Times of Deenabandhu
  • Home
  • ಪ್ರಧಾನ ಸುದ್ದಿ
  • ಕೊರೊನಾದಿಂದ ಕಂಗೆಟ್ಟಿದ್ದ ಚೀನಾದಲ್ಲಿ ಹೊಸ ಸಮಸ್ಯೆ, ಕೋವಿಡ್‌-19ನಿಂದ ವಿಚ್ಛೇದನ ಹೆಚ್ಚಳ
ಪ್ರಧಾನ ಸುದ್ದಿ ಮುಖ್ಯಾಂಶಗಳು ವಿದೇಶ

ಕೊರೊನಾದಿಂದ ಕಂಗೆಟ್ಟಿದ್ದ ಚೀನಾದಲ್ಲಿ ಹೊಸ ಸಮಸ್ಯೆ, ಕೋವಿಡ್‌-19ನಿಂದ ವಿಚ್ಛೇದನ ಹೆಚ್ಚಳ

ಬೀಜಿಂಗ್‌ (ಚೀನಾ): ಕೊರೊನಾದಿಂದ ತತ್ತರಿಸಿ ಸುಧಾರಿಸಿಕೊಳ್ಳುತ್ತಿರುವ ಚೀನಾದಲ್ಲಿ ಹೊಸದೊಂದು ಸಾಮಾಜಿಕ ಸಮಸ್ಯೆ ಆರಂಭವಾಗಿದೆ. ವಿವಾಹ ವಿಚ್ಛೇದನಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡಿದ್ದು, ಕೊರೊನಾದಿಂದ ದಾಂಪತ್ಯದಲ್ಲಿ ಬಿರುಕು ಮೂಡುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಮನೆಯಿಂದ ಹೊರಗೆ ಹೋದರೆ ಕೊರೊನಾ ವೈರಸ್‌ ಆವರಿಸಿಕೊಳ್ಳುವ ಭೀತಿಯಿಂದ ಮನೆಯಲ್ಲಿ ತಮಗೆ ತಾವೇ ದಿಗ್ಬಂಧನ ವಿಧಿಸಿಕೊಂಡಿರುವ ಹಲವು ಕುಟುಂಬಗಳಲ್ಲಿ ಬಿರುಕು ಹೆಚ್ಚುತ್ತಿದೆ. ಇದು ದಂಪತಿಗಳ ವಿಚ್ಛೇದನಕ್ಕೆ ಕಾರಣವಾಗುತ್ತಿದೆ ಎಂದು ಚೀನಾದ ವಿವಾಹ ನೋಂದಣಿ ಅಧಿಕಾರಿಗಳು ಆತಂಕ ಹೊರಹಾಕಿದ್ದಾರೆ.

ಫೆ. 24ರಿಂದ ಒಟ್ಟು 300 ದಂಪತಿ ವಿಚ್ಛೇದನಕ್ಕಾಗಿ ಅರ್ಜಿಯನ್ನು ಸಲ್ಲಿಸಿದ್ದಾರೆ. ಈ ಮುಂಚೆ ದಂಪತಿಗಳ ಪೈಕಿ ಇಬ್ಬರೂ ಕೆಲಸಕ್ಕೆ ಹೋಗುತ್ತಿದ್ದರು. ಇಲ್ಲವೇ ಪತಿ ಕೆಲಸಕ್ಕೆ ಹೋದರೆ ಪತ್ನಿ ಮನೆಯಲ್ಲಿ ಉಳಿಯುತ್ತಿದ್ದರು. ಇಬ್ಬರೂ ಒಟ್ಟಾಗಿ ಇರುತ್ತಿದ್ದ ಸಮಯ ಕಡಿಮೆಯಿತ್ತು. ಹಾಗಾಗಿ ಮನಸ್ತಾಪಗಳು ಕಡಿಮೆ ಇರುತ್ತಿದ್ದವು.
ಮನಸ್ತಾಪಗಳು ಇದ್ದರೂ ಶೀಘ್ರವೇ ಪರಿಹರಿಸಿಕೊಳ್ಳುತ್ತಿದ್ದರು. ಆದರೆ, ಕೊರೊನಾ ಭಯದಿಂದ ಮನೆಯಲ್ಲೇ ಬಂಧಿಗಳಾಗಿರುವ ದಂಪತಿ ಹೆಚ್ಚೆಚ್ಚು ಸಮಯ ಮನಸ್ತಾಪಗಳನ್ನು ಎದುರಿಸುತ್ತಿದ್ದಾರೆ ಎಂದು ನೈರುತ್ಯ ಚೀನಾದ ವಿವಾಹ ನೋಂದಣಿ ವ್ಯವಸ್ಥಾಪಕ ಲು ಶಿಜುನ್‌ ಅಭಿಪ್ರಾಯಪಟ್ಟಿದ್ದಾರೆ.
ಕೊರೊನಾ ವೈರಸ್‌ ಮೊದಲು ಕಾಣಿಸಿಕೊಂಡಿದ್ದು ಚೀನಾದ ವುಹಾನ್‌ ಪ್ರಾಂತ್ಯದಲ್ಲಿ, ಬಳಿಕ ಅಲ್ಲಿಂದ ವಿಶ್ವದ ಬಹುತೇಕ ಕಡೆ ಕೋವಿಡ್‌-19 ಸೋಂಕು ಹರಡಿದೆ. ಇದುವರೆಗೂ ಚೀನಾ ಸೇರಿ ವಿಶ್ವದಾದ್ಯಂತ 7,100 ಜನ ಕೊರೊನಾ ವೈರಸ್‌ನಿಂದ ಮೃತಪಟ್ಟಿದ್ದು, 1 ಲಕ್ಷ 82 ಸಾವಿರ ಜನರಲ್ಲಿ ಸೋಂಕು ಪತ್ತೆಯಾಗಿದೆ.

Related posts

ಸಿಎಎ ಜಾರಿ: ಬಾಂಗ್ಲಾಕ್ಕೆ ಹಿಂದಿರುಗುತ್ತಿರುವರ ಸಂಖ್ಯೆ ಹೆಚ್ಚಳ ಎಂದ ಬಿಎಸ್‌ಎಫ್‌

Times fo Deenabandhu

ಕೇಂದ್ರದ ಅಸಹಕಾರದಿಂದ ಬಡವಾದ ಬಿಎಸ್‌ವೈ ಆಯವ್ಯಯ

Times fo Deenabandhu

ಅಭಿಮಾನಿಯ ಮೊಬೈಲ್‌ ಕಸಿದುಕೊಂಡು ಸಲ್ಮಾನ್‌ ಖಾನ್‌ ಪರಾರಿ! ಸ್ಟಾರ್‌ ನಟನಿಗೆ ಇಂಥ ಬುದ್ಧಿ ಯಾಕೆ ಬಂತು?

Times fo Deenabandhu