September 27, 2020
Times of Deenabandhu
ಪ್ರಧಾನ ಸುದ್ದಿ ಮುಖ್ಯಾಂಶಗಳು ಸಾಹಿತ್ಯ/ಸಂಸ್ಕೃತಿ

‘ಪ್ರಪಂಚ’ ಬಿಟ್ಟು ಹೋದ ಪಾಪು ಅಂತ್ಯಕ್ರಿಯೆ; ಕನ್ನಡದ ಕಟ್ಟಾಳು ಲೀನ

ಹುಬ್ಬಳ್ಳಿ: ಹಿರಿಯ ಪತ್ರಕರ್ತ, ಸಾಹಿತಿ, ನಾಡೋಜ ಡಾಕ್ಟರ್ ಪಾಟೀಲ ಪುಟ್ಟಪ್ಪ ಅವರ ಅಂತ್ಯಕ್ರಿಯೆ ಹಾವೇರಿ ಜಿಲ್ಲೆಯ ಹಲಗೇರಿ ಗ್ರಾಮದಲ್ಲಿ ಸಕಲ ಸರಕಾರಿ ಗೌರವಗಳೊಂದಿಗೆ ಮಂಗಳವಾರ ಜರುಗಿತು.
ರಾಣೆಬೆನ್ನೂರ ತಾಲೂಕಿನ ಸ್ವಗ್ರಾಮ ಹಲಗೇರಿಯಲ್ಲಿ ಅವರ ಪಿತ್ರಾರ್ಜಿತ ಜಮೀನಿನಲ್ಲಿ ಅಂತ್ಯ ಕ್ರೀಯೆಯನ್ನು ನೆರವೇರಿಸಲಾಯಿತು.

ಈ ಸಂದರ್ಭದಲ್ಲಿ ಗೃಹ ಸಚಿವ ಬಸವರಾಜ ಬೋಮ್ಮಾಯಿ, ಬೃಹತ್ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್, ಕೃಷಿ ಸಚಿವ ಬಿ.ಸಿ ಪಾಟೀಲ, ಕೂಡಲ ಸಂಗಮದ ಬಸವ ಮೃತ್ಯುಂಜಯ ಸ್ವಾಮೀಜಿ , ತರಳಬಾಳು ಶಾಖಾಮಠದ ಪಂಡಿತಾರಾದ್ಯ ಸ್ವಾಮೀಜಿ, ಮುಂಡರಗಿಯ ನಿಜಗುಣನಾನಂದ ಸ್ವಾಮೀಜಿ, ಶಾಸಕ ಅರುಣಕುಮಾರ ಗುತ್ತೂರ, ಜಿ.ಪಂ ಅಧ್ಯಕ್ಷ ಬಸನಗೌಡ ದೇಸಾಯಿ, ಮಾಜಿ ಸಚಿವರಾದ ಎಚ್.ಕೆ.ಪಾಟೀಲ, ರುದ್ರಪ್ಪ ಲಮಾಣಿ, ಮಾಜಿ ಶಾಸಕ ಬಿ.ಎಚ್.ಬನ್ನಿಕೋಡ, ಮಾಜಿ ಸಂಸದ ಐ.ಜಿ.ಸನದಿ ಸೇರೊದಂತೆ ಅನೇಕ ಗಣ್ಯರು ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದರು.

Related posts

ಕುಟುಂಬದ ವ್ಯಾಮೋಹ ತೊರೆದು, ಪಕ್ಷದ ಒಳಿತಿಗಾಗಿ ಪ್ರಯತ್ನಿಸಿ: ಸೋನಿಯಾ ಗಾಂಧಿಗೆ ಭಿನ್ನರ ಮನವಿ

Times fo Deenabandhu

ದಂಗಾಗಿಸುತ್ತೆ ಕಾರಿನ ನಂಬರ್ ಪಡೆಯಲು ಉದ್ಯಮಿ ಕೊಟ್ಟ ಮೊತ್ತ

Times fo Deenabandhu

ನೂತನ ಸಚಿವರದ್ದು ಮತ್ತೆ ಕಾಯುವ ಸರದಿ: ಸೋಮವಾರ ಖಾತೆ ಹಂಚಿಕೆ ಸಾಧ್ಯತೆ?

Times fo Deenabandhu