Times of Deenabandhu
  • Home
  • ಪ್ರಧಾನ ಸುದ್ದಿ
  • ‘ಚೈನೀಸ್ ವೈರಸ್’ ಪದ ಸಮರ್ಥಿಸಿಕೊಂಡ ಅಮೆರಿಕಾ ಅಧ್ಯಕ್ಷ ಡೋನಾಲ್ಡ್ ಟ್ರಂಪ್
ಪ್ರಧಾನ ಸುದ್ದಿ ಮುಖ್ಯಾಂಶಗಳು ವಿದೇಶ

‘ಚೈನೀಸ್ ವೈರಸ್’ ಪದ ಸಮರ್ಥಿಸಿಕೊಂಡ ಅಮೆರಿಕಾ ಅಧ್ಯಕ್ಷ ಡೋನಾಲ್ಡ್ ಟ್ರಂಪ್

ವಾಷಿಂಗ್ಟನ್: ಇಡೀ ಪ್ರಪಂಚವನ್ನು ತಲ್ಲಣಗೊಳಿಸುತ್ತಿರುವ ಕೊರೊನಾ ವೈರಸ್ ಬಗ್ಗೆ ಅಮೆರಿಕಾ, ಚೈನಾ ನಡುವೆ ವಾಕ್ಸಮರ ಮುಂದುವರಿದೆ. ‘ಚೈನೀಸ್ ವೈರಸ್’ ವಿಶ್ವದಾದ್ಯಂತ ಅತ್ಯಂತ ವೇಗವಾಗಿ ಹಬ್ಬುತ್ತಿದೆ ಎಂಬ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆ ವಿರುದ್ದ ಚೈನಾ ವ್ಯಕ್ತಪಡಿಸಿರುವ ಪ್ರತಿಭಟನೆಗೆ ಪ್ರತಿಕ್ರಿಯಿಸಿರುವ ಟ್ರಂಪ್ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಈ ವೈರಸ್ ಚೈನಾದಿಂದ ಬಂದಿರುವ ಕಾರಣ ‘ಚೈನೀಸ್ ವೈರಸ್’ ಪದ ಸೂಕ್ತ ಎಂಬುದು ತಮ್ಮ ಭಾವನೆ ಎಂದು ಟ್ರಂಪ್ ಹೇಳಿದ್ದಾರೆ.
ಕೋವಿಡ್ -೧೯ ಸೋಂಕು ಹರಡಲು ಅಮೆರಿಕಾ ಸೇನೆ ಕಾರಣ ಎಂದು ಚೈನಾ ಅಪಪ್ರಚಾರ ನಡೆಸುತ್ತಿದೆ ಎಂದು ಟ್ರಂಪ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಮ್ಮ ಸೇನೆ ಚೀನೀಯರಿಗೆ ಈ ವೈರಸ್ ಹರಡಿಸಿದೆ ಎಂದು ಚೈನಾ ಹೇಳುತ್ತಿರುವುದು ನ್ಯಾಯವಲ್ಲ, ಅಮೆರಿಕಾ ಸೇನೆ ಅದನ್ನು ಯಾರಿಗೂ ಹಬ್ಬಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಮತ್ತೊಂದೆಡೆ, ಅಮೆರಿಕಾದಲ್ಲಿ ಕೊರೊನಾ ತನ್ನ ಅಟ್ಟಹಾಸ ಮುಂದುವರಿಸಿದ್ದು, . ಮೂರು ಸಾವಿರಕ್ಕೂ ಹೆಚ್ಚು ಜನರು ಸೋಂಕಿಗೆ ಒಳಗಾಗಿದ್ದು, ೬೨ ಮಂದಿ ಸಾವನ್ನಪ್ಪಿದ್ದಾರೆ. ಕೊರೊನಾ ಪ್ರಪಂಚದಾದ್ಯಂತ ಹರಡುತ್ತಿದೆ, ವಿಶ್ವಾದ್ಯಂತ ೧,೮೩,೫೭೯ ಪ್ರಕರಣಗಳು ವರದಿಯಾಗಿದ್ದು, ೭,೪೦೦ ಕ್ಕೂ ಹೆಚ್ಚು ಸಾವುಗಳು ಸಂಭವಿಸಿವೆ.

Related posts

ಬಾಂಬ್‌ ಸ್ಫೋಟದಲ್ಲಿ ಎರಡು ಅಂಗೈಯನ್ನು ಕಳೆದುಕೊಂಡರೂ ಸಾಧಿಸಿ ತೋರಿಸಿದ ಛಲಗಾರ್ತಿ : ಇದು ಸ್ಫೂರ್ತಿಯ ಕತೆ

Times fo Deenabandhu

ಅಗತ್ಯ ವಸ್ತುಗಳ ಪೂರೈಕೆಯಲ್ಲಿ ಯಾವುದೇ ವ್ಯತ್ಯಯ ಇರುವುದಿಲ್ಲ ಆತಂಕ ಪಡಬೇಡಿ – ಸಿಎಂ ಬಿ.ಎಸ್.ಯಡಿಯೂರಪ್ಪ

Times fo Deenabandhu

ಕೆಫೆ ಕಾಫಿ ಡೇ ಖಾತೆಯಿಂದ 2,000 ಕೋಟಿ ರೂ. ಮಂಗಮಾಯ!

Times fo Deenabandhu