Times of Deenabandhu
ಪ್ರಧಾನ ಸುದ್ದಿ ಮುಖ್ಯಾಂಶಗಳು ಸಿನಿಮಾ

ಮಾಜಿ ಪ್ರಿಯಕರನ ಬಗ್ಗೆ ಹೇಳಿಕೆ ನೀಡಿ ಸಂಚಲನ ಎಬ್ಬಿಸಿದ ಸಮಂತಾ

“ಸೂಕ್ತ ಸಮಯದಲ್ಲಿ ಎಚ್ಚೆತ್ತುಕೊಂಡೆ… ಇಲ್ಲದಿದ್ದರೆ ನಾನು ಇನ್ನೊಬ್ಬ ಸಾವಿತ್ರಿ ಆಗಬೇಕಾಗಿತ್ತು” ಎಂದು ಹೇಳುವ ಮೂಲಕ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ ಟಾಲಿವುಡ್ ಹೀರೋಯಿನ್ ಸಮಂತಾ ಅಕ್ಕಿನೇನಿ. ಸಮಂತಾ ಈ ರೀತಿ ಹೇಳಿರುವುದು ತನ್ನ ಮಾಜಿ ಬಾಯ್ ಫ್ರೆಂಡ್ ಬಗ್ಗೆ ಎಂಬುದು ಗಮನಿಸಬೇಕಾದ ಸಂಗತಿ.

ಹೀರೋ ಸಿದ್ಧಾರ್ಥ್ ಜೊತೆಗೆ ಸಮಂತಾ ಲ‍‍ವ್‌ನಲ್ಲಿದ್ದರು ಎಂಬ ಗಾಳಿಸುದ್ದಿಗಳು ಈ ಹಿಂದೆ ಹರಿದಾಡಿದ್ದವು. ಇವರಿಬ್ಬರೂ ಇನ್ನೇನು ಮದುವೆಯಾಗಲಿದ್ದಾರೆ ಎನ್ನುವ ತನಕ ಗಾಳಿಸುದ್ದಿಗಳು ಬಲವಾಗಿ ಬೀಸಿದ್ದವು. ಆದರೆ ಕಾರಣಾಂತರಗಳಿಂದ ಇಬ್ಬರೂ ದೂರ ಸರಿಯಬೇಕಾಯಿತು.

ಇವರಿಬ್ಬರ ನಡುವಿನ ಸ್ನೇಹ ಸಂಬಂಧ ಮುರಿದುಬಿದ್ದ ಬಳಿಕ ನಾಗ ಚೈತನ್ಯ ಜೊತೆಗೆ ಪ್ರೀತಿಯಲ್ಲಿ ಬಿದ್ದ ಸಮಂತಾ ಬಳಿಕ ಮದುವೆಯನ್ನೂ ಮಾಡಿಕೊಂಡರು. ಇದೀಗ ‘ಮೋಸ್ಟ್ ಡಿಸೈರಬಲ್ ವುಮೆನ್’ ಆಗಿ ಆಯ್ಕೆಯಾಗಿರುವ ಸಮಂತಾ ತನ್ನ ಮಾಜಿ ಬಾಯ್ ಫ್ರೆಂಡ್ ಬಗ್ಗೆ ಮಾತನಾಡಿದ್ದಾರೆ.
“ಮಹಾನಟಿ ಸಾವಿತ್ರಿ ವೈಯಕ್ತಿಕ ಜೀವನದಲ್ಲಿ ಏನೆಲ್ಲಾ ಕಷ್ಟಗಳು ಸಂಭವಿಸಿದವೋ ನನ್ನ ಜೀವನದಲ್ಲೂ ಅಂತಹವೇ ಕಷ್ಟಗಳು ಎದುರಾದವು. ಆದರೆ ನಾನು ಮೊದಲೇ ಎಚ್ಚೆತ್ತುಕೊಂಡೆ. ಪರಿಸ್ಥಿತಿ ಕೈಮೀರುವ ಮುನ್ನವೇ ಆ ಬಂಧನದಿಂದ ಹೊರಬಿದ್ದೆ. ಆ ಬಳಿಕ ಚೈತನ್ಯ ಅವರಂತಹ ದೊಡ್ಡ ವ್ಯಕ್ತಿಯೊಂದಿಗೆ ಬದುಕನ್ನು ಹಂಚಿಕೊಳ್ಳುವ ಅವಕಾಶ ಲಭಿಸಿತು ಎಂದು ಸಮಂತಾ ಹೇಳಿದ್ದಾರೆ.

Related posts

‘ಪ್ರಪಂಚ’ ಬಿಟ್ಟು ಹೋದ ಪಾಪು ಅಂತ್ಯಕ್ರಿಯೆ; ಕನ್ನಡದ ಕಟ್ಟಾಳು ಲೀನ

Times fo Deenabandhu

ಕೊರೊನಾ ಲಾಕ್‌ಡೌನ್‌ನಿಂದ ಹೊಸ ಬಿಕ್ಕಟ್ಟು, ಕೌಟುಂಬಿಕ ಕಿರುಕುಳದಲ್ಲಿ ಭಾರಿ ಹೆಚ್ಚಳ

Times fo Deenabandhu

ಸೇನೆ ದಾಳಿ ನಡೆಸಿ ಪಿಒಕೆ ಗ್ರಾಮವನ್ನು ವಶಪಡಿಸಿಕೊಂಡಿದೆ ಎಂದು ಜಾಲತಾಣದಲ್ಲಿ ಹರಿದಾಡುತ್ತಿರೋ ಸುದ್ದಿಗಳು ಸುಳ್ಳು

Times fo Deenabandhu