Times of Deenabandhu
  • Home
  • ಜಿಲ್ಲೆ
  • ಕೊರೊನಾ ವೈರಸ್ ತಡೆಗಟ್ಟಲು ತಾ.ಪಂ. ಅಧ್ಯಕ್ಷರಿಂದ ಅಧಿಕಾರಿಗಳ ಸಭೆ: ಕರೋನಾ ಬಗ್ಗೆ ನಿರ್ಲಕ್ಷ್ಯ ತೋರಿದವರ ವಿರುದ್ಧ ಕ್ರಮಕ್ಕೆ ಸೂಚನೆ
ಚಿಕ್ಕಮಗಳೂರು ಜಿಲ್ಲೆ

ಕೊರೊನಾ ವೈರಸ್ ತಡೆಗಟ್ಟಲು ತಾ.ಪಂ. ಅಧ್ಯಕ್ಷರಿಂದ ಅಧಿಕಾರಿಗಳ ಸಭೆ: ಕರೋನಾ ಬಗ್ಗೆ ನಿರ್ಲಕ್ಷ್ಯ ತೋರಿದವರ ವಿರುದ್ಧ ಕ್ರಮಕ್ಕೆ ಸೂಚನೆ

ಮೂಡಿಗೆರೆ, ಮಾ.23: ತಾಲೂಕಿನಲ್ಲಿ ಇದೂವರೆಗೂ ಕೊರೊನಾ ವೈರಸ್ ಕಂಡು ಬಂದಿಲ್ಲ. ತಾಲೂಕಿಗೆ ಒಕ್ಕರಿಸುವ ಮುನ್ನ ಎಲ್ಲಾ ಅಧಿಕಾರಿಗಳು ಹದ್ದಿನ ಕಣ್ಣಿನಂತೆ ಕಾಯಬೇಕು. ಕೊರೊನಾ ಬಗ್ಗೆ ಜನರಿಗೆ ಅರಿವು ಮೂಡಿಸಬೇಕು. ಕೊರೊನಾ ಬಗ್ಗೆ ನಿರ್ಲಕ್ಷ್ಯ ತೋರಿದವರ ವಿರುದ್ಧ ಮುಲಾಜಿಲ್ಲದೇ ಕ್ರಮ ಕೈಗೊಳ್ಳಬೇಕು ಎಂದು ತಾ.ಪಂ. ಅಧ್ಯಕ್ಷ ಕೆ.ಸಿ.ರತನ್ ಹೇಳಿದರು.

ಅವರು ಸೋಮವಾರ ಪಟ್ಟಣದ ತಾ.ಪಂ. ಸಭಾಂಗಣದಲ್ಲಿ ಕೊರೊನಾ ವೈರಸ್ ತಡೆಗಟ್ಟುವ ಹಿನ್ನಲೆಯಲ್ಲಿ ವಿವಿಧ ಇಲಾಖೆ ಹಾಗೂ ಗ್ರಾ.ಪಂ. ಪಿಡಿಒ ಗಳ ಸಭೆಯಲ್ಲಿ ಮಾತನಾಡಿದರು. ಕೊರೊನಾ ವೈರಸ್ ತಡಗಟ್ಟಲು ಆರೋಗ್ಯ ಇಲಾಖೆ ಮಾತ್ರವಲ್ಲ. ಎಲ್ಲಾ ಇಲಾಖೆ ಅಧಿಕಾರಿಗಳ ಕರ್ತವ್ಯವಾಗಿದೆ. ಇದನ್ನು ನಿಮ್ಮ ಹಳ್ಳಿಗಳಲ್ಲಿ ಪ್ರಚಾರ ಮಾಡಬೇಕು. ಪಂಚಾಯಿತಿ ವ್ಯಾಪ್ತಿಗಳಲ್ಲಿರುವ ಹೋಂಸ್ಟೇ, ರಜಾರ್ಟ್, ಹೊಟೇಲ್, ದೇವಸ್ಥಾನ, ಮಸೀದಿ, ಚರ್ಚ್‍ಗಳನ್ನು ಸಂಪೂರ್ಣ ಬಂದ್‍ಗೊಳಿಸಬೇಕು. ಜಾತ್ರೆ, ಸಂತೆ, ಸಭೆ ಸಮಾರಂಭ ನಿಲ್ಲಿಸಬೇಕು. ಮದುವೆ ಕಾರ್ಯದಲ್ಲಿ 20ಕ್ಕೂ ಅಧಿಕ ಸಂಖ್ಯೆಯಲ್ಲಿ ಸೇರದಂತೆ ಕ್ರಮ ಕೈಗೊಳ್ಳಬೇಕು. ಜನರು ಸ್ಪಂಧಿಸದಿದ್ದರೆ ಮುಲಾಜಿಲ್ಲದೇ ಕೇಸು ಹಾಕುಬೇಕೆಂದು ಸೂಚಿಸಿದರು.

ಕೊಟ್ಟಗೆಹಾರ ಮತ್ತು ಕಳಸ ಸೂಕ್ಷ್ಮ ಪ್ರದೇಶವಾಗಿದ್ದರಿಂದ ಅಲ್ಲಿ ಚೆಕ್ಕಿಂಗ್ ವ್ಯವಸ್ಥೆ ಆಗಬೇಕು. ಪಿಡಿಒ, ನೋಡಲ್ ಅಧಿಕಾರಿಗಳ ವಾಟ್ಸ್‍ಆಪ್‍ಗ್ರೂಪ್ ಮಾಡಿಕೊಂಡು ಸಂಪರ್ಕದಲ್ಲಿರಬೇಕು. ಟೈಪಿಂಗ್ ಕಷ್ಟವಾದರೆ ವಾಯ್ಸ್ ಮೆಸೇಜ್ ಮಾಡಬೇಕು. ನಿಮ್ಮ ನಂಬರ್ ಸಾರ್ವಜನಿಕರಿಗೆ ಕೊಡಬೇಕು. ಯಾವುದೇ ಮಾಹಿತಿ ಸಿಕ್ಕ ಕೂಡಲೇ ಆರೋಗ್ಯ ಇಲಾಖೆಗೆ ಮಾಹಿತಿ ನೀಡಬೇಕು. ಎಲ್ಲಾ ಪಿಡಿಒಗಳು ಕನಿಷ್ಟ 1 ತಿಂಗಳಮಟ್ಟಿಗೆ ಗ್ರಾ.ಪಂ. ವ್ಯಾಪ್ತಿಯಲ್ಲಿ ಮನೆ ಮಾಡಿಕೊಳ್ಳಬೇಕು. ಕೊರೊನಾ ವೈರಸ್ ಹರಡದಂತೆ ತಡೆಗಟ್ಟುವ ಕೆಲಸ ಮಾತ್ರ ಬಿಟ್ಟರೆ ಕಂದಾಯ ವಸೂಲಿ, ಉದ್ಯೋಗ ಖಾತ್ರಿಯಾಗಲಿ ಬೇರಾವ ಕೆಲಸವೂ ಮಾಡುವಾಗಿಲ್ಲ. ಇಟಲಿಯಲ್ಲಿ ನಿರ್ಲಕ್ಷ್ಯ ತೋರಿದ್ದರಿಂದ ಕಂಟ್ರೋಲ್ ತಪ್ಪಿ ಹೋಗಿದೆ. ಅಂತಹ ಪರಿಸ್ಥಿತಿ ಇಲ್ಲಿ ಬರಬಾರದಂತೆ ಎಚ್ಚರ ವಹಿಸಬೇಕೆಂದು ಸೂಚಿಸಿದರು.

ಡಾ. ಮದುಸೂಧನ್ ಅವರು, ಕರೊನಾ ವೈರಸ್ ತಡೆಗಟ್ಟುವ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಬಳಿಕ  ಎಲ್ಲಾ ಅಧಿಕಾರಿಗಳು ಕರೊನಾ ತಾಲೂಕಿಗೆ ಬರದಂತೆ ಎಚ್ಚರವಹಿಸಲು ಸಂಕಲ್ಪ ಮಾಡಿದರು.

ಸಭೆಯಲ್ಲಿ ತಾ.ಪಂ. ಇಒ ವೆಂ.ವೆಂಕಟೇಶ್, ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಎಲ್ಲಾ ಗ್ರಾ.ಪಂ. ಪಿಡಿಒಗಳು ಉಪಸ್ಥಿತರಿದ್ದರು.

ಹೊರ ದೇಶದಿಂದ ಬಂದವರ ಮೇಲೆ ಹದ್ದಿನ ಕಣ್ಣಿಡಬೇಕು. ತಾಲೂಕಿನಲ್ಲಿ 29 ಮಂದಿಯ ಮೇಲೆ ನಿಗಾ ವಹಿಸಿದ್ದು, ಅವರು ಹೊರಗಡೆ ತಿರುಗಾಡುತ್ತಿದ್ದಾರೆಂಬ ಮಾಹಿತಿಯಿದೆ. ಅವರ ಬಗ್ಗೆ ಹದ್ದಿನ ಕಣ್ಣಿಡಬೇಕು. ಕ್ಯಾತೆ ತೆಗೆದರೆ ಅವರನ್ನು ಮುಲಾಜಿಲ್ಲದೇ ಆಂಬುಲೆನ್ ಮೂಲಕ ಎತ್ತಾಕಿಕೊಂಡು ಹೋಗಲು ಕ್ರಮ ಕೈಗೊಳ್ಳಲಾಗುವುದು: ಡಾ.ಸುಂದರೇಶ್, ತಾಲೂಕು ಆರೋಗ್ಯಾಧಿಕಾರಿಗಳು

 

Related posts

ಮೂಡಿಗೆರೆ ಸುದ್ದಿಗಳು : ದೇವವೃಂದ ಶ್ರೀ ಪ್ರಸನ್ನ ರಾಮೇಶ್ವರ ದೇವಸ್ಥಾನದಲ್ಲಿ ಮಹಾ ಶಿವರಾತ್ರಿ ರಥೋತ್ಸವ

Times fo Deenabandhu

ಜ.೧೨ರಿಂದ ೧೪ರ ವರೆಗೆ ಆದಿವಾಸಿ ಸಾಂಸ್ಕೃತಿಕ ಸಮಾವೇಶ

Times fo Deenabandhu

ಶಿವಮೊಗ್ಗದಲ್ಲಿಯೂ ದೊಡ್ಡ ಪ್ರಮಾಣದಲ್ಲಿ ಕೈಗಾರಿಕಾ ಅಭಿವೃದ್ಧಿಗೆ ಕ್ರಮ: ಬಿಎಸ್‍ವೈ

Times fo Deenabandhu