Times of Deenabandhu
  • Home
  • ಜಿಲ್ಲೆ
  • ಕ್ವಾರಂಟೈನ್ ಆದೇಶ ಉಲ್ಲಂಘಿಸಿದ ಇಬ್ಬರ ವಿರುದ್ಧ ಪ್ರಕರಣ ದಾಖಲು- ಪೊಲೀಸ್ ವರಿಷ್ಟಾಧಿಕಾರಿ ಕೆ.ಎಂ.ಶಾಂತರಾಜು
ಜಿಲ್ಲೆ ಶಿವಮೊಗ್ಗ

ಕ್ವಾರಂಟೈನ್ ಆದೇಶ ಉಲ್ಲಂಘಿಸಿದ ಇಬ್ಬರ ವಿರುದ್ಧ ಪ್ರಕರಣ ದಾಖಲು- ಪೊಲೀಸ್ ವರಿಷ್ಟಾಧಿಕಾರಿ ಕೆ.ಎಂ.ಶಾಂತರಾಜು

ಶಿವಮೊಗ್ಗ, ಮಾರ್ಚ್ 26: ಮನೆಯಲ್ಲಿ ಸ್ವಯಂ ಬಂಧನ (ಹೋಂ ಕ್ವಾರೆಂಟೈನ್) ಇರಬೇಕೆಂಬ ಆದೇಶವನ್ನು ಉಲ್ಲಂಘಿಸಿದ್ದ ಇಬ್ಬರ ವಿರುದ್ಧ ಪೊಲೀಸ್ ಪ್ರಕರಣ ದಾಖಲಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಕೆ.ಎಂ.ಶಾಂತರಾಜು ತಿಳಿಸಿದ್ದಾರೆ.

ಮಾರ್ಚ್ 12ರಂದು ಅಬುದಾಬಿಯಿಂದ ಸ್ವ-ಗ್ರಾಮ ತೀರ್ಥಹಳ್ಳಿ ತಾಲ್ಲೂಕಿನ ಮಾಳೂರಿಗೆ ಹಿಂದಿರುಗಿ ಬಂದಿದ್ದ  ಮಹಮ್ಮದ್ ಸುಯಬ್ ಖಾನ್ ಬಿನ್ ಮಸ್ತಾನ್ ಖಾನ್ 30 ವರ್ಷ  ಹಾಗೂ  ಮಹಮ್ಮದ್ ಹುಸೇನ್ ಖಾನ್ ಬಿನ್ ಮಸ್ತಾನ್ ಖಾನ್ 28 ವರ್ಷ ಇವರು ಆದೇಶವನ್ನು ಉಲ್ಲಂಘಿಸಿ, ಮನೆಯಿಂದ ಹೊರಬಂದು ಸುತ್ತಾಡಿರುವುದು ಮತ್ತು ಕ್ರಿಕೆಟ್ ಆಡಿರುವುದು ಕಂಡು ಬಂದಿದೆ.

ವೈರಾಣು ಬಾಧಿತ ದೇಶದಿಂದ ಬಂದಿರುವವರೆಂದು ತಿಳಿದಿದ್ದರೂ ಸಾರ್ವಜನಿಕ ಪ್ರದೇಶದಲ್ಲಿ ಓಡಾಡಿ ಸಾರ್ವಜನಿಕರೊಂದಿಗೆ ಬೆರೆಯಬಾರದೆಂಬ ಜಿಲ್ಲಾಧಿಕಾರಿಗಳ ಆದೇಶವನ್ನು ಉಲ್ಲಂಘನೆ ಮಾಡಿರುತ್ತಾರೆ ಹಾಗೂ ಗೃಹ ಸ್ವಯಂ ಬಂಧನದಿಂದ ಹೊರಗೆ ಬಿಡಬಾರದೆಂದು ತಿಳಿದಿದ್ದರೂ ಇವರು ಹೊರಗೆ ಹೋಗಲು ಅವಕಾಶ ನೀಡಿದ ಪೆÇೀಷಕರ ವಿರುದ್ದ ಮಾಳೂರು ಪೆÇಲೀಸ್ ಠಾಣೆ ಕಲಂ 188, 269, 270, 271 ಐಪಿಸಿ ರೀತ್ಯಾ ಪ್ರಕರಣ  ದಾಖಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

 

Related posts

ನಮ್ಮ ಯುವ ಸಮೂಹ ತಂತ್ರಜ್ಞಾನ ಕ್ಷೇತ್ರದ ವಿಫುಲ ಸದಾವಕಾಶಗಳನ್ನು ಬಳಸಿಕೊಳ್ಳಿ

Times fo Deenabandhu

ಮ್ಯಾನೇಮ್ಮೆಂಟ್ ಫೆಸ್ಟ್ ’ರೀವಿಲೇಷನ್-೨೦೨೦’ಯ ಉದ್ಘಾಟನಾ ಸಮಾರಂಭ

Times fo Deenabandhu

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಭೂ ಪರಭಾರೆ ನಿಷೇಧ ಕಾಯ್ದೆ ಧಕ್ಕೆಯಾಗದಂತೆ ಅಧಿವೇಶನದಲ್ಲಿ ಮಂಡಿಸಿ

Times fo Deenabandhu