Times of Deenabandhu
  • Home
  • ನ್ಯೂಸ್
  • ರಾಜ್ಯ
  • ಅಗತ್ಯ ವಸ್ತುಗಳ ಪೂರೈಕೆಯಲ್ಲಿ ಯಾವುದೇ ವ್ಯತ್ಯಯ ಇರುವುದಿಲ್ಲ ಆತಂಕ ಪಡಬೇಡಿ – ಸಿಎಂ ಬಿ.ಎಸ್.ಯಡಿಯೂರಪ್ಪ
ಮುಖ್ಯಾಂಶಗಳು ರಾಜ್ಯ

ಅಗತ್ಯ ವಸ್ತುಗಳ ಪೂರೈಕೆಯಲ್ಲಿ ಯಾವುದೇ ವ್ಯತ್ಯಯ ಇರುವುದಿಲ್ಲ ಆತಂಕ ಪಡಬೇಡಿ – ಸಿಎಂ ಬಿ.ಎಸ್.ಯಡಿಯೂರಪ್ಪ

Spread the love

ಬೆಂಗಳೂರು, ಮಾರ್ಚ್ 24: ಇಡೀ ಕರ್ನಾಟಕ ಲಾಕ್ ಡೌನ್ ಆಗುವುದರಿಂದ ದಿನಸಿ, ತರಕಾರಿ, ಹಣ್ಣು ಸಿಗುವುದಿಲ್ಲ ಎಂದು ಅವುಗಳನ್ನ ಕೊಳ್ಳಲು ಜನ ಮುಗಿಬೀಳುತ್ತಿದ್ದಾರೆ. ಆದ್ರೆ, ”ಜನರು ಯಾವುದೇ ಕಾರಣಕ್ಕೂ ಆತಂಕಕ್ಕೆ ಒಳಗಾಗಬಾರದು. ಅಗತ್ಯ ವಸ್ತುಗಳ ಪೂರೈಕೆಯಲ್ಲಿ ಯಾವುದೇ ವ್ಯತ್ಯಯ ಇರುವುದಿಲ್ಲ. ಆಹಾರ ಮತ್ತು ದಿನಸಿ ಅಂಗಡಿಗಳು ಎಂದಿನಂತೆ ತೆರೆದಿರುತ್ತದೆ. ನಿಮ್ಮೆಲ್ಲರ ಸಹಕಾರ ಅಗತ್ಯ” ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಟ್ವೀಟ್ ಮಾಡಿದ್ದಾರೆ.

ಮಾರಣಾಂತಿಕ ಕೊರೊನಾ ವೈರಸ್ ನ ತಡೆಗಟ್ಟಲು ಈ ಹಿಂದೆ 9 ಜಿಲ್ಲೆಗಳಿಗೆ ಮಾತ್ರ ಅನ್ವಯಿಸಲಾಗಿದ್ದ ನಿರ್ಬಂಧವನ್ನು ಇಡೀ ರಾಜ್ಯಕ್ಕೆ ವಿಸ್ತರಿಸಲಾಗಿದೆ. ಕರ್ನಾಟಕ ರಾಜ್ಯವನ್ನು ಲಾಕ್ ಡೌನ್ ಮಾಡುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆದೇಶಿಸಿದ್ದಾರೆ. ಆದೇಶದ ಅನ್ವಯ ಮಾರ್ಚ್ 24 ರಿಂದ ಮಾರ್ಚ್ 31 ರವರೆಗೂ ಕರ್ನಾಟಕ ಸ್ತಬ್ಧವಾಗಿರುತ್ತದೆ. ಸರ್ಕಾರದ ಈ ನಿರ್ಧಾರವನ್ನು ಎಲ್ಲರೂ ಕಟ್ಟುನಿಟ್ಟಾಗಿ ಪಾಲಿಸಬೇಕು. ಇಲ್ಲದಿದ್ದರೆ, ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂಬ ಎಚ್ಚರಿಕೆ ಕೂಡ ರವಾನೆ ಆಗಿದೆ.
ಲಾಕ್ ಡೌನ್ ಸಂದರ್ಭದಲ್ಲಿಯೂ ಆಹಾರ ಮತ್ತು ದಿನಸಿ ಅಂಗಡಿಗಳನ್ನು ತೆರೆಯಲು ಅವಕಾಶ ಕಲ್ಪಿಸಲಾಗಿದೆ. ಹೀಗಾಗಿ, ಪ್ಯಾನಿಕ್ ಆಗದೆ ಮನೆಯಲ್ಲಿರಿ, ನಿಮ್ಮ ಮತ್ತು ನಿಮ್ಮ ಕುಟುಂಬದ ಆರೋಗ್ಯದ ಕಡೆ ಗಮನ ಕೊಡಿ.

https://youtu.be/FsjFHiZjOKE

 

 


Spread the love

Related posts

ಉದ್ಯಮಿಗಳಿಗೆ ಕೃಷಿ ಭೂಮಿ ಖರೀದಿಗೆ ಅವಕಾಶ, ವಿಧಾನಸಭೆಯಲ್ಲಿ ತಿದ್ದುಪಡಿ ವಿಧೇಯಕಕ್ಕೆ ಒಪ್ಪಿಗೆ

Times fo Deenabandhu

ಕೊರೊನಾ ಲಾಕ್‌ಡೌನ್‌ನಿಂದ ಹೊಸ ಬಿಕ್ಕಟ್ಟು, ಕೌಟುಂಬಿಕ ಕಿರುಕುಳದಲ್ಲಿ ಭಾರಿ ಹೆಚ್ಚಳ

Times fo Deenabandhu

ಇಂದು ಜನತಾ ಕರ್ಫ್ಯೂ: ರಾಜ್ಯದಲ್ಲಿ ಏನಿರುತ್ತೆ? ಏನಿರಲ್ಲಾ? ಇಲ್ಲಿದೆ ಸಂಪೂರ್ಣ ವಿವರ-ಊರು ಬಿಟ್ಟು ಬೇರೆ ಊರಿಗೆ ಹೋಗುವ ಸಾಹಸ ಬೇಡ

Times fo Deenabandhu
dapibus id Aenean venenatis, mattis ut dolor Phasellus