Times of Deenabandhu
  • Home
  • ಪ್ರಧಾನ ಸುದ್ದಿ
  • ಗಲ್ಲು ಶಿಕ್ಷೆಗೆ ಕೆಲವೇ ಗಂಟೆಗಳ ಮುನ್ನ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ ನಿರ್ಭಯಾ ಹಂತಕರು
ಕ್ರೈಮ್ ದೇಶ ಪ್ರಧಾನ ಸುದ್ದಿ ಮುಖ್ಯಾಂಶಗಳು

ಗಲ್ಲು ಶಿಕ್ಷೆಗೆ ಕೆಲವೇ ಗಂಟೆಗಳ ಮುನ್ನ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ ನಿರ್ಭಯಾ ಹಂತಕರು

ಹೊಸದಿಲ್ಲಿ: ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ನಿರ್ಭಯಾ ಅತ್ಯಾಚಾರ ಪ್ರಕರಣ ಸಂಬಂಧ ಗಲ್ಲು ಶಿಕ್ಷೆಗೆ ಗುರಿಯಾಗಿರುವ ನಾಲ್ವರು ಆರೋಪಿಗಳು ತಪ್ಪಿಸಿಕೊಳ್ಳಲು ಎಲ್ಲ ರೀತಿಯ ಪ್ರಯತ್ನ ಮಾಡುತ್ತಲೇ ಇದ್ದಾರೆ.

ಈಗ ಕೊನೆ ಹೋರಾಟ ಎಂಬಂತೆ ಗಲ್ಲು ಶಿಕ್ಷೆಗೆ ಕೆಲವೇ ಕೆಲವು ಗಂಟೆಗಳ ಮುನ್ನ ನಿರ್ಭಯಾ ಹಂತಕರು ದಿಲ್ಲಿ ಹೈಕೋರ್ಟ್ ಮೆಟ್ಟಿಲು ಏರಿದ್ದಾರೆ.

ಶುಕ್ರವಾರ ನಿಗದಿಯಾಗಿರುವ ಗಲ್ಲು ಶಿಕ್ಷೆಗೆ ತಡೆ ನೀಡಬೇಕೆಂದು ದಿಲ್ಲಿಯ ಪಟಿಯಾಲಾ ಕೋರ್ಟ್‌ಗೆ ಹಂತಕರು ಮೊರೆ ಹೋಗಿದ್ದರು. ಆದರೆ ಪಟಿಯಾಲಾ ಕೋರ್ಟ್‌, ಹಂತಕರ ಅರ್ಜಿಯನ್ನು ವಜಾಗೊಳಿಸಿತು. ಇದರೊಂದಿಗೆ ಗಲ್ಲು ಶಿಕ್ಷೆಗೆ ಫಿಕ್ಸ್ ಆಗಿತ್ತು.

ಮೂರು ಬಾರಿ ಮುಂದೂಡಿಕೆ

2012ರ ಡಿಸೆಂಬರ್‌ 16ರ ಮಧ್ಯರಾತ್ರಿ ವೈದ್ಯ ವಿದ್ಯಾರ್ಥಿನಿ ನಿರ್ಭಯಾ ಮತ್ತು ಆತನ ಸ್ನೇಹಿತ ದಿಲ್ಲಿಯ ಖಾಸಗಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ಆರು ಮಂದಿ ನಿರ್ಭಯಾ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದರು. ಅಲ್ಲದೇ ಬರ್ಬರವಾಗಿ ಹಿಂಸೆ ನೀಡಿದ್ದರು. ಜತೆಗಿದ್ದ ಸ್ನೇಹಿತನ ಮೇಲೂ ಹಲ್ಲೆ ನಡೆಸಿದ್ದರು. ಸಿಂಗಾಪುರದಲ್ಲಿ ಚಿಕಿತ್ಸೆ ಕೊಡಿಸಿದರೂ ಫಲಕಾರಿಯಾಗದೇ 15 ದಿನಗಳ ಬಳಿಕ ಕೊನೆಯುಸಿರೆಳೆದಿದ್ದಳು.

ತ್ವರಿತ ನ್ಯಾಯಾಲಯವು 2013 ರಲ್ಲಿಯೇ ಮುಕೇಶ್‌ ಸಿಂಗ್‌, ಪವನ್‌ ಗುಪ್ತಾ, ವಿನಯ್‌ ಶರ್ಮಾ, ಅಕ್ಷಯ್‌ಕುಮಾರ್‌ ಸಿಂಗ್‌, ರಾಮ್‌ಸಿಂಗ್‌ಗೆ ಗಲ್ಲು ಶಿಕ್ಷೆ ನೀಡಿತ್ತು. ರಾಮ್‌ಸಿಂಗ್‌ 2013ರಲ್ಲಿ ಜೈಲಿನಲ್ಲಿಯೇ ಆತ್ಮಹತ್ಯೆ ಮಾಡಿಕೊಂಡರೆ, ಬಾಲಾಪರಾಧಿಯನ್ನು 2015ರಲ್ಲಿ ಬಿಡುಗಡೆ ಮಾಡಲಾಗಿತ್ತು.

ನಾಲ್ವರ ಗಲ್ಲು ಶಿಕ್ಷೆಯನ್ನು ದಿಲ್ಲಿ ಹೈಕೋರ್ಟ್‌ ಎತ್ತಿ ಹಿಡಿದಿತ್ತು. ಆದರೂ ಅಪರಾಧಿಗಳ ಕಾನೂನು ಹೋರಾಟದಿಂದ ಶಿಕ್ಷೆ ಜಾರಿ ವಿಳಂಬವಾಗಿತ್ತು. ಮೂರು ಸಲ ನೇಣಿಗೇರಿಸುವ ದಿನ ನಿಗದಿಪಡಿಸಿ ಡೆತ್‌ ವಾರೆಂಟ್‌ ಹೊರಡಿಸಿದರೂ, ಶಿಕ್ಷೆ ಜಾರಿ ಮುಂದೂಡುವಲ್ಲಿ ಅಪರಾಧಿಗಳು ಯಶಸ್ವಿಯಾಗಿದ್ದರು. ಇದೇ ವರ್ಷದ ಜನವರಿ 22, ಫೆಬ್ರವರಿ 1 ಮತ್ತು ಮಾರ್ಚ್ 3ರಂದು ನೇಣಿಗೆ ಏರಿಸಲು ಡೆತ್‌ ವಾರೆಂಟ್‌ ಹೊರಡಿಸಲಾಗಿತ್ತು.

Related posts

ಖಾಸಗಿ ಕಚೇರಿಯನ್ನು ಕ್ವಾರಂಟೈನ್‌ಗೆ ನೀಡಿದ ಬಾಲಿವುಡ್ ಬಾದ್ ಷಾ ಶಾರುಖ್ ಖಾನ್

ವಾಷಿಂಗ್ ಮಷಿನ್‌ನೊಳಗೆ ತನ್ನ ಕಂದನ ಮುಖ ನೋಡಿ ತಂದೆಗೆ ಜೀವವೇ ಹೋದಂತಾಗಿತ್ತು…!

Times fo Deenabandhu

ವಿಮಾನವನ್ನು ಮದುವೆಯಾಗುತ್ತಾರಂತೆ ಈ ಯುವತಿ…! : ಮಾರ್ಚಿನಲ್ಲಿ ನಡೆಯಲಿದೆ ಕಲ್ಯಾಣ…!

Times fo Deenabandhu