Times of Deenabandhu
  • Home
  • ಪ್ರಧಾನ ಸುದ್ದಿ
  • ರೈಲು, ವಿಮಾನ ಟಿಕೆಟ್‌ನ ರದ್ದತಿ ಶುಲ್ಕ ವಿಧಿಸದಂತೆ ಸರ್ಕಾರಕ್ಕೆ ವೆಂಕಯ್ಯನಾಯ್ಡು ಸೂಚನೆ
ದೇಶ ಪ್ರಧಾನ ಸುದ್ದಿ ಮುಖ್ಯಾಂಶಗಳು ರಾಜಕೀಯ

ರೈಲು, ವಿಮಾನ ಟಿಕೆಟ್‌ನ ರದ್ದತಿ ಶುಲ್ಕ ವಿಧಿಸದಂತೆ ಸರ್ಕಾರಕ್ಕೆ ವೆಂಕಯ್ಯನಾಯ್ಡು ಸೂಚನೆ

Spread the love

ನವದೆಹಲಿ: ಕೊರೊನವೈರಸ್ ದೃಷ್ಟಿಯಿಂದ ದೃಢಪಡಿಸಿದ(ಕನ್ಫರ್ಮ್) ರೈಲ್ವೆ ಮತ್ತು ವಿಮಾನ ಟಿಕೆಟ್‌ಗಳ ರದ್ದತಿ(ಕ್ಯಾನ್ಸಲೇಷನ್‍) ಶುಲ್ಕವನ್ನು ರದ್ದುಪಡಿಸುವಂತೆ ರಾಜ್ಯಸಭಾ ಸಭಾಪತಿ ಎಂ.ವೆಂಕಯ್ಯ ನಾಯ್ಡು ಸೋಮವಾರ ಸರ್ಕಾರಕ್ಕೆ ಸೂಚಿಸಿದ್ದಾರೆ.
ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಸಿಪಿಎಂ) ಸದಸ್ಯ ಎಲಾಮರಮ್ ಕರೀಮ್ ವಿಷಯ ಪ್ರಸ್ತಾಪಿಸಿ, ಮಾರಣಾಂತಿಕ ಕೋವಿದ್‍-19 ವೈರಸ್‍ ದೇಶಾದ್ಯಂತ ಜನರ ಜೀವನದ ಮೇಲೆ ಪರಿಣಾಮ ಬೀರಿದೆ. ಸರ್ಕಾರದ ಸಲಹೆಯಂತೆ ಹೆಚ್ಚಿನ ಜನರು ಪ್ರಯಾಣವನ್ನು ನಿಲ್ಲಿಸುತ್ತಿದ್ದಾರೆ. ಎಲ್ಲ ಪ್ರವಾಸಿ ಸ್ಥಳಗಳು, ಯಾತ್ರಾ ಸ್ಥಳಗಳು, ಶಾಲಾ- ಕಾಲೇಜುಗಳು ಮತ್ತು ಇತರ ಶಿಕ್ಷಣ ಸಂಸ್ಥೆಗಳನ್ನು ಮುನ್ನೆಚ್ಚರಿಕೆ ಕ್ರಮವಾಗಿ ಮುಚ್ಚಿರುವುದರಿಂದ ಪ್ರಯಾಣಿಕರು ತಾವು ಕಾಯ್ದಿರಿಸಿರುವ ಟಿಕೆಟ್ ರದ್ದುಗೊಳಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಟಿಕೆಟ್ ರದ್ದತಿ ಶುಲ್ಕ ವಿಧಿಸಬಾರದು ಎಂದು ಹೇಳಿದರು .
ಈ ವಿಷಯವನ್ನು ಸರ್ಕಾರದೊಂದಿಗೆ ಚರ್ಚಿಸಿ, ಸದಸ್ಯರ ಸಲಹೆಗಳನ್ನು ಪರಿಗಣಿಸುವಂತೆ ನಾಯ್ಡು ಅವರು ಸಭಾನಾಯಕ ತಾವರ್ ಚಂದ್ ಗೆಹ್ಲೋಟ್ ಅವರಿಗೆ ಸೂಚಿಸಿದರು.
ಪ್ರತಿಪಕ್ಷಗಳ ಅನೇಕ ಸದಸ್ಯರು ರದ್ದತಿ ಶುಲ್ಕ ಮನ್ನಾ ವಿಷಯಕ್ಕೆ ಬೆಂಬಲ ವ್ಯಕ್ತಪಡಿಸಿದರು.


Spread the love

Related posts

ಕೊರೋನಾ ವೈರಸ್ ಎಚ್ಚರಿಕೆಗಾಗಿ ಯಕ್ಷಗಾನದ ಮೂಲಕ ಜನಜಾಗೃತಿ

Times fo Deenabandhu

ಭಾರತ್‌ ಬಂದ್, ಬೆಂಗಳೂರಲ್ಲಿ ಪ್ರತಿಭಟನೆಗೆ ಅನುಮತಿ ಇಲ್ಲ: ಪೊಲೀಸ್‌ ಆಯುಕ್ತ

Times fo Deenabandhu

ಭಾರತದ ಪ್ರವಾಸದಲ್ಲಿ ಪಡೆದ ಆತ್ಮೀಯ ಸ್ವಾಗತ ನೆನೆದು, ಧನ್ಯವಾದ ತಿಳಿಸಿದ ಅಮೆರಿಕ ಪ್ರಥಮ ಮಹಿಳೆ ಮೆಲನಿಯಾ ಟ್ರಂಪ್​

Times fo Deenabandhu
risus. ut nunc tristique leo. Phasellus