Times of Deenabandhu
  • Home
  • ಪ್ರಧಾನ ಸುದ್ದಿ
  • ಕೊರೊನಾ ಸೋಂಕಿತ ಬಾಲಿವುಡ್ ಗಾಯಕಿ ಜತೆ ಸಭೆ: ಪ್ರತ್ಯೇಕವಾಸಕ್ಕೆ ಮುಂದಾದ ಉಪ್ರ ಸಚಿವ
ಪ್ರಧಾನ ಸುದ್ದಿ ಮುಖ್ಯಾಂಶಗಳು ಸಿನಿಮಾ

ಕೊರೊನಾ ಸೋಂಕಿತ ಬಾಲಿವುಡ್ ಗಾಯಕಿ ಜತೆ ಸಭೆ: ಪ್ರತ್ಯೇಕವಾಸಕ್ಕೆ ಮುಂದಾದ ಉಪ್ರ ಸಚಿವ

Spread the love

ಲಖನೌ: ಕೊರೊನಾ ಸೋಂಕಿತ ಬಾಲಿವುಡ್‌ ಗಾಯಕಿ ಕನಿಕಾ ಕಪೂರ್‌ (41) ಅವರೊಂದಿಗೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಉತ್ತರ ಪ್ರದೇಶ ಅರೋಗ್ಯ ಸಚಿವ ಜೈ ಪ್ರತಾಪ್‌ ಸಿಂಗ್‌ ಅವರು ತಮ್ಮ ಮನೆಯಲ್ಲಿ ಪ್ರತ್ಯೇಕವಾಗಿ ಉಳಿಯಲು ನಿರ್ಧರಿಸಿದ್ದಾರೆ.
ಇತ್ತೀಚೆಗೆ ನಗರದಲ್ಲಿ ನಡೆದ ಔತಣಕೂಟವೊಂದರಲ್ಲಿ ಪ್ರತಾಪ್‌ ಸಿಂಗ್‌ ಹಾಗೂ ಕನಿಕಾ ಸೇರಿದಂತೆ ನೂರಾರು ಮಂದಿ ಭಾಗವಹಿಸಿದ್ದರು. ಹಾಜರಿದ್ದವರಲ್ಲಿ ಹೆಚ್ಚಿನವರು ರಾಜಕಾರಣಿಗಳು ಮತ್ತು ಸರ್ಕಾರಿ ಅಧಿಕಾರಿಗಳು ಎಂದು ಹೇಳಲಾಗಿದೆ.

‘ನಾವು ಕುಟುಂಬದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದೆವು. ಕನಿಕಾ ಅವರಿಗೆ ಸೋಂಕು ಹರಡಿರುವುದು ಗೊತ್ತಾಗಿದೆ. ಹಾಗಾಗಿ ಪ್ರತ್ಯೇಕವಾಗಿ ಇರಲು ನಿರ್ಧರಿಸಿದ್ದೇನೆ’ ಎಂದು ಪ್ರತಾಪ್‌ ಸಿಂಗ್‌ ಹೇಳಿದ್ದಾರೆ.
ಈ ಕಾರ್ಯಕ್ರಮದಲ್ಲಿ ರಾಜಸ್ಥಾನ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೇ, ಅವರ ಮಗ ಸಂಸದ ದುಷ್ಯಂತ್‌ ಸಿಂಗ್‌ ಕೂಡ ಭಾಗವಹಿಸಿದ್ದರು. ಅದಾದ ಬಳಿಕ ದುಷ್ಯಂತ್‌ ಸಂಸತ್ತಿಗೂ ಆಗಮಿಸಿದ್ದರು. ಕನಿಕಾಗೆ ಸೋಂಕು ಇರುವುದು ದೃಡಪಟ್ಟ ಬಳಿಕ, ತಾಯಿ ಮಗ ಪ್ರತ್ಯೇಕವಾಗಿಯೇ ಉಳಿದ್ದಿದ್ದಾರೆ.

‘ಲಖನೌದಲ್ಲಿ ನಾನು ನನ್ನ ಮಗ ದುಶ್ಯಂತ್‌ ಮತ್ತು ಅವನ ಮಾವ ರಾತ್ರಿ ಔತಣಕೂಟದಲ್ಲಿ ಭಾಗಿಯಾಗಿದ್ದೆವು. ದುರದೃಷ್ಟವಶಾತ್‌ ಕೋವಿಡ್‌–19 ದೃಢಪಟ್ಟಿರುವ ಕನಿಕಾ ಸಹ ಅಲ್ಲಿ ಅತಿಥಿಯಾಗಿದ್ದರು. ಮುನ್ನೆಚ್ಚರಿಕೆ ಕ್ರಮವಾಗಿ ನಾನು ಮತ್ತು ನನ್ನ ಮಗ ವಿಷಯ ತಿಳಿದ ಕೂಡಲೇ ಸ್ವತಃ ಪ್ರತ್ಯೇಕವಾಗಿ ವಾಸಿಸಲು ಆರಂಭಿಸಿದ್ದೇವೆ’ ಎಂದು ವಸುಂಧರಾ ರಾಜೇ ಟ್ವೀಟ್‌ ಮಾಡಿದ್ದಾರೆ.
ದುಷ್ಯಂತ್ ಸಂಸತ್ತಿಗೆ ಆಗಮಿಸಿದ್ದುದರ ಬಗ್ಗೆ ತೃಣಮೂಲ ಕಾಂಗ್ರೆಸ್‌ ಮುಖಂಡ ಡೆರಿಕ್‌ ಓಬ್ರೀನ್‌ ಟ್ವಿಟರ್‌ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಂಸತ್‌ ಕಾರ್ಯಾಚರಣೆ ಸ್ಥಗಿತಗೊಳಿಸುವಂತೆ ಆಗ್ರಹಿಸಿದ್ದಾರೆ.


Spread the love

Related posts

ಪ್ರಧಾನಿ ಮೋದಿ, ಚೀನಾ ಅಧ್ಯಕ್ಷ ಕ್ಸಿ ಜಿನ್​ಪಿಂಗ್​​ ಸ್ವಾಗತಿಸುವ ಒಂದೂ ಬ್ಯಾನರ್​ ಇಲ್ಲ! ತಮಿಳುನಾಡಿನಲ್ಲಿ ಹೀಗೇಕೆ ಆಯ್ತು?

Times fo Deenabandhu

ಮೈಸೂರಿನ ಫ್ರೀ ಕಾಶ್ಮೀರ್ ಪೋಸ್ಟರ್​ ಪ್ರಕರಣ; ನಳಿನಿ ಎದುರು 80 ಪ್ರಶ್ನೆ ಮುಂದಿಟ್ಟ ಪೊಲೀಸರು

Times fo Deenabandhu

ನಂದಿನಿ ಹಾಲು, ಮೊಸರಿನ ದರ ಲೀಟರ್​ಗೆ ಎರಡು ರೂಪಾಯಿ ಹೆಚ್ಚಳ

Times fo Deenabandhu
Lorem tristique porta. non ipsum libero neque.