Times of Deenabandhu
  • Home
  • ಮುಖ್ಯಾಂಶಗಳು
  • ಕೊರೋನಾಕ್ಕೆ ಹೆದರದಿರಿ: ಡಾ.ಶಿವಮೂರ್ತಿ ಮುರುಘಾ ಶರಣರ ಕವನ ವ್ಯೆರಲ್
ಚಿತ್ರದುರ್ಗ ಮುಖ್ಯಾಂಶಗಳು

ಕೊರೋನಾಕ್ಕೆ ಹೆದರದಿರಿ: ಡಾ.ಶಿವಮೂರ್ತಿ ಮುರುಘಾ ಶರಣರ ಕವನ ವ್ಯೆರಲ್

 

ಮಹಾಮಾರಿ ಕೊರೊನಾ ವೈರಸ್ ರೋಗದ ಹಿನ್ನೆಲೆಯಲ್ಲಿ ಈಗಾಗಲೇ ಸರ್ಕಾರ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದೆ. ಸಾರ್ವಜನಿಕ ಸಭೆ ಸಮಾರಂಭಗಳಲ್ಲಿ ಹೆಚ್ಚು ಜನ ಸೇರುವುದನ್ನು ನಿರ್ಬಂಧಿಸಿದೆ. ನಾವು ಸಹ ಸರ್ಕಾರದ ಆದೇಶವನ್ನು ಪಾಲಿಸುತ್ತೇವೆ ಮತ್ತು ಗೌರವಿಸುತ್ತೇವೆ. ಸಾರ್ವಜನಿಕರು ಸಹ ಭೀಕರವಾದ ರೋಗದ ಹಿನ್ನೆಲೆಯಲ್ಲಿ ಆದಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಈಗಾಗಲೇ ಶ್ರೀಮಠವು ಸಹ ಈ ತಿಂಗಳ 31ರವರೆಗಿನ ಎಲ್ಲ ಕಾರ್ಯಕ್ರಮಗಳನ್ನು ರದ್ದುಗೊಳಿಸಿದೆ. ಇದೇ ತಿಂಗಳು 25ರಂದು ನಡೆಯಬೇಕಿದ್ದ ರಾಜ್ಯಮಟ್ಟದ ಯುಗಾದಿ ಕವಿಗೋಷ್ಠಿಯನ್ನು ಸಹ ಮುಂದೂಡಲಾಗಿದೆ ಎಂದು ಪತ್ರಿಕಾಗೋಷ್ಠಿಯನ್ನು          ಉದ್ದೇಶಿಸಿ  ಮುರುಘಾಮಠದ ಶ್ರೀಗಳಾದ   ಡಾ.ಶಿವಮೂರ್ತಿ ಮುರುಘಾ ಶರಣರು ಮಾತನಾಡಿದರು. ಈ ಸಂದರ್ಭದಲ್ಲಿ ಕೊರೊನಾ ವೈರಸ್‍ಗೆ ಸಂಬಂಧಿಸಿದಂತೆ ಶ್ರೀಗಳು ಬರೆದ ಕವನವನ್ನು ವಾಚನ ಮಾಡಿದರು.

ಶ್ರೀಗಳ ಈ ಕವನವು ಪ್ರಸ್ತುತ ಕಾಲಘಟ್ಟದಲ್ಲಿ ಜನರಲ್ಲಿ ಅತ್ಯಂತ ಜಾಗೃತಿಯನ್ನು ಮೂಡಿಸುವಂತಿದೆ. ಈ ಹಿನ್ನೆಲೆಯಲ್ಲಿ ಶ್ರೀಗಳು ಬರೆದ ಈ ಕವನವು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಉಂಟು ಮಾಡಿದೆ.

 

ಹೆದರದಿರು ಆಧುನಿಕ ಮಾನವ

ಕಂಗೆಡದಿರು ಎಲವೊ ಜೀವ    || ಪ ||

ಕೊರೋನಾ ವೈರಸ್‍ನಿಂದ ನೀ ಬಲು ಕಂಗಾಲಾಗಿರುವೆಯಾ !

ಉದ್ಯೋಗ ವ್ಯಾಪಾರ ಕುಂಠಿತವಾಯಿತೆಂದು ಚಿಂತಿಸಿರುವೆಯಾ !

ಮನೆಯೊಳಗೆ ಮುದ್ದೆಯಂತೆ ಕುಳಿತು ಕಾಲ ನೂಕುತಿರುವೆಯಾ !

ಜೀವಭಯದಿಂದ ಕುಬ್ಜನಾಗಿ ಕೈಹೊತ್ತು ನೀನು ಕುಳಿತಿರುವೆಯಾ !      || 1 ||

ಶಾಲಾ ಕಾಲೇಜು ವಿದ್ಯಾಲಯ ಅವು ನಡೆಸುವ ಪರೀಕ್ಷಾ ಪದ್ಧತಿ

ಜಾತ್ರೆ ಉತ್ಸವ ಮದುವೆ ರಥೋತ್ಸವ ಮುಂತಾದವುಗಳ ರದ್ಧತಿ

ಕಾಣದ ಕೊರೋನಾ ವೈರಸ್‍ನಿಂದ ಜಗತ್ತಿನಾದ್ಯಂತ ತುರ್ತುಪರಿಸ್ಥಿತಿ

ಹಿಂದೆಂದಿಗೂ ಕಂಡರಿಯದ ಕೇಳರಿಯದ ದಯನೀಯ ಸ್ಥಿತಿ || 2 ||

ಮರೆಯದಿರು ದಿನದೊಳು ಮೂರ್ನಾಲ್ಕು ಬಾರಿ ಕೈತೊಳೆಯುವುದು

ಆಲಿಂಗನ ಹಸ್ತಲಾಘವಕೆ ಬದಲು ಲೇಸು ಕರ ಮುಗಿಯುವುದು

ಈ ದಿನದೊಳು ಅತಿ ಕಡ್ಡಾಯವೊ ಮುಖಕೆ ಮಾಸ್ಕ್ ಧರಿಸುವುದು

ಇದೇ ರೀತಿ ಮುನ್ನೆಚ್ಚರಿಕೆ ವಹಿಸಿದರೆ ಯಾವ ತೊಂದರೆ ಇರದು          || 3 ||

ಸೋಂಕು ಪೀಡಿತರ ಸಂಪರ್ಕದಿಂದ ದೂರ ಇರುವುದ ಮರೆಯದಿರಿ

ಕೆಮ್ಮುವಾಗ ಸೀನುವಾಗ ಕರವಸ್ತ್ರ ಟಿಶ್ಯು ಪೇಪರ್ ತಪ್ಪದೆ ಬಳಸಿರಿ

ಕಣ್ಣು ಮೂಗು ಬಾಯಿ ಸ್ಪರ್ಶಿಸುವುದ ತಪ್ಪಿಸುತ ಸ್ವಚ್ಛತೆ ಕಾಯ್ದುಕೊಳ್ಳಿರಿ

ಮುಂಜಾಗ್ರತೆ ವಹಿಸಿದರೆ ಕರೋನಾ ವೈರಸ್‍ನಿಂದ ಭಯವಿಲ್ಲ ತಿಳಿಯಿರಿ           || 4 ||

ನಾವು ವಾಸಿಸುತ್ತಿರುವುದು ಏಷ್ಯ ಖಂಡಕೆ ಸೇರಿದ ಭವ್ಯ ಭಾರತದಲ್ಲಿ

ಪ್ರಾಚೀನ ಸಂಸ್ಕøತಿ, ಆಹಾರ, ವಿಜ್ಞಾನ, ವೈದ್ಯಕೀಯ ಜೀವನ ಪದ್ಧತಿಯಲ್ಲಿ

ಸಮಭಾಜಕ ರೇಖೆಯು ಹಾಯ್ದು ಹೋಗಿರುವ ಉಷ್ಣವಲಯದಲ್ಲಿ

ರೋಗ ನಿರೋಧಕ ಶಕ್ತಿಯು ನಮ್ಮೊಳಗೆ ಇರುವಾಗ ಭಯವು ಇನ್ನೆಲ್ಲಿ  || 5 ||

 

Related posts

ಕರೋನಾವೈರಸ್‌ ಸೋಂಕು: ಚೀನಾದಲ್ಲಿ ಸಾವಿನ ಸಂಖ್ಯೆ 910ಕ್ಕೇರಿಕೆ: 40,000 ಪ್ರಕರಣ ಪತ್ತೆ

Times fo Deenabandhu

ಕೊರೊನಾ ನಡುವೆಯೂ ಪಾಕಿಗಳ ಕಾಟ: ಎಲ್‌ಒಸಿಯಲ್ಲಿ ಉಗ್ರರ ಸದೆಬಡಿದ ಸೇನೆ!

ಎದ್ದಿರುವ ಒಕ್ಕಲಿಗ ಅಸ್ಮಿತೆಗೆ ನಾಯಕನಾರು?

Times fo Deenabandhu