Times of Deenabandhu
  • Home
  • ಜಿಲ್ಲೆ
  • ಪೊಲೀಸರು ಲಾಕಪ್‌ನಲ್ಲಿರೋರನ್ನೇ ನೋಡಿಕೊಳ್ಳಲ್ಲ – ಇನ್ನು ಇವರನ್ನ ನೋಡ್ಕೋತಾರಾ? – ಸಿದ್ದರಾಮಯ್ಯ ಪ್ರಶ್ನೆ
ಜಿಲ್ಲೆ ಮುಖ್ಯಾಂಶಗಳು ರಾಜ್ಯ

ಪೊಲೀಸರು ಲಾಕಪ್‌ನಲ್ಲಿರೋರನ್ನೇ ನೋಡಿಕೊಳ್ಳಲ್ಲ – ಇನ್ನು ಇವರನ್ನ ನೋಡ್ಕೋತಾರಾ? – ಸಿದ್ದರಾಮಯ್ಯ ಪ್ರಶ್ನೆ

Spread the love

ಬೆಂಗಳೂರು, ಮಾರ್ಚ್ 23: ”ವಿದೇಶದಿಂದ ಬರುವವರನ್ನು ಕ್ವಾರಂಟೈನ್‌ನಲ್ಲಿ ಇಡಬೇಕು. ಆದ್ರೆ ಕೆಲವರು ಕ್ವಾರಂಟೈನ್ ಉಲ್ಲಂಘಿಸಿದ್ದಾರೆ. ಇವರ ಮೇಲೆ  ಪೊಲೀಸರು ನಿಗಾ ವಹಿಸುತ್ತಾರೆ ಎನ್ನುತೀರಿ? ಇದು ಹೇಗೆ ಸಾದ್ಯವಾಗುತ್ತೆ?  ಲಾಕಪ್‌ನಲ್ಲಿರೋರನ್ನೇ ನೋಡಿಕೊಳ್ಳಲ್ಲ. ಇನ್ನು ಇವರನ್ನ ನೋಡ್ಕೋತಾರಾ?. ಎಂದು ಸಿದ್ದರಾಮಯ್ಯ ವಿಧಾನಸಭೆಯಲ್ಲಿ ಪ್ರಶ್ನೆ ಮಾಡಿದ್ದಾರೆ. ಅಲ್ಲದೆ ‘ಗುಲ್ಬರ್ಗದಲ್ಲಿ ಟೆಸ್ಟಿಂಗ್ ಲ್ಯಾಬ್ ಮಾಡಲು 12 ದಿನ ಬೇಕಾಯ್ತು. ಇವತ್ತಿಂದ ಲ್ಯಾಬ್ ಆರಂಭ ಅಂತಿದಾರೆ. ಸಿಎಂ ಎಲ್ಲೆಲ್ಲಿ ಲ್ಯಾಬ್ ಬೇಕೋ ಮಾಡಿ ಅಗತ್ಯ ವೈದ್ಯಕೀಯ ಸಲಕರಣೆಗಳ ಪೂರೈಸಿ.” ಎಂದು ಸಿದ್ದರಾಮಯ್ಯ ಸರ್ಕಾರಕ್ಕೆ ಒತ್ತಾಯ ತಂದರು.
ಸಿದ್ದರಾಮಯ್ಯ ಪ್ರಶ್ನೆಗಳಿಗೆ ಸಚಿವ ಡಾ.ಕೆ.ಸುಧಾಕರ್ ಉತ್ತರ ನೀಡುತ್ತಾ , ನೂರಕ್ಕೆ ನೂರು ಕ್ವಾರಂಟೈನ್ ಮಾಡುವಲ್ಲಿ ಸಾಧ್ಯವಾಗಿಲ್ಲ. ಇದನ್ನು ನಾವು ಒಪ್ಪಿಕೊಳ್ತೇವೆ. 1,22,532 ಜನ ವಿದೇಶದಿಂದ ಬಂದವರನ್ನೆಲ್ಲ ಕ್ವಾರಂಟೈನ್ ಮಾಡುವುದು ಸಾಧ್ಯ ಹೇಗೆ? ಅದಕ್ಕೆ ದೊಡ್ಡ ವ್ಯವಸ್ಥೆ ಬೇಕು. ಕೊರೋನಾ ಅನಿರೀಕ್ಷಿತ, ಹಾಗಾಗಿ ಯಾರೂ ಸಿದ್ಧವಾಗಿರಲು ಸಾಧ್ಯ ಇರಲ್ಲ. ಆದರೂ ನಾವು ಶ್ರಮ ಮೀರಿ ಮುನ್ನೆಚ್ಚರಿಕೆ ಕೈಕೊಂಡಿದ್ದೇವೆ ,1,22,532 ಜನ ವಿದೇಶಗಳಿಂದ ಬಂದಿದ್ದಾರೆ ”ವಿದೇಶದಿಂದ ಕಳೆದ ಮೂರು ದಿನಗಳಿಂದ ಬೆಂಗಳೂರಿಗೆ 3,116 ಪ್ರಯಾಣಿಕರು ಬಂದಿದ್ದಾರೆ. ಇದುವರೆಗೆ 1,22,532 ಜನ ವಿದೇಶಗಳಿಂದ ಬೆಂಗಳೂರು ಮತ್ತು ಮಂಗಳೂರು ವಿಮಾ‌ನ ನಿಲ್ದಾಣಗಳಿಗೆ ಬಂದಿದ್ದಾರೆ. ಇಡೀ ದೇಶದಲ್ಲಿ ವಿದೇಶಗಳಿಂದ ಬಂದವರನ್ನು ಮೊದಲು ಸ್ಕ್ರೀನಿಂಗ್ ಮಾಡಿದ ರಾಜ್ಯ ಅಂದ್ರೆ ಕರ್ನಾಟಕ. ಎಂದರು.


Spread the love

Related posts

ಇಂದು ಗೋಣಿಬೀಡು ಶ್ರೀ ಶೀಲಸಂಪಾದನಮಠದ ಅನುಭಾವ ಸಂಗಮದಲ್ಲಿ ವಿಶೇಷ ಸಂಗೀತ ಮತ್ತು ಚಿತ್ರಕಲಾ ಪ್ರದರ್ಶನ

Times fo Deenabandhu

‘ಕುಣಿಯೋಕ್ ಆಗದವರು ನೆಲ ಡೊಂಕೆಂದರು’ ಮಹಾ ಡ್ರಾಮಕ್ಕೆ ಪ್ರಕಾಶ್ ರಾಜ್ ವ್ಯಾಖ್ಯಾನ

Times fo Deenabandhu

ಪುಂಡಾನೆಗಳನ್ನು ಸ್ಥಳಾಂತರಿಸಲು ರೈತರ ಅಗ್ರಹ:

Times fo Deenabandhu
tristique felis lectus venenatis libero. Praesent libero