Times of Deenabandhu
  • Home
  • ಜಿಲ್ಲೆ
  • ಪಾಟೀಲ ಪುಟ್ಟಪ್ಪ ನಿಧನಕ್ಕೆ ಮುರುಘಾ ಶರಣರ ಸಂತಾಪ
ಚಿತ್ರದುರ್ಗ ಜಿಲ್ಲೆ

ಪಾಟೀಲ ಪುಟ್ಟಪ್ಪ ನಿಧನಕ್ಕೆ ಮುರುಘಾ ಶರಣರ ಸಂತಾಪ

Spread the love

ನೇರ ನಡೆ-ನುಡಿ, ಕನ್ನಡಭಾಷೆ, ನೆಲ-ಜಲದ ಬಗ್ಗೆ ಅಪಾರ ಕಾಳಜಿ ಬದ್ಧತೆಯನ್ನು ಬದುಕಿನುದ್ದಕ್ಕು ಇಟ್ಟುಕೊಂಡವರು ನಾಡೋಜ ಪಾಟೀಲ ಪುಟ್ಟಪ್ಪನವರು. ಜಾತ್ಯಾತೀತ ಆಲೋಚನೆ, ಬದ್ಧವೈರಿಯನ್ನು ಪ್ರೀತಿಯಿಂದ ಮಾತನಾಡಿಸುವ ಜಾಯಮಾನ, ವೈಯಕ್ತಿಕ ಜೀವನದ ಬಗ್ಗೆ ಅವರಿಗಿದ್ದ ಪ್ರೀತಿ, ಆಸ್ತಿ ಹಣದ ಹಿಂದೆ ಬೀಳದ ಪ್ರಬುದ್ಧ ಆಲೋಚನೆ, ಕರ್ನಾಟಕ ಏಕೀಕರಣ, ಗೋಕಾಕ್ ಚಳವಳಿ ಸೇರಿದಂತೆ ಹಲವಾರು ಹೋರಾಟಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಅವರ ಮನೋಭಾವ ನಿಜಕ್ಕೂ ಆಶ್ಚರ್ಯ ಮೂಡಿಸುವಂತಹದ್ದು. ಅನೇಕ ಕೃತಿಗಳನ್ನು ರಚಿಸಿ ಹಲವು ಪತ್ರಿಕೆಗಳ ಸಂಪಾದಕರಾಗಿ ಕಾರ್ಯನಿರ್ವಹಿಸಿದ ಹಿರಿಯಜೀವ ಅದು. ಅವರ ಬದುಕೆ ಹೋರಾಟದ ಬದುಕು. ಶ್ರೀಮಠದೊಂದಿಗೆ ಅವರ ಅನ್ಯೋನ್ಯ ಸಂಬಂಧ ಇಂದು ನಿನ್ನೆಯದಲ್ಲ. ಹಲವು ಸಂದರ್ಭಗಳಲ್ಲಿ ಅನೇಕ ವಿಚಾರಗಳ ಬಗ್ಗೆ ಶ್ರೀಮಠದೊಂದಿಗೆ ಚರ್ಚೆ ನಡೆಸಿದ್ದಾರೆ. ಕೆಲವು ತಿಂಗಳುಗಳ ಹಿಂದಷ್ಟೆ ಅನಾರೋಗ್ಯ ಇದ್ದರೂ ಸಹ ಶ್ರೀಮಠಕ್ಕೆ ಬಂದು ಆಶೀರ್ವಾದವನ್ನು ಪಡೆದಿದ್ದರು. ಇತ್ತೀಚೆಗೆ ಅನಾರೋಗ್ಯದ ಹಿನ್ನೆಲೆಯಲ್ಲಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಾದಾಗ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಲಾಗಿತ್ತು. ಆದಾಗ್ಯು ವಯೋಸಹಜ ಹಾಗು ಶತಾಯುಷಿ ನಮ್ಮನ್ನಗಲಿರುವುದು ಕನ್ನಡ ನಾಡಿಗೆ ತುಂಬಲಾರದ ನಷ್ಟವುಂಟಾಗಿದೆ. ಅವರ ಅಗಲಿಕೆಯಿಂದ ಕುಟುಂಬವರ್ಗದವರಿಗೆ ಉಂಟಾಗಿರುವ ನೋವನ್ನು ಭರಿಸುವ ಶಕ್ತಿಯನ್ನು ಬಸವಾದಿ ಪ್ರಮಥರು ಕರುಣಿಸಲಿ ಎಂದು ಡಾ. ಶಿವಮೂರ್ತಿ ಮುರುಘಾ ಶರಣರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.


Spread the love

Related posts

ಬಿಎಸ್‌ಪಿ ರಾಜಕೀಯ ಪಕ್ಷವಷ್ಟೇ ಅಲ್ಲ ಅದೊಂದು ಸಾಮಾಜಿಕ ಪರಿವರ್ತನಾ ಆಂದೋಲನ

Times fo Deenabandhu

ಕನ್ನಡಭಾಷೆ ಬಳಸುವ ಮೂಲಕ ಬೆಳೆಸಬೇಕು: ಡಾ.ಹರಿಣಾಕ್ಷಿ

Times fo Deenabandhu

ನಿಗದಿತ ಅವಧಿಯ ಒಳಗಾಗಿ ಭತ್ತ ಹಲ್ಲಿಂಗ್ ಮಾಡಿ: ಅಕ್ಕಿ ಗಿರಣಿ ಮಾಲೀಕರಿಗೆ ಜಿಲ್ಲಾಧಿಕಾರಿ ಸೂಚನೆ

Times fo Deenabandhu
vulputate, mattis massa Phasellus neque. elit. ut dictum fringilla facilisis