸರ್ಕಾರ ತೆಗೆದುಕೊಳ್ಳುವ ಕಾಲಕಾಲದ ನಿರ್ಣಯಗಳಿಗೆ ಸಹಕಾರ ನೀಡಬೇಕು ಎಂದ ಅವರು, ದೇಣಿಗೆ ನೀಡುವವರಿಗೆ ಆದಾಯ ತೆರಿಗೆ ಕಾಯ್ದೆ 80(ಜಿ-2) ಪ್ರಕಾರ ತೆರಿಗೆ ವಿನಾಯಿತಿಯೂ ಇರುತ್ತದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಸಂಘದ ಪದಾಧಿಕಾರಿಗಳಾದ ಐ.ಪಿ.ಶಾಂತರಾಜು, ಆರ್.ಮೋಹನ್ ಕುಮಾರ್, ರುದ್ರಪ್ಪ, ರಘು, ಕೃಷ್ಣಮೂರ್ತಿ, ಮಾರುತಿ ಇದ್ದರು.

 

 

 

 

 

 

 

 

 

 

Related posts

ಶಿವಮೊಗ್ಗ ರೈಲ್ವೇ ಸಂಪರ್ಕ ಇನ್ನಷ್ಟು ಅಭಿವೃದ್ಧಿಗೆ ಕ್ರಮ: ಸಂಸದ ಬಿ.ವೈ.ರಾಘವೇಂದ್ರ

Times fo Deenabandhu

ಮುಗಿಯಿತು ಉಪಚುನಾವಣೆ ಮತದಾನ: ಇನ್ನೇನಿದ್ದರೂ ಫಲಿತಾಂಶದತ್ತ ಚಿತ್ತ !

Times fo Deenabandhu

ಲಸಿಕೆ ಇಲ್ಲದೇ ಕೊರೊನಾ ಹರಡುವಿಕೆ ತಡೆಗಟ್ಟಬಲ್ಲ ಔಷಧಿ ರೆಡಿ: ಚೀನಾ