Times of Deenabandhu
  • Home
  • ಪ್ರಧಾನ ಸುದ್ದಿ
  • ಪ್ರಿಕಾಷನ್‌ ತಗೊಳ್ಳಿ, ಪ್ಯಾನಿಕ್‌ ಆಗಬೇಡಿ, ಅನಗತ್ಯ ದೂರ ಪ್ರಯಾಣ ಬಿಡಿ: ಜನತೆಗೆ ಮೋದಿ ಸಲಹೆ
ದೇಶ ಪ್ರಧಾನ ಸುದ್ದಿ ಮುಖ್ಯಾಂಶಗಳು

ಪ್ರಿಕಾಷನ್‌ ತಗೊಳ್ಳಿ, ಪ್ಯಾನಿಕ್‌ ಆಗಬೇಡಿ, ಅನಗತ್ಯ ದೂರ ಪ್ರಯಾಣ ಬಿಡಿ: ಜನತೆಗೆ ಮೋದಿ ಸಲಹೆ

ಹೊಸದಿಲ್ಲಿ: ಕೊರೊನಾ ವೈರಸ್‌ ಸೋಂಕು ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಬೆನ್ನಲ್ಲೇ ಪ್ರಧಾನಮಂತ್ರಿ ನರೇಂದ್ರ ಮೋದಿ ಜನತೆಯಲ್ಲಿ ಆತ್ಮಸ್ಥೈರ್ಯ ತುಂಬಿಸುವ ಕೆಲಸ ಮಾಡಲು ಮುಂದಾಗಿದ್ದಾರೆ.
ಸಾಮಾಜಿಕ ಜಾಲತಾಣಗಳ ಮೂಲಕ ನಿರಂತರವಾಗಿ ಸಲಹೆ, ಸೂಚನೆಗಳನ್ನು ನೀಡುತ್ತಿದ್ದಾರೆ.

ಯಾವುದೇ ಕಾರಣಕ್ಕೂ ಪ್ಯಾನಿಕ್‌ ಆಗಬೇಡಿ, ಎಂದು ಸಲಹೆ ನೀಡಿದ್ದಾರೆ.
ಕೊರೊನಾ ವಿರುದ್ಧ ಹೋರಾಡಬೇಕಾದರೆ ಕೇವಲ ಮನೆಯಲ್ಲಿ ಮಾತ್ರ ಇದ್ದರೆ ಸಾಲದು. ಅನಗತ್ಯ ಪ್ರಯಾಣಗಳನ್ನು ಮಾಡುವುದು ಬೇಡ. ಈ ರೀತಿ ಮಾಡುವುದರಿಂದ ನಮಗೆ ಮಾತ್ರವಲ್ಲ, ಇತರರಿಗೂ ನಾವು ಸಹಾಯ ಮಾಡಿದಂತಾಗುತ್ತದೆ ಎಂದು ಮೋದಿ ಟ್ವೀಟಿಸಿದ್ದಾರೆ.
ಅಲ್ಲದೇ ಈಗಾಗಲೇ ಸೋಂಕು ಪೀಡಿತರು ಕ್ವಾರಂಟೈನ್‌ನಲ್ಲಿ ಇರುವವರು ವೈದ್ಯರು ಹೇಳಿದಂತೆ ಚಿಕಿತ್ಸೆ ಪಡೆದುಕೊಳ್ಳಿ ಎಂದು ಪ್ರಧಾನಿ ಮೋದಿ ಸಾಮಾಜಿಕ ಜಾಲತಾಣಗಳ ಮೂಲಕ ಸಲಹೆ ನೀಡಿದ್ದಾರೆ.
ಸರಣಿ ಟ್ವೀಟ್‌ಗಳ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿ ಜನರಲ್ಲಿ ಜಾಗೃತಿ ಮೂಡಿಸುವ ಕಾಯಕದಲ್ಲಿ ನಿರಂತರ ತೊಡಗಿದ್ದಾರೆ.

ವಿಶ್ವಾದ್ಯಂತ ಸದ್ಯ 1 ಮತ್ತು 2ನೇ ಮಹಾಯುದ್ಧಕ್ಕಿಂತ ಗಂಭೀರ ಸ್ಥಿತಿ ಇದೆ. ಕೊರೊನಾದಿಂದ ನಾವು ಮಾತ್ರ ಬಚಾವ್‌ ಆಗಿದ್ದೇವೆ ಎಂಬ ನಿರ್ಲಕ್ಷ್ಯ ಬೇಡ. ಇದುವರೆಗೂ ನಿಖರ ಚಿಕಿತ್ಸಾ ಲಸಿಕೆ ಅಭಿವೃದ್ಧಿ ಮಾಡಲಾಗಿಲ್ಲ. ಹಾಗಂತ ಸುಖಾಸುಮ್ಮನೆ ಆತಂಕವೂ ಬೇಡ, ಎಚ್ಚರದಿಂದಿರಿ ಎಂದು ಕಿವಿಮಾತು ಹೇಳಿದರು.

ಜ್ವರ, ನೆಗಡಿ, ಕೆಮ್ಮು ಅಥವಾ ಗಂಟಲು ನೋವು ಕಂಡುಬಂದರೆ ಯಾವುದೇ ಕಾರಣಕ್ಕೂ ಭಯಪಡಬೇಡಿ. ನಿಮ್ಮ ಕುಟುಂಬದ ವೈದ್ಯರು, ವೈದ್ಯ ಸ್ನೇಹಿತರು ಅಥವಾ ಕುಟುಂಬದಲ್ಲೇ ಇರುವ ವೈದ್ಯರಿಗೆ ದೂರವಾಣಿ ಕರೆ ಮಾಡಿ ಸಲಹೆ ಪಡೆಯಿರಿ. ಸುಮ್ಮನೆ ಆಸ್ಪತ್ರೆಗೆ ಹೋಗಿ ಪರೀಕ್ಷೆ ಮಾಡಿಸಿಕೊಳ್ಳುವುದು ಬೇಡ ಎಂದು ಮೋದಿ ತಿಳಿಸಿದರು.

 

Related posts

 ಪ್ರಥಮ ಪಿಯುಸಿ ಫಲಿತಾಂಶ ಮೇ 5 ರಂದು ಪ್ರಕಟ

Times fo Deenabandhu

ಗುಡ್‌ ನ್ಯೂಸ್‌, ರಾಜ್ಯದಲ್ಲಿ ಕೊರೊನಾ ಸೋಂಕಿತರು ಗುಣಮುಖರಾಗುತ್ತಿದ್ದಾರೆ

Times fo Deenabandhu

ಜಿಎಸ್‌ಟಿ ಪಾವತಿಸಿಲ್ಲವೇ? ಅಧಿಕಾರಿಗಳು ಬ್ಯಾಂಕ್‌ ಖಾತೆ, ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಬಹುದು

Times fo Deenabandhu