Times of Deenabandhu
  • Home
  • ಜಿಲ್ಲೆ
  • ಗೋಣಿಬೀಡು ಪಿಎಸ್ಐಗ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಪ್ರತಿಭಟನೆ
ಚಿಕ್ಕಮಗಳೂರು ಜಿಲ್ಲೆ

ಗೋಣಿಬೀಡು ಪಿಎಸ್ಐಗ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಪ್ರತಿಭಟನೆ

ಮೂಡಿಗೆರೆ, ಮಾ.23: ತಾಲೂಕಿನ ಗೋಣಿಬೀಡು ಪಿಎಸ್‍ಐ ಸಾರ್ವಜನಿಕರೊಂದಿಗೆ ಸೌಜನ್ಯದಿಂದ ನಡೆದುಕೊಳ್ಳುತ್ತಿಲ್ಲ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ತಾಲೂಕಿನ ಕೆಲ ಜನಪ್ರತಿನಿಧಿಗಳು ಹಾಗೂ ವಿವಿಧ ಹಿಂದೂಪರ ಸಂಘಟನೆಗಳು ಸೋಮವಾರ ಜನ್ನಾಪುರದ ಸರ್ಕಲ್ ಬಳಿ ಪ್ರತಿಭಟನೆ ನಡೆಸಿದರು.

ಗೋಣಿಬೀಡು ಪಿಎಸ್‍ಐ ಅರ್ಜುನ್ ಅವರು ಇಲ್ಲಿಗೆ ಠಾಣಾಧಿಕಾರಿಯಾಗಿ ಬಂದ ದಿನದಿಂದ ಸಾರ್ವಜನಿಕರಿಗೆ ಅವ್ಯಾಚ್ಯ ಶಬ್ಧಗಳಿಂದ ನಿಂದಿಸುತ್ತಿದ್ದಾರೆ. ಕಳೆದ ತಿಂಗಳು ಠಾಣೆಗೆ ತೆರಳಿದ್ದ ಹಿಂದೂ ಸಂಘಟನೆ ಮುಖಂಡ ಸಾಲುಮರ ಮಹೇಶ್ ಅವರಿಗೆ ಅವ್ಯಾಚ್ಯ ಶಬ್ಧ ಬಳಸಿ ಠಾಣೆಗೆ ಬರದಂತೆ ಘೆರಾವು ಹಾಕಿದ್ದಾರೆ. ಸಾರ್ವಜನಿಕರ ವಾಹನಗಳನ್ನು ಅಡ್ಡ ಹಾಕಿ ಹೆಲ್ಮೆಟ್ ಹೊಡೆಯುವುದು, ಮೊಬೈಲ್ ಕಿತ್ತುಕೊಳ್ಳುವ ಕೆಲಸ ಮಾಡುತ್ತಿದ್ದಾರೆ. ಈ ಬಗ್ಗೆ ಕೇಸು ಹಾಕಿ ನ್ಯಾಯಾಲಯದಲ್ಲಿ ದಂಡಕಟ್ಟುತ್ತೇವೆಂದು ಹೇಳಿದರೆ ಹಲ್ಲೆಗೆ ಮುಂದಾಗುತ್ತಾರೆ.

ಕನ್ನೇಹಳ್ಳಿ ಗ್ರಾಮದ ದೇವಸ್ಥಾನದಲ್ಲಿ ಪೂಜೆ ಮಾಡುವ ಅರ್ಚಕ ಹೊಟ್ಟಿ ಪಾಡಿಗೆಂದು ಅಂಗಡಿ ಇಟ್ಟುಕೊಂಡಿದ್ದಾರೆ. ಅಲ್ಲಿಗೆ ಬಂದು ವಿಸ್ಕಿ ಮಾರುತ್ತೀಯ ಎಂದು ಗ್ರಾಮಸ್ಥರ ಸಮ್ಮುಖದಲ್ಲಿ ಬಾಟಲಿಗಳನ್ನಿಟ್ಟು ದಬ್ಬಾಳಿಕೆ ನಡೆಸಿದ್ದರು. ಇದನ್ನು ಪ್ರಶ್ನೆ ಮಾಡಿದ ಮಾಜಿ ಗ್ರಾ.ಪಂ. ಉಪಾಧ್ಯಕ್ಷ ಕನ್ನೆಹಳ್ಳಿ ಭರತ್ ವಿರುದ್ಧವೂ ಹಲ್ಲೆ ನಡೆಸಿದ್ದಾರೆ. ಸುಖಾ ಸುಮ್ಮನೇ ಜನರಿಗೆ ತೊಂದರೆ ಕೊಡುವ ಇಲ್ಲಿನ ಪಿಎಸ್‍ಐ ವಿರುದ್ಧ ಹಿರಿಯ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ತಾ.ಪಂ. ಸದಸ್ಯ ಸುಂದರ್ ಕುಮಾರ್, ಪ.ಪಂ. ಸದಸ್ಯ ಧರ್ಮಪಾಲ್, ಮಾಜಿ ಜಿ.ಪಂ. ಸದಸ್ಯ ವಿ.ಕೆ.ಶಿವೇಗೌಡ, ನಿಡಗೂಡು ಸುನೀಲ್, ಶಿವು ಗೋಣಿಬೀಡು, ಸಂದರ್ಶ್, ಕನ್ನೇಹಳ್ಳಿ ಭರತ್, ವರದ, ರೋಷನ್ ಮತ್ತಿತರರಿದ್ದರು.

 

 

 

Related posts

೮೦ನೇ ಅಖಿಲ ಭಾರತ ಅಂತರ್ ವಿಶ್ವವಿದ್ಯಾಲಯ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ಗೆ ತೆರೆ

Times fo Deenabandhu

ಡಿಸೆಂಬರ್ ೨೧ರಂದು ಜಿಲ್ಲಾ ಮಟ್ಟದ ಪ್ರಾಚ್ಯಪ್ರಜ್ಞೆ ಕಾರ್ಯಕ್ರಮ

Times fo Deenabandhu

ಅರಣ್ಯ ರಕ್ಷಣೆಯಿಂದ ಪರಿಸರ ಉಳಿಸಲು ಸಾಧ್ಯ: ಕುಮಾರ್

Times fo Deenabandhu