Times of Deenabandhu
  • Home
  • ಜಿಲ್ಲೆ
  • ಕರೋನಾ: ಆಯುರ್ವೇದಿಕ್ ಆಸ್ಪತ್ರೆಗಳ ಮೇಲೆ ನಿಗಾ ಇಡಲು ಆಗ್ರಹ
ಜಿಲ್ಲೆ ಶಿವಮೊಗ್ಗ

ಕರೋನಾ: ಆಯುರ್ವೇದಿಕ್ ಆಸ್ಪತ್ರೆಗಳ ಮೇಲೆ ನಿಗಾ ಇಡಲು ಆಗ್ರಹ

ಶಿವಮೊಗ್ಗ: ಕರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಆಯುರ್ವೇದಿಕ್ ಆಸ್ಪತ್ರೆಗಳ ಮೇಲೆ ನಿಗಾ ಇಡಬೇಕೆಂದುಒತ್ತಾಯಿಸಿ ಅಖಿಲ ಭಾರತ ಕರುನಾಡ ಯುವಶಕ್ತಿ ಸಂಘಟನೆ ವತಿಯಿಂದ ಇಂದು ಆರೋಗ್ಯ ಮತ್ತುಕುಟುಂಬ ಕಲ್ಯಾಣಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಜಗತ್ತನ್ನೆ ತಲ್ಲಣಗೊಳಿಸಿರುವ ಕರೋನಾ ವೈರಸ್ ಮನೆಬಾಗಿಲಿಗೆ ಬಂದು ನಿಂತಿದೆ. ಶಿವಮೊಗ್ಗದಲ್ಲಿ ಶಂಕಿತ ಪ್ರಕರಣಗಳು ದಾಖಲಾಗುತ್ತಿವೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತಷ್ಟು ಕಾರ್ಯಕ್ರಮ ಹಾಕಿಕೊಳ್ಳಬೆಕೆಂದು ಒತ್ತಾಯಿಸಿದರು.
ಜಿಲ್ಲಾಡಳಿತದ ಆದೇಶವಿದ್ದರೂ ಬೀದಿ ಬದಿಯ ಹೊಟೇಲ್, ಗಾಡಿಗಳು, ತಿಂಡಿ ಅಂಗಡಿಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಿವೆ. ಈ ಹೋಟೇಲ್ ತ್ಯಾಜ್ಯ ಮಿತಿಮೀರಿ ಸಂಗ್ರಹವಾಗಿ ಕರೋನಾ ಮಾತ್ರವಲ್ಲದೇ ಬೇರೆ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಇದೆ ಎಂದರು.
ನಗರದಲ್ಲಿ ಸುಮಾರು ೧೦೦ಕ್ಕೂ ಹೆಚ್ಚು ಆಯುರ್ವೇದಿಕ್ ಆಸ್ಪತ್ರೆಗಳಲ್ಲಿ ಇವುಗಳಲ್ಲಿ ಕರೋನಾ ಸೇರಿದಂತೆ ವಿವಿಧ ಕಾಯಿಲೆಗಳಿಗೆ ಬರುವವರ ಸಂಖ್ಯೆ ಹೆಚ್ಚಿದೆ. ಯಾವುದೇ ಆಯುರ್ವೇದಿಕ್ ಆಸ್ಪತ್ರೆಗಳು ಆರಂಭವಾಗಲು ನಿಯಮಗಳಿದ್ದು, ಈ ನಿಯಮಾವಳಿಗಳನ್ನು ಗಾಳಿಗೆ ತೂರಿ ಆಯುರ್ವೇದಿಕ್ ಆಸ್ಪತ್ರೆಗಳು ಅಣಬೆಗಳಂತೆ ಹಬ್ಬಿಕೊಂಡು ಜನರ ಜೇಬಿಗೆ ಕತ್ತರಿ ಹಾಕುತ್ತಿವೆ ಎಂದು ಹೇಳಿದರು.
ಇಂಗ್ಲಿಷ್ ಔಷಧೋಪಚಾರ ಆಯುರ್ವೇದಿಕ್ ಆಸ್ಪತ್ರೆಗಳಲ್ಲಿ ನೀಡಬಾರದೆಂಬ ನಿಯಮವಿದ್ದರೂ ಎಲ್ಲ ಆಸ್ಪತ್ರೆಗಳಲ್ಲೂ ಇಂಗ್ಲಿಷ್ ಔಷಧ ಕೊಡುತ್ತಿದ್ದಾರೆ. ವಿವಿಧ ಕಾಯಿಲೆಗಳ ಹೆಸರು ಹೇಳಿ ಜನರಿಂದ ಹಣ ವಸೂಲಿ ಮಾಡಿಕೊಳ್ಳುತ್ತಿದ್ದಾರೆ. ಆಯುರ್ವೇದಿಕ್ ಕ್ಲಿನಿಕ್‌ಗಳಲ್ಲಿ ಯಾವುದೇ ಕಾರಣಕ್ಕೂ ಇಂಗ್ಲಿಷ್ ಔಷಧಿ ಮಾರುವಂತಿಲ್ಲ. ಆದರೆ ಇಲಾಖೆ ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದರು.
ಅನೇಕ ಸರ್ಕಾರಿ ವೈದ್ಯರು ಖಾಸಗಿ ಕ್ಲಿನಿಕ್‌ಗಳನ್ನು ಆರಂಭಿಸಿ ಸರ್ಕಾರಿ ಆಸ್ಪತ್ರೆಗೆ ಬರುವ ರೋಗಿಗಳಿಗೆ ತಮ್ಮ ಕ್ಲಿನಿಕ್‌ಗೆ ಬರುವಂತೆ ಸೂಚನೆ ಕೊಡುತ್ತಿದ್ದಾರೆ. ಸರ್ಕಾರಿ ಹುದ್ದೆಯಲ್ಲಿದ್ದು ಸ್ವಂತ ಕ್ಲಿನಿಕ್ ಆರಂಭಿಸಿರುವ ವೈದ್ಯರ ವಿರುದ್ದ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಕರೋನಾ ಗುಣಪಡಿಸುವುದಾಗಿ ಹೇಳಿ ನಕಲಿ ಔಷಧಿ ನೀಡಿ ಹಣ ಲಪಟಾಯಿಸುತ್ತಿರುವವರ ವಿರುದ್ದ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ವೇದಿಕೆ ಸಂಸ್ಥಾಪಕ ಅಧ್ಯಕ್ಷ ವಸಂತಕುಮಾರ್, ರಾಜ್ಯಾಧ್ಯಕ್ಷ ಶರವಣ, ಸಂಚಾಲಕ ಎ.ಎಸ್.ಚಿದಾನಂದ ಇದ್ದರು.

೧೦ನೇ ತರಗತಿ ವಿದ್ಯಾರ್ಥಿಗೆ ಮುಖ್ಯೋಪಾಧ್ಯಾಯ ಕಿರುಕುಳ ಆರೋಪ

ಶಿವಮೊಗ್ಗ: ನಗರದ ಬೈಪಾಸ್ ರಸ್ತೆಯಲ್ಲಿರುವ ಅಂಬರ್‌ವ್ಯಾಲಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ೧೦ನೇ ತರಗತಿ ವಿದ್ಯಾರ್ಥಿಗೆ ಮುಖ್ಯೋಪಾಧ್ಯಾಯ ಕಿರುಕುಳ ನೀಡುತ್ತಿದ್ದುಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಕನ್ನಡ ಕಾರ್ಮಿಕ ರಕ್ಷಣಾ ವೇದಿಕೆ ವತಿಯಿಂದ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.
ಶಾಲೆಯ ೧೦ನೇ ತರಗತಿ ವಿದ್ಯಾರ್ಥಿಗೆ ಮಾ.೧೩ ರಂದು ಶಾಲೆಯ ಮುಖ್ಯೋಪಾಧ್ಯಾಯ ಶುಲ್ಕ ತರಲು ಸೂಚಿಸಿದ್ದಾರೆ. ಶುಲ್ಕ ತಂದರೆ ಮಾತ್ರ ಪ್ರವೇಶಪತ್ರ ಕೊಡುವುದಾಗಿ ತಿಳಿಸಿದ್ದಾರೆ. ಬಳಿಕ ಶಾಲೆಗೆ ಹೋದ ಬಾಲಕನ ತಂದೆ ಎರಡು ದಿನ ಸಮಯ ಕೇಳಿದ್ದು ಶಾಲೆಯ ಒಳಗೆ ಕಳಿಸಲಾಗಿದೆ. ನಂತರ ಶಾಲೆಯ ಆಡಳಿತ ಮಂಡಳಿ ಮತ್ತು ಮುಖ್ಯೋಪಾಧ್ಯಾಯರು ಹೀನಾಮಾನವಾಗಿ ವಿದ್ಯಾರ್ಥಿ ಮತ್ತು ಆತನ ತಂದೆಗೆ ನಿಂದಿಸಿದ್ದಾರೆ ಎಂದು ದೂರಿದರು. ]
ಇದರಿಂದಾಗಿ ವಿದ್ಯಾರ್ಥಿ ಮೇಲೆ ಮಾನಸಿಕ ಪರಿಣಾಮ ಬೀರಿದೆ. ಬಳಿಕ ವಿದ್ಯಾರ್ಥಿ ತಂದೆ ಹಣ ಒಂದಿಸಿಕೊಂಡು ಶುಲ್ಕ ಪಾವತಿಸಿ ರಶೀದಿ ಕೇಳಿದಾಗ ಸಂಸ್ಥೇಯ ಅಧಿಕೃತ ರಶೀದಿ ಕೊಡದೇ ಬಿಳಿ ಹಾಳೆಯಲ್ಲಿ ಬರೆದುಕೊಟ್ಟಿದ್ದಾರೆ. ಈ ಬಗ್ಗೆ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಶಾಲೆಗೆ ಮೂಲಸೌಕರ್ಯಗಳು ಇಲ್ಲ ಅಲ್ಲದೇ ಮಾನ್ಯತೆ ಕೂಡ ಇಲ್ಲವೆಂದು ಹೇಳಿದ್ದು ಈ ಬಗ್ಗೆ ಕ್ರಮ ಕೈಗೊಳ್ಳಬೇಕು. ವಿದ್ಯಾರ್ಥಿ ಮತ್ತು ಪೋಷಕರಿಗೆ ತೊಂದರೆ ನೀಡಿದ ಶಾಲೆಯ ಆಡಳಿತ ಮಂಡಳಿ ವಿರುದ್ದ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ವೇದಿಕೆಯ ಪ್ರಮುಖರಾದ ಮಂಜುನಾಥ್, ಅನ್ವರ್, ರವಿ,ಶೇಖರ್ ಮೊದಲಾದವರು ಇದ್ದರು.

Related posts

ಮಕ್ಕಳಿಂದ ಜನ್ಮದಾತರ ಪಾದಪೂಜೆ

Times fo Deenabandhu

ಕೊರೊನ ವೈರಸ್:ಚೈನಾದ ಅಳಿಯ ತನ್ನ ಹುಬ್ಬಳ್ಳಿಯ ಮಾವನಿಗೆ ಬರೆದ ಪತ್ರದಲ್ಲಿ ಏನಿದೆ?

Times fo Deenabandhu

ಲಕ್ಕವಳ್ಳಿಯಲ್ಲಿ ಬೀಕರ ಅಪಘಾತ : ಪೋಲಿಸರ ಕಣ್ಣು ತಪ್ಪಿಸಲು ಹೋಗಿ ಲಾರಿಗೆ ಸಿಕ್ಕಿ ಈರ್ವರು ಬೈಕ್ ಸವಾರರು ಸ್ಥಳದಲ್ಲಿಯೇ ಸಾವು: ಪೋಲಿಸರ ವಿರುದ್ಧ ತೀವ್ರ ಪ್ರತಿಭಟನೆ

Times fo Deenabandhu