Times of Deenabandhu
  • Home
  • ಪ್ರಧಾನ ಸುದ್ದಿ
  • 21ದಿನ ಮನೆಯಲ್ಲಿಯೇ ಇರಿ: ದೇಶದ ಜನರಲ್ಲಿ ಪ್ರಧಾನಿ ಮೋದಿ ಕೈಜೋಡಿಸಿ ಪ್ರಾರ್ಥನೆ
ದೇಶ ಪ್ರಧಾನ ಸುದ್ದಿ ಮುಖ್ಯಾಂಶಗಳು

21ದಿನ ಮನೆಯಲ್ಲಿಯೇ ಇರಿ: ದೇಶದ ಜನರಲ್ಲಿ ಪ್ರಧಾನಿ ಮೋದಿ ಕೈಜೋಡಿಸಿ ಪ್ರಾರ್ಥನೆ

Spread the love

ನವದೆಹಲಿ ಮಾರ್ಚ್24: ಮತ್ತೆ ಇಂದು ಭಾರತದ ಪ್ರಧಾನಿಯವರು ಕೊರೊನಾ ಕುರಿತು ಮಾತನಾಡಲು ಜನರ ಮುಂದೆ ಬಂದು ಇಂದು ರಾತ್ರಿ 12 ಗಂಟೆಯಿಂದ ಇಡೀ ದೇಶದಲ್ಲಿ ಲಾಕ್ ಡೌನ್ ಇರುತ್ತದೆ ಎಂದು  ಪ್ರಧಾನಿ ನರೇಂದ್ರ ಮೋದಿ ಘೋಷಣೆ  ಮಾಡಿದರು. ನಿಮ್ಮನ್ನು ಉಳಿಸುವುದು, ನಿಮ್ಮ ಪರಿವಾರವನ್ನು ಉಳಿಸುವುದು ಕೇಂದ್ರ ಮತ್ತು ಎಲ್ಲಾ ರಾಜ್ಯಗಳ ಕರ್ತವ್ಯವಾಗಿದೆ. ನಾನು ನಿಮ್ಮಲ್ಲಿ ಕೈ ಮುಗಿದು ಪ್ರಾರ್ಥನೆ ಮಾಡುತ್ತೇನೆ. ದೇಶದಲ್ಲಿ ಎಲ್ಲಿದ್ದಿರೋ ಅಲ್ಲಿಯೇ ಇರಿ.  21 ದಿನ ಮನೆ ಬಿಟ್ಟು ಹೊರ ಬರಬೇಡಿ.21 ದಿನ ನೀವು ಮನೆಯಲ್ಲಿ ಇರಲಿಲ್ಲ ಎಂದರೆ ನಿಮ್ಮ ಕುಟುಂಬ 21 ವರ್ಷ ಹಿಂದಕ್ಕೆ ಹೋಗುತ್ತದೆ. ನೀವು ಎಲ್ಲಿದ್ದಿರೋ ಅಲ್ಲಿಯೇ ಇರಿ. ದಯವಿಟ್ಟು ಮನೆಯಿಂದ ಹೊರ ಬರಬೇಡಿ ಎಂದು ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿದರು. ಹಿಂದೆ ನಿಮ್ಮ ಮುಂದೆ ನಾನು ಬಂದಿದ್ದಾಗ ಕೆಲವು ವಾರಗಳನ್ನು ನೀಡಿ ಎಂದು ಕರೆ ನೀಡಿದ್ದೆ. ಈಗ ಘೋಷಣೆ ಮಾಡಿರುವ ಲಾಕ್ ಡೌನ್ 21 ದಿನಗಳು ಜಾರಿಯಲ್ಲಿರುತ್ತದೆ. ದೇಶದ ಪ್ರತಿ ರಾಜ್ಯ, ಕೇಂದ್ರಾಡಳಿತ ಪ್ರದೇಶ, ಜಿಲ್ಲೆ, ಪಟ್ಟಣ, ಗ್ರಾಮಗಳು ಬಂದ್ ಆಗಲಿವೆ.

ನಮ್ಮ ಸಂಕಲ್ಪವನ್ನು ನಾವು ಪಾಲಿಸಬೇಕು. ನಮ್ಮ ಮಾತನ್ನು ನಾವು ಪಾಲಿಸಲೇ ಬೇಕು. ಕೈ ಜೋಡಿಸಿ ಪ್ರಾರ್ಥನೆ ಮಾಡುತ್ತೇನೆ. ದಯವಿಟ್ಟು ಮನೆಯಲ್ಲಿಯೇ ಇರಿ. ವೈದ್ಯರು ಒಂದೊಂದು ಜೀವ ಉಳಿಸಲು ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದಾರೆ.. ಒಂದು ದಿನದ ಜನತಾ ಕರ್ಫ್ಯೂಗೆ ಕರೆ ನೀಡಿದ್ದೆ. ಜನರು ಅದಕ್ಕೆ ಅಭೂತಪೂರ್ವ ಬೆಂಬಲ ನೀಡಿದ್ದಾರೆ.

ಕೊರೊನಾ ಇಡೀ ವಿಶ್ವದಾದ್ಯಂತ ಮತ್ತು ಭಾರತದಲ್ಲಿ ಹೇಗೆ ಪರಿಣಾಮ ಉಂಟು ಮಾಡಿದೆ ಎಂಬುದನ್ನು ನೀವು ಮಾಧ್ಯಮಗಳ ಮೂಲಕ ನೋಡಿದ್ದೀರಿ. ಬಲಿಷ್ಠ ರಾಷ್ಟ್ರಗಳು ಸಹ ಇದರಿಂದ ಹೊರತಾಗಿಲ್ಲ. ಇದು ಬಿರುಸಿನಿಂದ ಹರಡುತ್ತಿದೆ. ಎಷ್ಟೇ ತಯಾರಿ ಮಾಡಿಕೊಂಡರು ಹರಡುವುದನ್ನು ತಡೆಯಲು ಯಾವ ದೇಶಕ್ಕೂ ಸಾಧ್ಯವಾಗಿಲ್ಲ. ಕೊರೊನಾದಿಂದ ಪಾರಾಗಲು   ಜನರು ಮನೆಯಲ್ಲಿಯೇ ಇರಬೇಕು. ಇದನ್ನು ಬಿಟ್ಟು ಬೇರೆ ಮಾರ್ಗಗಳು ಇಲ್ಲ.

ನಿಮ್ಮ ಮನೆಯ ಬಾಗಿಲಿಗೆ ನೀವೇ ಲಕ್ಷ್ಮಣ ರೇಖೆ ಹಾಕಿಕೊಳ್ಳಿ. ಎಂದಿಗೂ ನೀವು ಅದನ್ನು ದಾಟಬೇಡಿ. ನಿಮ್ಮ ಸುರಕ್ಷತೆಗಾಗಿ, ಕೊರೊನಾ ವಿರುದ್ಧ ಹೋರಾಡಲು ಇದು ಅನಿವಾರ್ಯವಾಗಿದೆ.

ಕೊರೊನಾ 11 ದಿನದಲ್ಲಿ 1 ಲಕ್ಷ ಜನರಿಗೆ ತಲುಪಿದೆ. ಇನ್ನೂ 1 ಲಕ್ಷ ಜನರಿಗೆ ತಲುಪಲು ಮೂರು ದಿನಗಳು ಸಾಕು. ಆದ್ದರಿಂದ, soಛಿiಚಿಟ ಜisಣiಟಿಛಿಣioಟಿ ನಿಯಮ ಪಾಲನೆ ಮಾಡಿ, ದಯವಿಟ್ಟು ಮನೆಯಿಂದ ಹೊರ ಬರಬೇಡಿ ಎಂದು ಪ್ರಧಾನಿ ನರೇಂದ್ರ ಮೋದಿ ಮನವಿ.

ಮಾಧ್ಯಮದವರು, ವಾರ್ಡ್ ಬಾಯ್‌ಗಳು, ಆಂಬ್ಯುಲೆನ್ಸ್ ಡ್ರೈವರ್‌ಗಳು, ಪೌರ ಕಾರ್ಮಿಕರು ಹಗಲು-ರಾತ್ರಿ ಸೇವೆ ಮಾಡುತ್ತಿದ್ದಾರೆ. ಇದನ್ನು ಗಮನದಲ್ಲಿಟ್ಟುಕೊಂಡು ಮನೆಯಲ್ಲಿಯೇ ಇರಿ

ಅಗತ್ಯ ವಸ್ತುಗಳ ಪೂರೈಕೆ ಬಗ್ಗೆ ಆತಂಕಗೊಳ್ಳಬೇಡಿ. ಈಗಲೂ ಪೂರೈಕೆ ಮಾಡಲಾಗುತ್ತಿದೆ. ಮುಂದೆಯೂ ಪೂರೈಕೆಯನ್ನು ಮಾಡಲಾಗುತ್ತದೆ. ನಾವು ಈ ಕ್ಷಣದಿಂದಲೇ ಮನೆಯಲ್ಲಿರುವ ಸಂಕಲ್ಪ ಮಾಡೋಣ, ಸಂಕಲ್ಪವನ್ನು ಪಾಲಿಸೋಣ.. ಕೊರೊನಾ ಬಗ್ಗೆ ಮೂಡನಂಬಿಕೆಗೆ ಬಲಿಯಾಗದಿರಿ. ಆರೋಗ್ಯದಲ್ಲಿ ಏರು ಪೇರಾದರೆ ವೈದ್ಯರನ್ನು ಭೇಟಿಯಾಗಿ ಎಂದು ಮೋದಿ ಕರೆ ನೀಡಿದರು.

https://youtu.be/Mq7dPBpPqJY

 

 

 

 

 

 

 

 


Spread the love

Related posts

ಮಾತೃಭಾಷೆಯಲ್ಲೇ ಶಿಕ್ಷಣ ನೀತಿಗೆ ಪ್ರಸ್ತಾವ

Times fo Deenabandhu

ರಾಜಸ್ಥಾನದ ಶಿಕಾರ್‌ನಲ್ಲಿ ಶೀತಗಾಳಿ, ಕನಿಷ್ಠ ತಾಪಮಾನ ದಾಖಲು

Times fo Deenabandhu

ಕಾವೇರಿ ಕೂಗು’; ಸದ್ಗುರು ನೇತೃತ್ವದ ಇಶಾ ಫೌಂಡೇಷನ್ ಗೆ ಹೈಕೋರ್ಟ್ ನೋಟಿಸ್

vivaanwebservices@gmail.com
diam felis quis, leo ipsum ipsum commodo risus