Times of Deenabandhu
  • Home
  • ಪ್ರಧಾನ ಸುದ್ದಿ
  • ಮಾ.31ರವರೆಗೆ ಇಡೀ ಕರ್ನಾಟಕ ಲಾಕ್‌ಡೌನ್‌, 9 ಜಿಲ್ಲೆಗಳಿಗಿದ್ದ ಆದೇಶ ರಾಜ್ಯಾದ್ಯಂತ ವಿಸ್ತರಣೆ
ಪ್ರಧಾನ ಸುದ್ದಿ ಮುಖ್ಯಾಂಶಗಳು

ಮಾ.31ರವರೆಗೆ ಇಡೀ ಕರ್ನಾಟಕ ಲಾಕ್‌ಡೌನ್‌, 9 ಜಿಲ್ಲೆಗಳಿಗಿದ್ದ ಆದೇಶ ರಾಜ್ಯಾದ್ಯಂತ ವಿಸ್ತರಣೆಬೆಂಗಳೂರು:ಕೊರೊನಾ ವೈರಸ್‌ ನಿಯಂತ್ರಣಕ್ಕೆ ರಾಜ್ಯ ಸರಕಾರ ಬೆಂಗಳೂರು ಸೇರಿ 9 ಜಿಲ್ಲೆಗಳಿಗೆ ವಿಧಿಸಿದ್ದ ಲಾಕ್‌ಡೌನ್‌ನ್ನು ರಾಜ್ಯಾದ್ಯಂತ ವಿಸ್ತರಣೆ ಮಾಡಿ ಆದೇಶ ಹೊರಡಿಸಿದೆ. ನಾಳೆಯಿಂದ ರಾಜ್ಯದ 30 ಜಿಲ್ಲೆಗಳಲ್ಲೂ ಲಾಕ್‌ಡೌನ್‌ ವಿಧಿಸಲಾಗಿದ್ದು, ಅಗತ್ಯ ಸೇವೆಗಳನ್ನು ಬಿಟ್ಟು ಉಳಿದ ಸೇವೆಗಳೆಲ್ಲಾ ರಾಜ್ಯಾದ್ಯಂತ ಸ್ಥಗಿತಗೊಳ್ಳಲಿವೆ.

ಈ ಸಂಬಂಧ ಮಾಹಿತಿ ನೀಡಿರುವ ಸಿಎಂ ಬಿ.ಎಸ್.ಯಡಿಯೂರಪ್ಪ, ಅಪಾಯಕಾರಿ ಮಟ್ಟದಲ್ಲಿ ಹರಡುತ್ತಿರುವ ಕೋವಿಡ್ -19 ಸೋಂಕನ್ನು ನಿಯಂತ್ರಿಸುವ ದೃಷ್ಟಿಯಿಂದ 9 ಜಿಲ್ಲೆಗಳಿಗೆ ಅನ್ವಯಸಿ ಮಾರ್ಚ್ 24ರಿಂದ ಮಾ.31ರವರೆಗೆ ಹೊರಡಿಸಿದ್ದ ಸಂಪೂರ್ಣ ಲಾಕ್ಡೌನ್ ಆದೇಶವನ್ನು ರಾಜ್ಯಾದ್ಯಂತ ವಿಸ್ತರಿಸಲಾಗಿದೆ ಎಂದು ತಿಳಿಸಿದ್ದಾರೆ.

ಈ ಕುರಿತು ಸೋಮವಾರ ಬೆಳಗ್ಗೆ ಸುದ್ದಿಗಾರರ ಜತೆ ಮಾತನಾಡಿದ್ದ ಸಿಎಂ ಬಿ.ಎಸ್. ಯಡಿಯೂರಪ್ಪ ರಾಜ್ಯದಲ್ಲಿ ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಜನರು ನಿರ್ಲಕ್ಷ್ಯ ವಹಿಸುತ್ತಿರುವ ಕಾರಣ ಮಾರ್ಚ್ 31 ರವರೆಗೂ ಇಡೀ ರಾಜ್ಯವನ್ನೇ ಸಂಪೂರ್ಣ ಲಾಕ್ ಡೌನ್ ಮಾಡುವ ಬಗ್ಗೆ ಇಂಗಿತ ವ್ಯಕ್ತಪಡಿಸಿದ್ದರು

ಇನ್ನು, ಬೆಂಗಳೂರಿನಲ್ಲಿ ಸೆಕ್ಷನ್‌ 144 ಜಾರಿಗೊಳಿಸಿ, ಕರ್ಫ್ಯೂ ವಿಧಿಸಲಾಗಿದೆ. ಕರ್ನಾಟಕದಲ್ಲಿ ಇದುವರೆಗೂ 33 ಕೊರೊನಾ ಪಾಸಿಟಿವ್‌ ಪ್ರಕರಣಗಳು ಕಂಡುಬಂದಿವೆ ಸೋಮವಾರ ಒಂದೇ ದಿನ 7 ಕೊರೊನಾ ಪ್ರಕರಣಗಳು ಕಂಡುಬಂದಿರುವುದು ಆತಂಕಕ್ಕೆ ದೂಡಿದೆ.

https://youtu.be/FsjFHiZjOKE

Related posts

ಹ್ಯಾಂಡ್ ಸ್ಯಾನಿಟೈಸರ್ ಕಂಡು ಹಿಡಿದವರು ಯಾರು ಗೊತ್ತಾ? ಹೆಚ್ಚಾಗಿದೆ ಕುತೂಹಲ

Times fo Deenabandhu

‘ಧರ್ಮ’ನಾಗಿ ಬದಲಾದ ‘ಶ್ರೀಮನ್ನಾರಾಯಣ’ ರಕ್ಷಿತ್ ಶೆಟ್ಟಿ! ಗೋವಾದಲ್ಲಿ ಬೀಡುಬಿಟ್ಟ ‘ಸಿಂಪಲ್ ಸ್ಟಾರ್’!

Times fo Deenabandhu

17 ಕೋಟಿಗೂ ಹೆಚ್ಚು ಪ್ಯಾನ್​ ಕಾರ್ಡ್​ಗಳು ತಮ್ಮ ಮೌಲ್ಯವನ್ನೇ ಕಳೆದುಕೊಳ್ಳಲಿವೆ: ಮಾರ್ಚ್​ 31 ಅದರ ಕೊನೆ ದಿನ

Times fo Deenabandhu