Times of Deenabandhu
  • Home
  • ಜಿಲ್ಲೆ
  • ಶಿವಮೊಗ್ಗದಲ್ಲಿ ಪತ್ರಿಕಾ ಗೋಷ್ಠಿಗಳು ಕೂಡ ಅತ್ಯಂತ ಎಚ್ಚರಿಕೆಯಿಂದ ನಡೆಯುತ್ತಿವೆ
ಜಿಲ್ಲೆ ಶಿವಮೊಗ್ಗ

ಶಿವಮೊಗ್ಗದಲ್ಲಿ ಪತ್ರಿಕಾ ಗೋಷ್ಠಿಗಳು ಕೂಡ ಅತ್ಯಂತ ಎಚ್ಚರಿಕೆಯಿಂದ ನಡೆಯುತ್ತಿವೆ

ಶಿವಮೊಗ್ಗ: ಅಗತ್ಯ  ಸೇವೆಯಲ್ಲಿ ಬರುವ ಪತ್ರಿಕಾ ಗೋಷ್ಠಿಗಳು ಕೂಡ ಅತ್ಯಂತ ಎಚ್ಚರಿಕೆಯಿಂದ ನಡೆಯುತ್ತಿವೆ.

ಇಂದು ರಾಜ್ಯ ಸರ್ಕಾರಿನೌಕರರ ಸಂಘದಿಂದ ಪ್ರೆಸ್ ಟ್ರಸ್ಟ್‍ನಲ್ಲಿ ಪತ್ರಿಕಾಗೋಷ್ಠಿ ನಡೆಯಿತು. ಪ್ರತಿಯೊಬ್ಬರಿಗೂ ಮಾಸ್ಕ್ ವಿತರಿಸಲಾಯಿತು. ಜೊತೆಗೆ ಕುಳಿತುಕೊಳ್ಳುವ ಕುರ್ಚಿಗಳ ಅಂತರ ಕಾಪಾಡಲಾಗಿತ್ತು. ಪತ್ರಿಕಾಗೋಷ್ಟಿ ಮಾಡುವವರೂ ಕೂಡ ಮಾಸ್ಕ್ ಧರಿಸುವಂತೆ ಸೂಚನೆ ನೀಡಲಾಗಿತ್ತು.

ಎಲ್ಲ ಪತ್ರಕರ್ತರಿಗೂ ಕೈ ತೊಳೆದುಕೊಳ್ಳಲು ಸ್ಯಾನಿಟೈಸರ್ ನೀಡಲಾಗಿತ್ತು. ಅಂತರವನ್ನು ಕಡ್ಡಾಯವಾಗಿ ಪರಿಪಾಲಿಸುವಂತೆ ಮಾಡಲಾಗಿತ್ತು.

ಹಾಗೆಯೇ ಪತ್ರಕರ್ತರಿಗೆ ನಗರದಲ್ಲಿ ಸಂಚರಿಸಲು ಅನುಕೂಲವಾಗುವಂತೆ ಗುರುತಿನ ಚೀಟಿ ನೀಡಲು ಕೂಡ ಕ್ರಮ ಕೈಗೊಳ್ಳಲಾಯಿತು. ಇದೇ ಸಂದರ್ಭದಲ್ಲಿ ಪತ್ರಿಕಾ ಸಂಪಾದಕರು ಸಭೆ ಸೇರಿ ಕೆಲವು ದಿನಗಳಮಟ್ಟಿಗೆ ಪತ್ರಿಕೆಯನ್ನು ಮುದ್ರಣಗೊಳಿಸದಿರುವಂತೆ ನಿರ್ಧಾರ ತೆಗೆದುಕೊಳ್ಳುವ ಬಗ್ಗೆ ಚಿಂತನೆ ನಡೆಸಿದರು.

ಪತ್ರಿಕೆ ವಿತರಕರು, ಡಿಟಿಪಿ ಆಪರೇಟರ್ಸ್, ವರದಿಗಾರರು, ಛಾಯಾಗ್ರಾಹಕರು, ಪ್ರಿಂಟರ್ಸ್ ಇಂತಹ ಸಂದರ್ಭದಲ್ಲಿ ಹೇಗೆ ಕಾರ್ಯನಿರ್ವಹಿಸಬೇಕು, ಮುಂದಿನ ನಿರ್ಧಾರಗಳನ್ನು ಹೇಗೆ ತೆಗೆದುಕೊಳ್ಳಬೇಕು ಎಂಬ ಬಗ್ಗೆಯೂ ಚರ್ಚಿಸಲಾಯಿತು ಎಂದು ತಿಳಿದುಬಂದಿದೆ.

ಒಟ್ಟಾರೆ ಮಾಧ್ಯಮ ರಂಗವೂ ಕೂಡ ಇಂತಹ ಸಂದರ್ಭದಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುವುದು ಅನಿವಾರ್ಯವಾಗುತ್ತದೆ. ಹಾಗಾಗಿ ಎಲ್ಲರೂ ಎಚ್ಚರಿಕೆಯಿಂದ ಇಂತಹ ಕಠಿಣ ಸಂದರ್ಭವನ್ನು ಎದುರಿಸಬೇಕು ಎಂದು ಪತ್ರಕರ್ತರು ಪರಸ್ಪರ ಮಾತಾಡಿಕೊಂಡರು.

 

Related posts

ಮಡಿವಾಳ ಸಮಾಜದ ಹಲವು ನಿರಾಶ್ರಿತ ಕುಟುಂಬದವರಿಗೆ ದವಸ-ಧಾನ್ಯಗಳನ್ನು ವಿತರಿಸಿದ ಡಾ. ಶಿವಮೂರ್ತಿ ಮುರುಘಾ ಶರಣರು

Times fo Deenabandhu

ಅನಧಿಕೃತ ಶಾಲೆಗೆ ದಾಖಲಿಸಿರುವ ಮಕ್ಕಳ ಪೋಷಕರಿಗೆ ಸೂಚನೆ

Times fo Deenabandhu

ಬಿಎಸ್‌ಎನ್‌ಎಲ್ ಕಛೇರಿಯಲ್ಲಿ ನೌಕರರಿಗೆ ಸ್ವಯಂ ನಿವೃತ್ತಿ ಕಾರ್ಯಕ್ರಮ

Times fo Deenabandhu