Times of Deenabandhu
  • Home
  • ಜಿಲ್ಲೆ
  • ಪ್ರಧಾನಿಗಳ ಕರೆಗೆ ಓಗೊಟ್ಟ ಪಂಡಿತಾರಾಧ್ಯ ಶ್ರೀಗಳು; ಜನತಾ ಕರ್ಫ್ಯೂಗೆ ಸಂಪೂರ್ಣ ಬೆಂಬಲ
ಚಿತ್ರದುರ್ಗ ಜಿಲ್ಲೆ

ಪ್ರಧಾನಿಗಳ ಕರೆಗೆ ಓಗೊಟ್ಟ ಪಂಡಿತಾರಾಧ್ಯ ಶ್ರೀಗಳು; ಜನತಾ ಕರ್ಫ್ಯೂಗೆ ಸಂಪೂರ್ಣ ಬೆಂಬಲ

Spread the love

ಸಾಣೇಹಳ್ಳಿ:  ಪ್ರಧಾನ ಮಂತ್ರಿಗಳ ‘ಜನತಾ ಕರ್ಫ್ಯೂ ಕರೆಯ ಮೇರೆಗೆ ಸಾಣೇಹಳ್ಳಿಯ ಶಾಲಾ-ಕಾಲೇಜಿನ ವಿದ್ಯಾರ್ಥಿ-ಸಿಬ್ಬಂದಿಗಳು ಇಂದು ಬೆಳಗಿನಿಂದ ತಮ್ಮ-ತಮ್ಮ ವಸತಿ ಗೃಹದಿಂದ ಹೊರಗೆ ಬರದೆ ಮಹಾಮಾರಿ ಕರೋನ ವಿರುದ್ಧದ ಸಮರದಲ್ಲಿ ಭಾಗಿಗಳಾದರು. ಪಂಡಿತಾರಾಧ್ಯ ಶ್ರೀಗಳು ಪ್ರತಿ ಭಾನುವಾರ ಸಿರಿಗೆರೆಯಲ್ಲಿದ್ದು ನ್ಯಾಯ ಪಂಚಾಯತಿ ಮಾಡುವುದು ದಶಕಗಳ ಸಂಪ್ರದಾಯ. ಇಂದು ನ್ಯಾಯ ಪಂಚಾಯಿತಿಯನ್ನು ರದ್ದು ಮಾಡಿದ್ದು, ಯಾರೂ ಪೂಜ್ಯರ ಭೇಟಿಗೆ ಬರಬಾರದೆಂದು ಮೊದಲೇ ತಿಳಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಯಾರೂ ಇಂದು ಪೂಜ್ಯರ ಭೇಟಿಗೆ ಬಂದಿರಲಿಲ್ಲವೆನ್ನುವುದು ಜನರಲ್ಲಿ ಜಾಗೃತಿ ಮೂಡಿದೆ ಎನ್ನುವುದಕ್ಕೆ ಸಾಕ್ಷಿಯಾಗಿದೆ. ಸಂಜೆ ೫ ಗಂಟೆಯಾಗುತ್ತಿದ್ದಂತೆ ತಮ್ಮ ನಾಲ್ಕಾರು ಸಹಾಯಕರ ಜೊತೆ ತಮ್ಮ ಬಿಡಾರದ ಪಕ್ಕದಲ್ಲಿಯೇ ಇರುವ ಐಕ್ಯಮಂಟಪದ ಮುಂದೆ ಬಂದು ಮಹಾಮಾರಿಯ ವಿರುದ್ಧ ಸೆಣೆಸುತ್ತಿರುವ ವೈದ್ಯರು, ಯೋಧರು, ಸಫಾಯಿ ಕರ್ಮಚಾರಿಗಳು ಮುಂತಾದವರ ಗೌರವ ಸೂಚಕವಾಗಿ ಐದು ನಿಮಿಷಗಳ ಕಾಲ ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಲಾಯಿತು. ಶಿವಸಂಚಾರಕ್ಕೆ ತುಂಬ ಬೇಡಿಕೆ ಇದ್ದರೂ ನೆಲದ ಕಾನೂನನ್ನು ಗೌರವಿಸುವ ಮತ್ತು ಜನತೆಯ ಆರೋಗ್ಯದ ಕಾಳಜಿಯಿಂದಾಗಿ ನಾಟಕಗಳ ಪ್ರದರ್ಶನವನ್ನು ರದ್ದುಪಡಿಸಲಾಗಿದೆ. ಅಲ್ಲದೆ ಪ್ರತಿದಿನವೂ ಪೂಜ್ಯರ ೨-೩ ಕಾರ್ಯಕ್ರಮಗಳು ಇರುತ್ತಿದ್ದವು. ಅವುಗಳನ್ನು ಸಹ ಪೂಜ್ಯರು ಸ್ವತಃ ರದ್ದುಗೊಳಿಸಿ ಬಿಡಾರದಲ್ಲಿಯೇ ಇದ್ದು ಪೂಜೆ, ಧ್ಯಾನ, ಓದು, ಅಧ್ಯಯನ, ಬರವಣಿಗೆಗೆ ಮೀಸಲುಗೊಳಿಸಿಕೊಂಡು ಸಮಯವನ್ನು ಸದುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಪೂಜ್ಯರ ಈ ಕ್ರಮಗಳಿಂದಾಗಿ ಅನುಯಾಯಿಗಳಲ್ಲಿಯೂ ಜಾಗೃತಿ ಮೂಡಿಸಿದಂತಾಗಿದೆ ಎನ್ನುವುದು ಸಾರ್ವಜನಿಕರ ಅಭಿಪ್ರಾಯವಾಗಿದೆ.


Spread the love

Related posts

ಕ್ರೀಡಾಕೂಟದಲ್ಲಿ ಭಾಗವಹಿಸುವುದರ ಮೂಲಕ ಸ್ಪರ್ಧೆ ಎದುರಿಸುವ ಶಕ್ತಿ, ಆತ್ಮಸ್ಥೈರ್ಯ ಬೆಳೆಸಿಕೊಳ್ಳಿ

Times fo Deenabandhu

ಕನಕದಾಸ ವೃತ್ತ ವಿವಾದ ಸುಖಾಂತ್ಯ:ಪ್ರತಿಭಟನೆ ಕೈಬಿಟ್ಟ ಹಾಲುಮತ ಮಹಾಸಭಾ

Times fo Deenabandhu

ಅಂಗಡಿಗಳಲ್ಲಿ ಅಗತ್ಯ ವಸ್ತುಗಳ ಮಾರಾಟ ಎಂದಿನಂತೆ ಮುಂದುವರೆಯಲಿದೆ – ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್

Times fo Deenabandhu
Donec sem, risus lectus mattis consequat. suscipit pulvinar