Times of Deenabandhu
  • Home
  • ಪ್ರಧಾನ ಸುದ್ದಿ
  • ‘ಕೊರೊನಾ ವೈರಸ್‌ಗೆ ಮದ್ದಿಲ್ಲ.. ಸಂಕಲ್ಪ, ಸಂಯಮವೇ ನಿಮ್ಮ ಅಸ್ತ್ರವಾಗಲಿ’: ಪ್ರಧಾನಿ ಮೋದಿ ಕರೆ
ದೇಶ ಪ್ರಧಾನ ಸುದ್ದಿ ಮುಖ್ಯಾಂಶಗಳು ರಾಜಕೀಯ

‘ಕೊರೊನಾ ವೈರಸ್‌ಗೆ ಮದ್ದಿಲ್ಲ.. ಸಂಕಲ್ಪ, ಸಂಯಮವೇ ನಿಮ್ಮ ಅಸ್ತ್ರವಾಗಲಿ’: ಪ್ರಧಾನಿ ಮೋದಿ ಕರೆ

ಹೊಸ ದಿಲ್ಲಿ: ಕೊರೊನಾ ವೈರಸ್ ಮಹಾಮಾರಿ ವಿಶ್ವವನ್ನೇ ಕಾಡುತ್ತಿರುವ ಸಂದರ್ಭದಲ್ಲಿ ದೇಶದ ಜನರನ್ನು ಉದ್ದೇಶಿಸಿ ಭಾಷಣ ಮಾಡಿದ ಪ್ರಧಾನಿ ನರೇಂದ್ರ ಮೋದಿ, ಜನರಿಗೆ ಸಹಕಾರ ನೀಡುವಂತೆ ಮನವಿ ಮಾಡಿಕೊಂಡರು. ಕೊರೊನಾ ವೈರಸ್‌ಗೆ ಮದ್ದಿಲ್ಲ, ಲಸಿಕೆ ಕಂಡು ಹಿಡಿಯಲು ವಿಶ್ವಾದ್ಯಂತ ತಜ್ಞರು ಸಂಶೋಧನೆ ನಡೆಸುತ್ತಿದ್ದಾರೆ ಎಂದು ಮಾಹಿತಿ ನೀಡಿದ ಪ್ರಧಾನಿ ಮೋದಿ, ಸಂಕಲ್ಪ, ಸಂಯಮಗಳೇ ನಿಮ್ಮ ಅಸ್ತ್ರವಾಗಿರಲಿ ಎಂದು ಕರೆ ನೀಡಿದರು.

‘ನಾವು ಆರೋಗ್ಯವಾಗಿದ್ದರೆ ವಿಶ್ವವೇ ಆರೋಗ್ಯವಾಗಿರುತ್ತದೆ’ ಎಂದು ಅಭಿಪ್ರಾಯಪಟ್ಟ ಪ್ರಧಾನಿ ಮೋದಿ, ನಮಗೆ ಏನೂ ಆಗೋದಿಲ್ಲ ಎಂದು ಜನನಿಬಿಡ ಪ್ರದೇಶಗಳಲ್ಲಿ ಸುತ್ತಾಡಬೇಡಿ ಎಂದು ಮನವಿ ಮಾಡಿಕೊಂಡರು. ಇದೊಂದು ರೀತಿ ಯುದ್ಧದ ಸನ್ನಿವೇಶ ಎಂದು ವರ್ಣಿಸಿದ ಪ್ರಧಾನಿ ಮೋದಿ, ಹಿರಿಯ ನಾಗರಿಕರು ತಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು ಎಂದು ಮನವಿ ಮಾಡಿಕೊಂಡರು.

ಜನತಾ ಕರ್ಫ್ಯೂ ಜಾರಿಯಾಗಲಿ..!

ಜನರೇ, ಜನರಿಗಾಗಿ ಘೋಷಿಸಿಕೊಳ್ಳುವ ಕರ್ಫ್ಯೂ ಇದೀಗ ದೇಶಾದ್ಯಂತ ಜಾರಿ ಆಗಬೇಕೆಂದು ಪ್ರಧಾನಿ ಮೋದಿ ಕರೆ ನೀಡಿದ್ದಾರೆ. ನಿಮ್ಮ ಮನೆಗಳಲ್ಲೇ ಇರಿ ಎಂದು ಕರೆ ನೀಡಿದ ಪ್ರಧಾನಿ ಮೋದಿ, ಅತ್ಯಗತ್ಯ ವಸ್ತುಗಳ ಖರೀದಿಗಾಗಿ ಮಾತ್ರ ಮನೆಯಿಂದ ಹೊರಗೆ ಹೋಗಿ ಎಂದು ಮನವಿ ಮಾಡಿಕೊಂಡರು.
ಶುಕ್ರವಾರದಿಂದ ಮುಂದಿನ ಭಾನುವಾರದವರೆಗೂ ಜನತಾ ಕರ್ಫ್ಯೂ ಜಾರಿಯಲ್ಲಿ ಇರಲಿ ಎಂದು ಕರೆ ನೀಡಿದ ಪ್ರಧಾನಿ ಮೋದಿ, ಎನ್‌ಎಸ್‌ಎಸ್‌, ಎನ್‌ಸಿಸಿ ಸೇರಿದಂತೆ ಹಲವು ಸಂಘಟನೆಗಳ ಕಾರ್ಯಕರ್ತರು ಜನರಲ್ಲಿ ಅರಿವು ಮೂಡಿಸಬೇಕೆಂದು ಪ್ರಧಾನಿ ಕರೆ ನೀಡಿದರು.

ನಾವು ಈ ಮಹಾಮಾರಿ ವಿರುದ್ಧ ಹೋರಾಡಲು ಎಷ್ಟರ ಮಟ್ಟಿಗೆ ಸಿದ್ದತೆ ನಡೆಸಿದ್ದೇವೆ ಎಂದು ನಮ್ಮನ್ನು ನಾವು ಪರೀಕ್ಷಿಸಿಕೊಳ್ಳೋದಕ್ಕೂ ಇದು ಸುಸಮಯ ಎಂದು ಪ್ರಧಾನಿ ಅಭಿಪ್ರಾಯಪಟ್ಟರು.
ಭಾನುವಾರ ಸಂಜೆ ಚಪ್ಪಾಳೆ ತಟ್ಟಿ..!

ಭಾನುವಾರ ಸಂಜೆ 5 ಗಂಟೆಗೆ 5 ನಿಮಿಷಗಳ ಕಾಲ ಜನರೆಲ್ಲರೂ ತಮ್ಮ ಮನೆಯ ಬಾಗಿಲು, ಕಿಟಕಿ ಬಳಿ ನಿಂತು ಚಪ್ಪಾಳೆ ತಟ್ಟಬೇಕೆಂದು ಕರೆ ನೀಡಿದ್ದಾರೆ. ಈ ಚಪ್ಪಾಳೆ ಕೊರೊನಾ ವೈರಸ್ ವಿರುದ್ಧ ಹೋರಾಡುತ್ತಿರುವ ವೈದ್ಯರು ಹಾಗೂ ತುರ್ತು ಸೇವೆಗಳನ್ನು ನೀಡುತ್ತಿರುವ ಜನರನ್ನು ಗೌರವಿಸಲು ಅತ್ಯಗತ್ಯ ಎಂದು ಪ್ರಧಾನಿ ಮೋದಿ ಕರೆ ನೀಡಿದ್ದಾರೆ.ಭಾನುವಾರದವರೆಗೂ ಮನೆಯಿಂದ ಹೊರಬರಬೇಡಿ ಎಂದು ಕರೆ ನೀಡಿದ ಪ್ರಧಾನಿ ಮೋದಿ, ಅಗತ್ಯ ವೈದ್ಯಕೀಯ ಸೇವೆಗಳಿಗಾಗಿ ನಿಮ್ಮ ಕುಟುಂಬಕ್ಕೆ ಹತ್ತಿರವಾದ ವೈದ್ಯರ ಬಳಿ ದೂರವಾಣಿ ಮೂಲಕವೇ ಔಷಧಗಳ ಬಗ್ಗೆ ಸಲಹೆ ಪಡೆಯಿರಿ ಎಂದಿದ್ದಾರೆ. ತೀರಾ ತುರ್ತು ಇಲ್ಲವಾದ್ರೆ ಶಸ್ತ್ರ ಚಿಕಿತ್ಸೆಗಳನ್ನು ಮುಂದೂಡಿ ಎಂದು ಕರೆ ನೀಡಿದ್ದಾರೆ.

Related posts

ಒಂದೇ ವರ್ಷದಲ್ಲಿ 70 ಬಾರಿ ಸಂಚಾರ ನಿಯಮ ಉಲ್ಲಂಘನೆ, 15,400 ರೂ. ದಂಡ!

Times fo Deenabandhu

ಪ್ರಧಾನಿ ನರೇಂದ್ರ ಮೋದಿಯವರಿಂದ ಅಚ್ಚರಿಯ ನಿರ್ಧಾರ; ತೀವ್ರ ಕುತೂಹಲಕ್ಕೆ ಕಾರಣವಾಗಿದೆ ಅವರ ಈ ಒಂದು ಟ್ವೀಟ್​

ಕನ್ನಡದ ಜನಪ್ರಿಯ ಹಾಸ್ಯನಟ ಬುಲೆಟ್ ಪ್ರಕಾಶ್ ಇನ್ನಿಲ್ಲ!

Times fo Deenabandhu