Times of Deenabandhu
  • Home
  • ಜಿಲ್ಲೆ
  • ಇಂದು ನಸುಕಿನ ಜಾವ ಆಕಾಶದಿಂದ ಧರೆಗುರುಳಿದ ಧಗಧಗಿಸುವ ಬೆಂಕಿ ಉಂಡೆಗಳು ಗೋಣಿಬೀಡು ಶ್ರೀ ಮಠದಲ್ಲಿ ನಡೆದ ವಿಸ್ಮಯ ಘಟನೆ
ಜಿಲ್ಲೆ ಧರ್ಮ ಮುಖ್ಯಾಂಶಗಳು ಶಿವಮೊಗ್ಗ

ಇಂದು ನಸುಕಿನ ಜಾವ ಆಕಾಶದಿಂದ ಧರೆಗುರುಳಿದ ಧಗಧಗಿಸುವ ಬೆಂಕಿ ಉಂಡೆಗಳು ಗೋಣಿಬೀಡು ಶ್ರೀ ಮಠದಲ್ಲಿ ನಡೆದ ವಿಸ್ಮಯ ಘಟನೆ

Spread the love

ಗೋಣಿಬೀಡು ಮಾ.24: ಭದ್ರಾವತಿ ತಾಲ್ಲೂಕಿನಲ್ಲಿರುವ ಗೋಣಿಬೀಡು ಶ್ರೀ ಶೀಲಸಂಪಾದಾನಾ ಮಠದಲ್ಲಿ ಇಂದು ಬೆಳಿಗ್ಗೆ 4 ಘಂಟೆ ಸುಮಾರಿಗೆ ಯೋಗಮಂದಿರದ ಸುತ್ತ ಹಿಡಿಗಾತ್ರದ 5 ರಿಂದ 6 ಬೆಂಕಿ ಉಂಡೆಗಳು ರಭಸದಿಂದ ಆಕಾಶದಿಂದ ಧರೆಗುಳಿದಿರುವ ಆಶ್ಚರ್ಯ ಚಿಕಿತ ಘಟನೆಯೊಂದು ಜರುಗಿದೆ.

ಈ ಘಟನೆಯನ್ನು ಸ್ವತ: ಶೀಲ ಸಂಪಾದನಾ ಮಠದ ಶ್ರೀಗಳಾದ ಡಾ.ಸಿದ್ಧಲಿಂಗ ಮಹಾಸ್ವಾಮಿಗಳು ಪತ್ರದ ಮೂಲಕ ಭಕ್ತಾಧಿಗಳೊಂದಿಗೆ ಹಂಚಿಕೊಂಡಿದ್ದಾರೆ.

ಶ್ರೀ ಮಠದ ಪೂಜ್ಯರಾದ ಶ್ರೀ ಶ್ರೀ ಡಾ.ಸಿದ್ಧಲಿಂಗಮಹಾಸ್ವಾಮಿಗಳು ಮಹಾ ತಪಸ್ವಿ. ಕಳೆದ ಮೂರು ವರ್ಷಗಳ ಹಿಂದೆ ಸುಮಾರು 1000 ದಿನಗಳ ಕಾಲ ಮೌನ ಅನುಷ್ಠಾನವನ್ನು ಮಾಡಿ ಇಡೀ ಜಗತ್ತೇ ಗೋಣಿಬೀಡಿನಂತಹ ಪುಟ್ಟ ಊರಿನೆಡೆ ತಿರುಗಿ ನೋಡುವಂತೆ ಮಾಡಿದ್ದರು. ತಮ್ಮ ಮೌನ ಅನುಷ್ಠಾನ ಅಪೂರ್ಣಗೊಂಡಿದೆ. ಇನ್ನಷ್ಟು ಸಾಧನೆ ಮಾಡಬೇಕೆಂಬ ಇಚ್ಛೆಯಿಂದ ಕಳೆದ ಮೂರು ತಿಂಗಳ ಹಿಂದೆ ಮತ್ತೆ ಮೌನಕ್ಕೆ ಶರಣಾಗಿದ್ದಾರೆ. ಪುನ: ಕಠೋರವಾದ ಮೌನ ತಪಸ್ಸಿನಲ್ಲಿ ನಿರತರಾಗಿದ್ದಾರೆ. ಶ್ರೀಗಳು ತಪಸ್ಸು ಮಾಡುತ್ತಿರುವ ಯೋಗಮಂದಿರದ ಬಳಿ ಇಂದು ನಸುಕಿನಲ್ಲಿ ಈ ಚಕಿತ ಸಂಭವಿಸಿದೆ.

ಶ್ರೀಗಳ ಪತ್ರದ ಒಕ್ಕಣಿ ಈ ರೀತಿ ಇದೆ.

“ಇಂದು ಬೆಳಗಿನ ಜಾವ ನಾಲ್ಕರ ವೇಳೆಗೆ ಒಂದು ಅನುಭವವಾಯಿತು. ಅದೇನೆಂದರೆ ಮಧ್ಯರಾತ್ರಿ 1 ರಿಂದ ಬೆಳಗಿನ 4 ಘಂಟೆಯವರೆಗೆ ಧ್ಯಾನ ಮುಗಿಸಿ ಕೆಲಕಾಲ ವಿಶ್ರಮಿಸಬೇಕೆಂದು ತಯಾರಿಲ್ಲಿದ್ದ ವೇಳೆಯಲ್ಲಿ ಯೋಗ ಮಂದಿರದ ಸುತ್ತ ಹಿಡಿಗಾತ್ರದ 5 ರಿಂದ 6 ಉಂಡೆಗಳು ಆಕಾಶದಿಂದ ರಭಸದಿಂದ ನೆಲಕ್ಕೆ ಉದುರಿದವು. ಅದರ ಪ್ರಕಾಶ ಇಡೀ ಯೋಗ ಮಂದಿರವನ್ನೇ ದಹಿಸುವಂತಿತ್ತು. ಆ ಕ್ಷಣದಿಂದ ದೇಹದಲ್ಲಿ ಅನಿರೀಕ್ಷಿತ ಆಯಾಸವನ್ನು ಅನುಭವಿಸಿದೆ ಈಗ ಪರವಾಗಿಲ್ಲ. ಈ ಘಟನೆ ಮುಂಬರುವ ಅಪತ್ತಿನ ಸೂಚನೆಯೆಂದು ವಿಶ್ಲೇಷಿಸಬಹುದು. ಹಾಗಾಗಿ ಮಂತ್ರ ಧ್ಯಾನವೊಂದೇ ಇದಕ್ಕಿರುವ ಪರಿಹಾರ. ಋಷಿ ಮುನಿಗಳ ಕಾಲದಿಂದ ಇಂದಿನವರೆವಿಗೂ, ಶಿವಶರಣರಾದಿಯಾಗಿ ಮಂತ್ರದ ಶಕ್ತಿಯನ್ನು ಅಲ್ಲಗಳೆದಿಲ್ಲ. ಓಂಕಾರವೆಂಬ ಮಂತ್ರ ಈ ಸೃಷ್ಟಿಯನ್ನೇ ಆಳುತ್ತಿದೆ. ಹಾಗಾಗಿ ನಿತ್ಯ ಬದುಕಿನಲ್ಲಿ ಮಂತ್ರ ಸ್ಮರಣೆ, ಪಠಣೆಗಳ ಬಗ್ಗೆ ಗಮನಹರಿಸಬೇಕಿದೆ. ಹಿಂದೆ ಪ್ರತಿಯೊಂದಕ್ಕೂ ದೈವತ್ವವನ್ನು ನೀಡಿದರು. ನೀರು,ಗಾಳಿ, ಬೆಂಕಿ, ಪೃಥ್ವಿ, ವೈಚಾರಿಕತೆಯ ಸೋಗಿನಲ್ಲಿ ಎಲ್ಲವನ್ನೂ ಅಲ್ಲಗಳೆಯುತ್ತ ಬಂದೆವು. ಇದರಿಂದ ದೈವೀಭಾವ ನಾಶವಾಗಿ, ಸ್ವೇಚ್ಛಾಚಾರ ಹೆಚ್ಚಾಯಿತು. ಹಾಗೇ ಮುಂದುವರಿಯುತ್ತಿದೆ. ನಮ್ಮ ಬುಡಕ್ಕೆ ಬೆಂಕಿ ಬೀಳುವ ತನಕ ನೆರೆಮನೆಯವರ ಬೆಂಕಿನ ಕಾವು ನಮಗೆ ತಗುಲುವುದಿಲ್ಲ. ಇದು ಇಂದು ನಿಮಗೆ ಸಾಮಾನ್ಯ ಪತ್ರ ಎನಿಸಿರಬಹುದು. ಕಾಲಕಳೆದಂತೆ ಈ ಪತ್ರದ ಸ್ವರೂಪ ನಿಮ್ಮೆಲ್ಲರಿಗೂ ಅರ್ಥವಾಗುತ್ತದೆ. ಅಕ್ಷರ ಜ್ಞಾನ, ಅಹಂಕಾರಿಗಳನ್ನಾಗಿಸಿದೆ, ನಿತ್ಯ, ನಿತ್ಯ ಬಲಹೀನರನ್ನಾಗಿಸುತ್ತಿದೆ. ಮಂತ್ರ, ಧ್ಯಾನ, ಯೋಗ,ಚೈತನ್ಯವನ್ನು ನೀಡಬಲ್ಲ ಸಂಜೀವಿನಿಯಾಗಿದೆ.” ಶುಭಾಶೀರ್ವಾದಗಳೊಂದಿಗೆ, ಭಗವತ್ ಸನ್ನಿಧಿಯಲ್ಲಿ, ಪವಿತ್ರಾತ್ಮ.

ಇಡೀ ಜಗತ್ತೇ ತಲ್ಲಣಿಸುತ್ತಿರುವ ಈ ಸಂದರ್ಭದಲ್ಲಿ ಶ್ರೀ ಮಠದಲ್ಲಿ ನಡೆದ ಈ ಘಟನೆ ಭಕ್ತಾಧಿಗಳಲ್ಲಿ ಒಂದು ರೀತಿಯ ಸೋಜಿಗ  ಮೂಡಿಸಿದೆ.

                                                                              ಶ್ರೀಗಳು ಮೌನಾವೃತ ಆಚರಿಸುತ್ತಿರುವ ಯೋಗಮಂದಿರ

Spread the love

Related posts

ಜೈನ್‌ಯೂತ್ ಫೆಡರೇಷನ್ ಸಾರ್ವಜನಿಕರಿಗೆ ಅನ್ನ ಸಂತರ್ಪಣೆ

Times fo Deenabandhu

ಜ.17ರ ಸಂಜೆ ನೆಹರೂ ಕ್ರೀಡಾಂಗಣದಲ್ಲಿ ಜಾನಪದ ಜಾತ್ರಾ ಸಂಭ್ರಮ

Times fo Deenabandhu

ಐಟಿ ಕ್ಷೇತ್ರದ 1 ಟ್ರಿಲಿಯನ್ ಮಾರುಕಟ್ಟೆಯಲ್ಲಿ ಶೇ.40 ಕರ್ನಾಟಕದ ಪಾಲು ನಮ್ಮ ಗುರಿ: ಡಾ.ಅಶ್ವತ್ಥನಾರಾಯಣ್

Times fo Deenabandhu
porta. Phasellus quis, lectus Praesent dolor. id, Praesent leo. elit. dapibus consequat.