Times of Deenabandhu
  • Home
  • ನ್ಯೂಸ್
  • ವಿದೇಶ
  • ಕೊರೊನಾ ವೈರಸ್‌ಗೆ ತತ್ತರಿಸಿದ ಅಮೆರಿಕ : 35 ಸಾವಿರಕ್ಕೂ ಹೆಚ್ಚು ಜನರಿಗೆ ಸೋಂಕು-ಸಾವಿನ ಸಂಖ್ಯೆ 500ರ ಗಡಿ …..!
ಮುಖ್ಯಾಂಶಗಳು ವಿದೇಶ

ಕೊರೊನಾ ವೈರಸ್‌ಗೆ ತತ್ತರಿಸಿದ ಅಮೆರಿಕ : 35 ಸಾವಿರಕ್ಕೂ ಹೆಚ್ಚು ಜನರಿಗೆ ಸೋಂಕು-ಸಾವಿನ ಸಂಖ್ಯೆ 500ರ ಗಡಿ …..!

Spread the love

ವಾಷಿಂಗ್ಟನ್, ಮಾರ್ಚ್ 23:  ಅಮೆರಿಕ ಸರ್ಕಾರ ಜನರು ಮನೆ ಬಿಟ್ಟು ಹೊರಬಾರದಿರುವಂತೆ ಕಟ್ಟಾಜ್ನೆ ಹೊರಡಿಸಿದೆ. ಸೋಂಕು ತಗುಲವ ಸಂಖ್ಯೆ ಲಕ್ಷದ ಗಡಿ ದಾಟಬಹುದು ಎಂಬ ಎಚ್ಚರಿಕೆಯನ್ನು ಸರ್ಕಾರ ನೀಡಿದೆ.
ಏಕೆಂದರೆ ಅಮೆರಿಕದಲ್ಲಿ ಕೊರೊನಾ ವೈರಸ್ (ಕೋವಿಡ್ 19) ಸೋಂಕಿನಿಂದ ಮೃತಪಟ್ಟವರ ಸಂಖ್ಯೆ ನಿನ್ನೆಯವರೆಗೆ ಅಂದಾಜು 500 ಕ್ಕೆ ಏರಿಕೆಯಾಗಿದೆ. 35 ಸವಿರಕ್ಕೂ ಹೆಚ್ಚು ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ.


ಅಮೆರಿಕದ ನ್ಯೂಯಾರ್ಕ್ ಒಂದರಲ್ಲೇ 184 ಜನ ಮೃತಪಟ್ಟಿದ್ದಾರೆ. ಇದರೊಂದಿಗೆ ಸೋಂಕಿನಿಂದ ಆವರಿಸಿರುವ ನಾಲ್ಕನೇ ಅತಿದೊಡ್ಡ ರಾಷ್ಟ್ರ ಅಮೆರಿಕ ಎಂದು ಎನಿಸಿಕೊಂಡಿದೆ. ಒಟ್ಟಾರೆ ಅಮೆರಿಕ ಕೊರೊನಾ ವೈರಸ್‌ಗೆ ತತ್ತರಿಸಿ ಹೋಗಿದೆ.
ಈ ಮಧ್ಯೆ  ಅಮೆರಿಕದಲ್ಲಿ ಶೇ 40 ರಿಂದ 80 ರಷ್ಟು ಜನಕ್ಕೆ ಸೋಂಕು ತಗಲಬಹುದು ಎಂದು ಗವರ್ನರ್ ಅವರ ಈ ಹೇಳಿಕೆ ಅಮೆರಿಕದ ಜನತೆಯನ್ನು  ತೀವ್ರ ಆತಂಕಕ್ಕೆ  ದೂಡಿದೆ.
ಅಮೆರಿಕದಲ್ಲಿ ಸೋಂಕು ಕಾಣಿಸಿಕೊಂಡಿದರಲ್ಲಿ ನ್ಯೂಯಾರ್ಕ ನಗರದ್ದೆ ಅತಿ ಹೆಚ್ಚಿನ ಪಾಲು ಕಂಡು ಬಂದಿದೆ. 10 ಸಾವಿರಕ್ಕೂ ಹೆಚ್ಚು ಜನರಿಗೆ ನ್ಯೂಯಾರ್ಕ್‌ನಲ್ಲಿ ಸೋಂಕು ಕಾಣಿಸಿಕೊಂಡಿದೆ. ಈ ಬೆಳವಣಿಗೆಗಳಿಗೆ ಪೂರಕವಾಗಿ ಅಮೆರಿಕದ ಪ್ರಜೆಗಳು ಸದ್ಯದ ಮಟ್ಟಿಗೆ ಅಂತಾರಾಷ್ಟ್ರೀಯ ಪ್ರವಾಸ ಕೈಗೊಳ್ಳುವುದು ಬೇಡ ಎಂಬ ಸಲಹೆಯನ್ನೂ ನೀಡಿದ್ದಾರೆ.


Spread the love

Related posts

ಮೈಸೂರಿನ ಫ್ರೀ ಕಾಶ್ಮೀರ್ ಪೋಸ್ಟರ್​ ಪ್ರಕರಣ; ನಳಿನಿ ಎದುರು 80 ಪ್ರಶ್ನೆ ಮುಂದಿಟ್ಟ ಪೊಲೀಸರು

Times fo Deenabandhu

ಕುಡಿವ ನೀರಿನ ಲಭ್ಯತೆಗೇ ಮೊದಲ ಆದ್ಯತೆ ಎಂದ ಎನ್​ಜಿಟಿ

Times fo Deenabandhu

‘ಪೌರತ್ವ’ ತಿದ್ದುಪಡಿ ಕಾಯಿದೆ ‘ಗಾಂಧಿ’ಯ ಕನಸಾಗಿತ್ತು: ಪ್ರಭಾಕರ ಭಟ್‌ ಕಲ್ಲಡ್ಕ ಹೇಳಿಕೆ

Times fo Deenabandhu
dolor. consectetur elementum lectus nec elit. libero. felis Lorem vulputate,