Times of Deenabandhu
  • Home
  • ಮುಖ್ಯಾಂಶಗಳು
  • ಈ ದಿನ ನೀವೇ ಕೊನೆಯ ಕಸ್ಟಮರ್ ಎಂದ ಚಾಲಕನ ಮಾತಿಗೆ ನಟಿ ಕಾಜಲ್ ಕಂಗಾಲು
ಮುಖ್ಯಾಂಶಗಳು ಸಿನಿಮಾ

ಈ ದಿನ ನೀವೇ ಕೊನೆಯ ಕಸ್ಟಮರ್ ಎಂದ ಚಾಲಕನ ಮಾತಿಗೆ ನಟಿ ಕಾಜಲ್ ಕಂಗಾಲು

Spread the love

ನಟಿ ಕಾಜಲ್ ಅಗರವಾಲ್ ಆಗಾಗ ಸಾಮಾಜಿಕ ಅಂಶಗಳ ಬಗ್ಗೆ ಪ್ರತಿಕ್ರಿಯಿಸುತ್ತಲೇ ಇರುತ್ತಾರೆ. ಟ್ವಿಟರ್‌ನಲ್ಲಿ ತನಗೆ ಎದುರಾದ ಅನೇಕ ಸಂಗತಿಗಳನ್ನು ಶೇರ್ ಮಾಡುತ್ತಿರುತ್ತಾರೆ. ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಕಾಜಲ್ ಅನೇಕ ಟ್ವೀಟ್‌ಗಳನ್ನು ಮಾಡಿದ್ದಾರೆ. ಅಭಿಮಾನಿಗಳಿಗೆ, ಫಾಲೋವರ್ಸ್‌ಗೆ, ನೆಟ್ಟಿಗರಿಗೆ ಕೊರೊನಾ ವಿಚಾರದಲ್ಲಿ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳ ಕ್ರಮಗಳ ತಿಳಿ ಹೇಳಿದ್ದಾರೆ.
ಇದೀಗ ಇನ್‌ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿರುವ ಪೋಸ್ಟ್ ವೈರಲ್ ಆಗಿದೆ. ಕೊರೊನಾ ವಿಚಾರವಾಗಿ ತನ್ನ ಕಣ್ಣೆದುರೇ ನಡೆದ ಒಂದು ವಾಸ್ತವ ಘಟನೆಯನ್ನು ಶೇರ್ ಮಾಡಿಕೊಂಡಿದ್ದಾರೆ. ಕೊರೊನಾವನ್ನು ತಡೆಗಟ್ಟಲು ಕೈಗೊಂಡಿರುವ ಕ್ರಮಗಳಿಂದಾಗಿ ಅನೇಕ ಮಂದಿ ತೊಂದರೆ ಅನುಭವಿಸುವಂತಾಗಿದೆ ಎಂದಿದ್ದಾರೆ ಕಾಜಲ್.

ಕೊರೊನಾ ವೈರಸ್‌ನಿಂದಾಗಿ ಕ್ಯಾಬ್ ಚಾಲಕರು ಅನುಭವಿಸುತ್ತಿರುವ ಕಷ್ಟವನ್ನು ನೋಡಿ ನನ್ನ ಮನಸ್ಸಿಗೆ ತುಂಬಾ ನೋವಾಯಿತುಯಿತು ಎಂದಿದ್ದಾರೆ. “ಕ್ಯಾಬ್ ಡ್ರೈವರ್ ನನ್ನ ಮುಂದೆ ನಿಂತು ಕಣ್ಣೀರಿಟ್ಟ. ಕಳೆದ ಎರಡು ದಿನಗಳಿಂದ ನಾನೇ ಮೊದಲ ಕಸ್ಟಮರ್ ಎಂದು ಹೇಳಿದ. ಇಂದಾದರೂ ಮನೆಗೆ ಸರಕು ತೆಗೆದುಕೊಂಡು ಬರುತ್ತೇನೆ ಎಂದು ನನ್ನ ಹೆಂಡತಿ ಕಾಯುತ್ತಿರುತ್ತಾಳೆ ಎಂದು ಹೇಳಿದ” ಎಂದಿದ್ದಾರೆ ಕಾಜಲ್.
ಈ ಹಿಂದಿನ ಕಸ್ಟಮರನ್ನು ಬಿಟ್ಟು ಬಂದ ಬಳಿಕ ಸುಮಾರು 70 ಕಿ.ಮೀ ಖಾಲಿಯಾಗಿ ತಾನು ಡ್ರೈವಿಂಗ್ ಸಹ ಮಾಡಿದ್ದೇನೆ ಎಂದು ತನ್ನ ಬಳಿ ಸಂಕಟ ತೋಡಿಕೊಂಡ ಎಂದಿದ್ದಾರೆ. ಕ್ಯಾಬ್ ಡ್ರೈವರ್ ಕಣ್ಣೀರ ಕಥೆ ಕೇಳಿದ ಕಾಜಲ್ ಅಗರವಾಲ್ ಚಾಲಕನ ಕೈಗೆ ರೂ. 500 ಹೆಚ್ಚಾಗಿಯೇ ಕೊಟ್ಟರಂತೆ.
ಕೊರೊನಾ ವೈರಸ್ ಅನೇಕ ಮಂದಿಯನ್ನು ಅನೇಕ ರೀತಿಯಲ್ಲಿ ಕಾಡುತ್ತಿದೆ ಎಂದಿದ್ದಾರೆ ಕಾಜಲ್. ಆಯಾ ದಿನದ ದುಡಿಮೆ ಮೇಲೆ ಜೀವನ ನಡೆಸುವವರು ಇನ್ನೂ ಜಾಸ್ತಿ ನಷ್ಟಕ್ಕೆ ಒಳಗಾಗುತ್ತಿದ್ದಾರೆ. ಅಂತಹವರಿಗೆ ಹಣ ಸ್ವಲ್ಪ ಹೆಚ್ಚಾಗಿ ನೀಡಿ ಎಂದು ಅಭಿಮಾನಿಗಳಲ್ಲಿ ವಿನಂತಿಸಿದ್ದಾರೆ. ಯಾಕೆಂದರೆ ಆ ದಿನ ನೀವೇ ಕೊನೆಯ ಕಸ್ಟಮರ್ ಆಗಿರಬಹುದು. ಕಾಜಲ್ ಮಾಡಿರುವ ಈ ಪೋಸ್ಟ್‌ಗೆ ಅಭಿಮಾನಿಗಳು ಲೈಕ್‍ಗಳ ಸುರಿಮಳೆ ಗರೆದಿದ್ದಾರೆ. ಕಾಜಲ್‌ರನ್ನು ಹಾಡಿ ಹೊಗಳುತ್ತಿದ್ದಾರೆ.


Spread the love

Related posts

ಕರ್ನಾಟಕ ಲೋಕಸೇವಾ ಆಯೋಗವು ಐಚ್ಛಿಕ ಕನ್ನಡವನ್ನು ರದ್ದು ಮಾಡದಿರಲಿ: ಡಾ.ಪುರುಷೋತ್ತಮ ಬಿಳಿಮಲೆ ಆಗ್ರಹ

Times fo Deenabandhu

ಅಚ್ಚರಿ ರೀತಿ ಆಕಾರ ಬದಲಾಯಿಸುವ ಮೀನು… ಮಾಲಿಕರಿಗೆ ನೆರವಾಗುವ ಮುದ್ದು ಶ್ವಾನ… : ಇದು ಸುಂದರ ವಿಡಿಯೋ ಗುಚ್ಛ

Times fo Deenabandhu

‘ಪ್ರಪಂಚ’ ಬಿಟ್ಟು ಹೋದ ಪಾಪು ಅಂತ್ಯಕ್ರಿಯೆ; ಕನ್ನಡದ ಕಟ್ಟಾಳು ಲೀನ

Times fo Deenabandhu
adipiscing lectus luctus nunc tristique Praesent consectetur