Times of Deenabandhu
  • Home
  • ಜಿಲ್ಲೆ
  • ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಗಣ್ಯರಿಂದ ಯುಗಾದಿ ಹಬ್ಬದ ಶುಭಾಶಯಗಳು
ಚಿಕ್ಕಮಗಳೂರು ಜಿಲ್ಲೆ

ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಗಣ್ಯರಿಂದ ಯುಗಾದಿ ಹಬ್ಬದ ಶುಭಾಶಯಗಳು

ಸುಖ-ದುಃಖ ಎಲ್ಲವನ್ನೂ ಸಮಭಾವದಿಂದ ಸ್ವೀಕರಿಸಬೇಕೆಂಬ ಹಂಬಲ ನಮ್ಮ ಪರಂಪರೆಯದು. ನವ ವರುಷದ ಮೊದಲ ದಿನ ಯುಗಾದಿಯಂದು ಪ್ರಕೃತಿಯ ಕೊಡುಗೆಯನ್ನು ಗೌರವಿಸಿ, ಅಭಿನಂದಿಸಿ ಆನಂದಿಸಬೇಕೆಂದು ನಮ್ಮ ಹಿರಿಯರು ನಮಗೆ ಕಲಿಸಿಕೊಟ್ಟಿದ್ದಾರೆ. ಪ್ರಕೃತಿಯನ್ನು ಗೌರವಿಸುವುದು, ಹಿರಿಯರನ್ನು ಆರಾಧಿಸುವುದು, ಹಬ್ಬದ ದಿನಗಳನ್ನು ಆನಂದಿಸುವುದು ನಾವು ಈವರೆಗೆ ಕಲಿತಿದ್ದೇವೆ.

ಆದರೆ ಇಂದು ಕೊರೋನಾ ವೈರಸ್‍ನಂತಹ ಮಹಾಮಾರಿ ರೂಪದ ಖಾಯಿಲೆಗೆ ವಿಶ್ವವೇ ತತ್ತರಿಸಿ ಕುಳಿತಿರುವಾಗ ನಾವು ಒಬ್ಬ್ಬೊಬ್ಬರೂ ನಮ್ಮ ಜವಾಬ್ದಾರಿಯನ್ನು ಅರಿತು ನಡೆಯಲೇಬೇಕಾಗಿದೆ. ಯುಗಾದಿ ಎಲ್ಲರ ಜವಾಬ್ದಾರಿ ಹೆಚ್ಚಸಲಿ. ವೈಯಕ್ತಿಕ ಹಿತಕ್ಕಿಂತ ಸಾಮೂಹಿಕ ಆರೋಗ್ಯ ಮುಖ್ಯ ಎಂಬ ಭಾವನೆ ಎಲ್ಲರಲ್ಲಿ ಜಾಗೃತವಾಗಲಿ.

ಬೇವು ಬೆಲ್ಲದ ಹಿಂದಿರುವ ಕಾಳಜಿ, ಆರೋಗ್ಯ, ಮತ್ತು ಸಂತೋಷ ಎಲ್ಲರಿಗೂ ದೊರಕಲಿ ಸರ್ವರಿಗೂ ಶಾರ್ವರಿ ಸಂವತ್ಸರದ ಯುಗಾದಿಯ ಹಾರ್ದಿಕ ಶುಭಾಷಯಗಳು ಎಂದು ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕøತಿ ಹಾಗೂ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಮತ್ತು ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಸಿ.ಟಿ.ರವಿ ಅವರು ಜಿಲ್ಲೆಯ ಹಾಗೂ ನಾಡಿನ ಜನತೆಗೆ ಯುಗಾದಿ ಹಬ್ಬದ ಶುಭ ಕೋರಿದ್ದಾರೆ.

ವಿಧಾನ ಪರಿಷತ್ ಉಪ ಸಭಾಪತಿ ಎಸ್.ಎಲ್.ಧರ್ಮೇಗೌಡ, ಉಡುಪಿ-ಚಿಕ್ಕಮಗಳೂರು ಲೋಕಸಭಾ ಸಂಸದೆ ಕು.ಶೋಭಾ ಕರಂದ್ಲಾಜೆ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುಜಾತ ಕೃಷ್ಣಪ್ಪ, ರಾಜ್ಯಸಭಾ ಸದಸ್ಯ ಜೈರಾಮ್ ರಮೇಶ್ ಹಾಗೂ ಹಾಸನ ಲೋಕಸಭಾ ಸಂಸದ ಪ್ರಜ್ವಲ್ ರೇವಣ್ಣ, ವಿಧಾನಸಭಾ ಶಾಸಕರುಗಳಾದ ಎಂ.ಪಿ ಕುಮಾರಸ್ವಾಮಿ, ಡಿ.ಎಸ್ ಸುರೇಶ್, ಬೆಳ್ಳಿ ಪ್ರಕಾಶ್, ಟಿ.ಡಿ. ರಾಜೇಗೌಡ, ವಿಧಾನಪರಿಷತ್ ಶಾಸಕರಾದ ಎಸ್.ಎಲ್ ಭೋಜೇಗೌಡ, ಆಯನೂರು ಮಂಜುನಾಥ್, ಎಂ.ಕೆ. ಪ್ರಾಣೇಶ್ ಅವರುಗಳು ಯುಗಾದಿ ಹಬ್ಬವು ಜಿಲ್ಲೆಯ ಜನತೆಗೆ ಸುಖ, ಶಾಂತಿ ಮತ್ತು ಸಮೃದ್ಧಿ ತರಲಿ ಎಂದು ಶುಭ ಹಾರೈಸಿದ್ದಾರೆ.

 

Related posts

ಜಿಲ್ಲೆಯಲ್ಲಿ ಇಂದಿನಿಂದ ಕೋಳಿ, ಮೊಟ್ಟೆ ಮಾರಾಟ ಪುನಾರಂಭ : ಸಚಿವ ಕೆ.ಎಸ್.ಈಶ್ವರಪ್ಪ- ನಗರದ ಆಯ್ದ ವಾರ್ಡುಗಳಲ್ಲಿ ಉಚಿತವಾಗಿ ನಂದಿನಿ ಹಾಲು ವಿತರಿಸಿದ ಕೆ.ಎಸ್.ಈಶ್ವರಪ್ಪ

ಫೆ.೨೫ ರಿಂದ ೨೯ರವರೆಗೆ ಕೋಟೆ ಶ್ರೀ ಮಾರಿಕಾಂಬ ದೇವಿ ಜಾತ್ರಾ ಮಹೋತ್ಸವ

Times fo Deenabandhu

ಶಿಲೀಂಧ್ರಗಳಲ್ಲಿ ಕ್ಯಾನ್ಸರ್ ದೂರಮಾಡುವ ಔಷಧೀಯ ಗುಣವಿದೆ : ಡಾ. ಡಿ.ಜೆ ಭಟ್

Times fo Deenabandhu