Times of Deenabandhu
  • Home
  • ಪ್ರಧಾನ ಸುದ್ದಿ
  • ಬಸ್‌ ಪ್ರಯಾಣಕ್ಕೆ ಜನರ ಹಿಂದೇಟು, ಕೆಎಸ್‌ಆರ್‌ಟಿಸಿಗೆ 8.40 ಕೋಟಿ, ಬಿಎಂಟಿಸಿಗೆ 6.10 ಕೋಟಿ ರೂ. ನಷ್ಟ
ಪ್ರಧಾನ ಸುದ್ದಿ ಮುಖ್ಯಾಂಶಗಳು ರಾಜ್ಯ

ಬಸ್‌ ಪ್ರಯಾಣಕ್ಕೆ ಜನರ ಹಿಂದೇಟು, ಕೆಎಸ್‌ಆರ್‌ಟಿಸಿಗೆ 8.40 ಕೋಟಿ, ಬಿಎಂಟಿಸಿಗೆ 6.10 ಕೋಟಿ ರೂ. ನಷ್ಟ

ಬೆಂಗಳೂರು: ಕೊರೊನಾ ಸೋಂಕಿನ ಭೀತಿ ಹಿನ್ನೆಲೆಯಲ್ಲಿ ಸಾರ್ವಜನಿಕರು ಬಸ್‌ಗಳಲ್ಲಿ ಪ್ರಯಾಣ ಮಾಡಲು ಹಿಂಜರಿಯುತ್ತಿದ್ದಾರೆ. ಹೀಗಾಗಿ, ಕೆಎಸ್‌ಆರ್‌ಟಿಸಿಯು ಗುರುವಾರ 1,300 ಬಸ್‌ಗಳ ಸಂಚಾರ ರದ್ದುಗೊಳಿಸಿತು. ಪರಿಣಾಮ, ಸಂಸ್ಥೆಗೆ ಮಾ. 1 ರಿಂದ 18ರವರೆಗೆ 8.40 ಕೋಟಿ ರೂ. ನಷ್ಟ ಉಂಟಾಗಿದೆ. ಮುಂಗಡ ಟಿಕೆಟ್‌ ಕಾಯ್ದಿರಿಸುವ ಪ್ರಯಾಣಿಕರು ಟಿಕೆಟ್‌ ರದ್ದು ಮಾಡಿದಲ್ಲಿ ಯಾವುದೇ ರೀತಿಯ ಶುಲ್ಕ ವಿಧಿಸದಿರಲು ತೀರ್ಮಾನಿಸಲಾಗಿದೆ. ಈವರೆಗೆ 45,020 ಮಂದಿ ಮುಂಗಡ ಟಿಕೆಟ್‌ಗಳನ್ನು ರದ್ದು ಮಾಡಿದ್ದಾರೆ.
ಮೈಸೂರಿನ ಇನ್ಫೋಸಿಸ್‌ ತರಬೇತಿ ಕೇಂದ್ರದಿಂದ ಒಟ್ಟು 177 ಉದ್ಯೋಗಿಗಳನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಚೆನ್ನೈ, ಸಿಕಂದರಾಬಾದ್‌, ತ್ರಿವೆಂಡ್ರಂ, ಕೊಟ್ಟಾಯಂ ಮತ್ತು ಮಧುರೈಗೆ ಬಿಡಲು 10 ಬಸ್‌ಗಳನ್ನು ಕಾರ್ಯಾಚರಣೆ ಮಾಡಲಾಯಿತು. ಇದಲ್ಲದೆ, ಮಂಗಳೂರು ಜಿಲ್ಲಾಡಳಿತವು 5 ಬಸ್‌ಗಳನ್ನು ಪಡೆದು ಮಂಗಳೂರು ವಿಮಾನ ನಿಲ್ದಾಣದಿಂದ ಪ್ರಯಾಣಿಕರನ್ನು ಸ್ಥಳಾಂತರಿಸಿದೆ.

ಬಿಎಂಟಿಸಿಗೆ 6.10 ಕೋಟಿ ರೂ. ನಷ್ಟ

ಪ್ರಯಾಣಿಕರ ಕೊರತೆ ಹಿನ್ನೆಲೆಯಲ್ಲಿ ಬಿಎಂಟಿಸಿಯು ಗುರುವಾರ 1,519 ಬಸ್‌ಗಳ ಸಂಚಾರವನ್ನು ರದ್ದುಗೊಳಿಸಿತ್ತು. ಕೊರೊನಾ ಹಿನ್ನೆಲೆಯಲ್ಲಿ ಮಾಲ್‌, ಚಿತ್ರಮಂದಿರ, ಪಬ್‌, ಕ್ಲಬ್‌ಗಳನ್ನು ಮಾ. 31ರವರೆಗೆ ಬಂದ್‌ ಮಾಡಲಾಗಿದೆ. ಅಲ್ಲದೆ, ಹಲವು ಕಂಪೆನಿಗಳು ಮನೆಯಿಂದಲೇ ಕೆಲಸ ಮಾಡಲು ಉದ್ಯೋಗಿಗಳಿಗೆ ಸೂಚಿಸಿವೆ. ಹೀಗಾಗಿ, ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿದ್ದು, ನಿತ್ಯ 1,500-1,600 ಬಸ್‌ಗಳ ಸಂಚಾರ ನಿಲ್ಲಿಸಲಾಗುತ್ತಿದೆ. ಇದರಿಂದ ಸಂಸ್ಥೆಗೆ 6.10 ಕೋಟಿ ರೂ. ನಷ್ಟ ಉಂಟಾಗಿದೆ.

Related posts

ಕೊರೋನಾ ಸೋಂಕಿತ ವ್ಯಕ್ತಿ ಆತ್ಮಹತ್ಯೆ

Times fo Deenabandhu

ಕರೊನಾ ಜನ್ಮಸ್ಥಾನದಲ್ಲಿ ಪೂರ್ಣ ಪ್ರಮಾಣದಲ್ಲಿ ಶುರುವಾಗಿವೆ ಶಾಲೆ- ಕಾಲೇಜುಗಳು…!

Times fo Deenabandhu

ಡಿಕೆ ಶಿವಕುಮಾರ್‌ ತಾಯಿ ಗೌರಮ್ಮಗೆ ಸತತ 8 ಗಂಟೆ ಇ.ಡಿ. ಡ್ರಿಲ್‌

Times fo Deenabandhu