Times of Deenabandhu
ಪ್ರಧಾನ ಸುದ್ದಿ ಮುಖ್ಯಾಂಶಗಳು ರಾಜ್ಯ

ಕೊರೊನಾ: ರೈಲು ಸೇವೆ ಸ್ಥಗಿತ ಏಪ್ರಿಲ್‌ 14ರವರೆಗೆ ವಿಸ್ತರಣೆ

Spread the love

ಹೊಸದಿಲ್ಲಿ: ದೇಶದಲ್ಲಿ ಕೊರೊನಾ ವೈರಸ್‌ ಕಾಣಿಸಿಕೊಳ್ಳುತ್ತಿದ್ದಂತೆ, ವೈರಾಣು ಹರಡುವುದನ್ನು ತಡೆಗಟ್ಟಲು ಭಾರತದ ಜನರ ನಿಜವಾದ ಜೀವನಾಡಿಯಾಗಿರುವ ಭಾರತೀಯ ರೈಲ್ವೆ ತನ್ನ ಪ್ರಯಾಣಿಕ ರೈಲು ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿತ್ತು. ಇದನ್ನೀಗ ಮತ್ತಷ್ಟು ವಿಸ್ತರಿಸಿದ್ದು, ಏಪ್ರಿಲ್‌ 14ರವರೆಗೆ ರೈಲು ಸೇವೆ ಇರುವುದಿಲ್ಲ ಎಂಬುದಾಗಿ ರೈಲ್ವೆ ಇಲಾಖೆ ಹೇಳಿದೆ.
ಮಂಗಳವಾರ ರಾತ್ರಿ ದೇಶವನ್ನು ಉದ್ದೇಶಿಸಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ 21 ದಿನಗಳ ಕಾಲ ದೇಶಾದ್ಯಂತ ಲಾಕ್‌ಡೌನ್‌ ಘೋಷಣೆ ಮಾಡಿದ್ದರು. ಇದರ ಬೆನ್ನಿಗೆ ಇದೀಗ ತನ್ನ ಸೇವೆಗಳನ್ನು ಏಪ್ರಿಲ್‌ ಮಧ್ಯ ಭಾಗದವರೆಗೆ ಸ್ಥಗಿತಗೊಳಿಸುತ್ತಿರುವುದಾಗಿ ರೈಲ್ವೆ ಬುಧವಾರ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಪ್ರಯಾಣಿಕ ರೈಲ್ವೆ ಸೇವೆಗಳು ಮಾತ್ರ ಸ್ಥಗಿತಗೊಳ್ಳಲಿವೆ. ಆದರೆ ಅಗತ್ಯ ಸರಕುಗಳನ್ನು ದೇಶಾದ್ಯಂತ ತಲುಪಿಸಲು ಸರಕು ಸಾಗಣೆ ರೈಲುಗಳು ಎಂದಿನಂತೆ ಓಡಾಡಈ ಅವಧಿಯಲ್ಲಿ ರೈಲ್ವೆ ಟಿಕೆಟ್‌ಗಳನ್ನು ಮುಂಗಡ ಕಾಯ್ದಿರಿಸಿದವರು ತಮ್ಮ ಟಿಕೆಟ್‌ಗಳನ್ನು ರದ್ದು ಮಾಡುವ ಅವಶ್ಯಕತೆ ಇಲ್ಲ ಎಂಬುದಾಗಿ ಐಆರ್‌ಸಿಟಿಸಿ ತಿಳಿಸಿದೆ. ಟಿಕೆಟ್‌ ಹಣ ನೇರವಾಗಿ ಬುಕಿಂಗ್‌ ಮಾಡಿದವರ ಖಾತೆಗೆ ಜಮೆಯಾಗಲಿದೆ. ಒಂದೊಮ್ಮೆ ಕ್ಯಾನ್ಸಲ್‌ ಮಾಡಿದರೆ ರದ್ದು ಶುಲ್ಕ ಕಡಿತವಾಗುವ ಸಾಧ್ಯತೆ ಇದೆ ಎಂಬುದಾಗಿ ಅದು ಎಚ್ಚರಿಕೆ ನೀಡಿದೆ.ಲಿವೆ ಎಂದು ರೈಲ್ವೆ ಇಲಾಖೆ ಹೇಳಿದೆ.


Spread the love

Related posts

ಜಂಬೂ ಸವಾರಿ ವೀಕ್ಷಿಸುತ್ತಿದ್ದವರ ಮೇಲೆ ಮುರಿದು ಬಿದ್ದ ಕೊಂಬೆ: ವ್ಯಕ್ತಿಗೆ ಗಂಭೀರ ಗಾಯ

Times fo Deenabandhu

ಮುಂದಿನ ಬಜೆಟ್ ನಲ್ಲಿ ನೀರಾವರಿ ಯೋಜನೆಗೆ ಆದ್ಯತೆ: ಬಿ.ಎಸ್ ಯಡಿಯೂರಪ್ಪ

Times fo Deenabandhu

ಟೈರ್‌ನೊಳಗೆ ಸಿಕ್ಕಿಕೊಂಡ ಶ್ವಾನದ ತಲೆ

Times fo Deenabandhu
sed facilisis Donec porta. ut mattis elit. tristique