Times of Deenabandhu
  • Home
  • ಪ್ರಧಾನ ಸುದ್ದಿ
  • ‘ಕರೆದುಕೊಂಡು ಬಂದವರನ್ನು ಬಿಟ್ಟು ಹೋಗ್ತೀರಾ’ ಎಂದು ಶೋಭಾ ಹೇಳಿದ್ದು ಯಾರಿಗಾಗಿ?
ಪ್ರಧಾನ ಸುದ್ದಿ ಮುಖ್ಯಾಂಶಗಳು ರಾಜಕೀಯ ರಾಜ್ಯ

‘ಕರೆದುಕೊಂಡು ಬಂದವರನ್ನು ಬಿಟ್ಟು ಹೋಗ್ತೀರಾ’ ಎಂದು ಶೋಭಾ ಹೇಳಿದ್ದು ಯಾರಿಗಾಗಿ?

ಬೆಂಗಳೂರು: ‘ಜೊತೆಯಲ್ಲಿ ಕರೆದುಕೊಂಡು ಬಂದು ಈಗ ಬಿಟ್ಟು ಹೋಗುತ್ತೀರಾ?’ ಎಂದು ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪ ಅವರಿಗೆ ಸಂಸದೆ ಶೋಭಾ ಕರಂದ್ಲಾಜೆ ಅವರು ಕೇಳಿದ ಪ್ರಶ್ನೆ ಯಾರನ್ನು ಕುರಿತಾದದ್ದು ಎಂಬುದಕ್ಕೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಸ್ಪಷ್ಟನೆ ನೀಡಿದ್ದಾರೆ.
‘ಕರೆದುಕೊಂಡು ಬಂದವರನ್ನು ಹೋಗುವಾಗ ಬಿಟ್ಟು ಹೋಗ್ತೀರಾ’ ಎಂದು ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್ ಅವರನ್ನು ಉದ್ದೇಶಿಸಿ ಶೋಭಾ ಕರಂದ್ಲಾಜೆ ಹೇಳಿದ್ದೇ ಹೊರತು ಶೋಭಾ ಅವರು ತಮ್ಮನ್ನು ಬಿಟ್ಟು ಹೋಗುತ್ತೀರಾ ಎಂದು ಯಡಿಯೂರಪ್ಪ ಅವರನ್ನು ಪ್ರಶ್ನಿಸಿದ್ದಲ್ಲ’ ಎಂದು ಬೊಮ್ಮಾಯಿ ಹೇಳಿದ್ದಾರೆ.

‘ಯಡಿಯೂರಪ್ಪ ಜತೆ ಬೆಳಗಾವಿಗೆ ಬಂದಿದ್ದ ರವಿಕುಮಾರ್ ವಾಪಸ್ ಬೆಂಗಳೂರಿಗೆ ಬರಲು ಬೇರೊಂದು ವಿಮಾನದಲ್ಲಿ ಟಿಕೆಟ್ ಮಾಡಿಸಿದ್ದರು. ತಾವು ಹುಬ್ಬಳ್ಳಿಗೆ ಬರದೇ ಬೆಂಗಳೂರಿಗೆ ಹೋಗುವುದಾಗಿ ಹೇಳಿದ್ದರು. ಹುಬ್ಬಳ್ಳಿಗೆ ಹೊರಟಿದ್ದ ಯಡಿಯೂರಪ್ಪ ಅವರನ್ನು ಉದ್ದೇಶಿಸಿ ಮಾತನಾಡಿದ ಶೋಭಾ, ರವಿಕುಮಾರ್ ಅವರನ್ನು ಬಿಟ್ಟು ಹೋಗುತ್ತೀದ್ದರಲ್ಲ ಎಂಬರ್ಥದಲ್ಲಿ ಪ್ರಶ್ನಿಸಿದರು. ಹಿಂದೆ ನಡೆದ ಸಂಗತಿಗಳು ಗೊತ್ತಿಲ್ಲದೇ ಕೊನೆಯ ಮಾತನ್ನಷ್ಟೇ ಕೇಳಿಸಿಕೊಂಡಿದ್ದರಿಂದಾಗಿ ಮಾಹಿತಿಗಳು ತಪ್ಪಾಗಿ ಬಿಂಬಿತವಾಗಿವೆ’ ಎಂದು ಬೊಮ್ಮಾಯಿ ಸ್ಪಷ್ಟಪಡಿಸಿದರು

Related posts

ಕೆಫೆ ಕಾಫಿ ಡೇ ಖಾತೆಯಿಂದ 2,000 ಕೋಟಿ ರೂ. ಮಂಗಮಾಯ!

Times fo Deenabandhu

ಮಂತ್ರಿಯಾಗುತ್ತೇನೋ ಇಲ್ಲವೋ ಗೊತ್ತಿಲ್ಲ ಆದರೆ ಮಂತ್ರಿಗಿರಿಗಾಗಿ ಬೆನ್ನತ್ತಿ ಹೋಗುವುದಿಲ್ಲ.

Times fo Deenabandhu

ದೇಶದ 206 ಜನರಲ್ಲಿ ಕೋವಿಡ್‌ –19 ಸೋಂಕು ದೃಢ: ಐಸಿಎಂಆರ್‌

Times fo Deenabandhu