Times of Deenabandhu
  • Home
  • ನ್ಯೂಸ್
  • ರಾಜ್ಯ
  • ಕರ್ನಾಟಕ ಲೋಕಸೇವಾ ಆಯೋಗವು ಐಚ್ಛಿಕ ಕನ್ನಡವನ್ನು ರದ್ದು ಮಾಡದಿರಲಿ: ಡಾ.ಪುರುಷೋತ್ತಮ ಬಿಳಿಮಲೆ ಆಗ್ರಹ
ಅಂಕಣ ಮುಖ್ಯಾಂಶಗಳು ರಾಜ್ಯ

ಕರ್ನಾಟಕ ಲೋಕಸೇವಾ ಆಯೋಗವು ಐಚ್ಛಿಕ ಕನ್ನಡವನ್ನು ರದ್ದು ಮಾಡದಿರಲಿ: ಡಾ.ಪುರುಷೋತ್ತಮ ಬಿಳಿಮಲೆ ಆಗ್ರಹ

ದೆಹಲಿ ಮಾ.14: ಕರ್ನಾಟಕ ಲೋಕಸೇವಾ ಆಯೋಗ (KPSC)ವು ಇನ್ನು ಮುಂದೆ KAS ಮುಖ್ಯ ಪರೀಕ್ಷೆಯಲ್ಲಿ 500 ಅಂಕಗಳಿಗೆ ನಡೆಯುವ “ಐಚ್ಛಿಕ ವಿಷಯ”ವನ್ನು ಕೈಬಿಡಲು ನಿರ್ಧರಿಸಿದೆ. ಇದರಿಂದ ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ಕಲಿಕೆಗೆ ಅಪಾರ ನಷ್ಟ ಉಂಟಾಗುತ್ತದೆ ಎಂದು ದೆಹಲಿಯ ಜವಾಹರಲಾಲ ನೆಹರೂ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಪೀಠದ ಮುಖ್ಯಸ್ಥರು,ಸಾಹಿತಿಗಳು ಆದ ಡಾ.ಪುರುಷೋತ್ತಮ ಬಿಳಿಮಳೆ ಆಗ್ರಹಿಸಿದ್ದಾರೆ.

ಅವರು ತಮ್ಮ ಹೇಳಿಕೆಯಲ್ಲಿ ಸಾಮಾನ್ಯವಾಗಿ KAS ಪರೀಕ್ಷೆಗೆ ಲಕ್ಷಾಂತರ ವಿದ್ಯಾರ್ಥಿಗಳು ಅರ್ಜಿ ಹಾಕುತ್ತಾರೆ. ಆನಂತರ ಆರಂಭದಿಂದಲೇ ಅವರು ಪೂರ್ವಭಾವಿ (ಪ್ರಿಲಿಮ್ಸ್) ಮತ್ತು ಮುಖ್ಯ (ಮೇನ್ಸ್) ಪರೀಕ್ಷೆಗಳಿಗೆ ಒಟ್ಟೊಟ್ಟಿಗೆ ಓದಲು ಪ್ರಾರಂಭಿಸುತ್ತಾರೆ. ಮುಂದಿನ ಮುಖ್ಯ ಪರೀಕ್ಷೆಗೆ “ಕನ್ನಡ ಸಾಹಿತ್ಯ”ವನ್ನು ಐಚ್ಛಿಕ ವಿಷಯವನ್ನಾಗಿ ಸಾವಿರಾರು ಜನರು ಆಯ್ಕೆ ಮಾಡಿಕೊಳ್ಳುತ್ತಾರೆ. ಕೇಂದ್ರ ಲೋಕಸೇವಾ ಆಯೋಗ (UPSC) ನಡೆಸುವ IAS ಪರೀಕ್ಷೆಯಲ್ಲೂ 500 ಅಂಕಗಳಿಗೆ “ಕನ್ನಡ ಸಾಹಿತ್ಯ” ಇದೆಯಾದ್ದರಿಂದ KAS ಹಾಗೂ IAS ಈ ಎರಡು ಪರೀಕ್ಷೆಗಳಿಗೆ ಉಪಯೋಗವಾಗುತ್ತದೆಂದು ವಿದ್ಯಾರ್ಥಿಗಳು ಕನ್ನಡ ಸಾಹಿತ್ಯವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಪಂಪ ಭಾರತ, ಕುಮಾರವ್ಯಾಸ ಭಾರತ, ನಂಬಿಯಣ್ಣನ ರಗಳೆ, ವಚನಗಳು, ಕೀರ್ತನೆಗಳು, ಭರತೇಶ ವೈಭವ, ಹೊಸಗನ್ನಡ ಕಾವ್ಯ, ಹೊಸಗನ್ನಡ ಕತೆಗಳು, ಬೆಟ್ಟದ ಜೀವ, ಮಾಧವಿ, ದೇವರು, ತುಘಲಕ್, ಒಡಲಾಳ, ಶೂದ್ರ ತಪಸ್ವಿ, ಕನ್ನಡ ಭಾಷಾ ಚರಿತ್ರೆ, ಕನ್ನಡ ಜನಪದ ಸಾಹಿತ್ಯ – ಹೀಗೆ ಅವರ ತಾಯ್ನುಡಿಯಲ್ಲಿ ರಚಿತವಾದ ಅತ್ಯುತ್ತಮ ಕೃತಿಗಳನ್ನು ಓದುತ್ತಾರೆ. ಪರೀಕ್ಷೆಗಳಲ್ಲಿ ಪಾಸಾಗಲಿ ಬಿಡಲಿ, ಈ ಪುಸ್ತಕಗಳನ್ನು ಓದುವ ಸಂತೋಷ ಅವರದು. ಈ ಪಠ್ಯಗಳನ್ನು ಪಾಠಮಾಡುವಾಗ ಅಭ್ಯರ್ಥಿಗಳು ತೋರುವ ಉತ್ಸಾಹವು ಅವರ್ಣನೀಯವಾದುದು. ಇವರು ಮುಂದೆ ಅಧಿಕಾರಿಗಳಾಗಿ ಬಂದಾಗ ಕನ್ನಡ ಬೆಳೆಯುತ್ತದೆ.

ಇದರಿಂದ ಕನ್ನಡ ಸಾಹಿತ್ಯದ ಪುಸ್ತಕಗಳು ಸಾವಿರಗಟ್ಟಲೆಯಲ್ಲಿ ಮಾರಾಟವಾಗುತ್ತವೆ.  ಹೊಸತಲೆಮಾರಿನಲ್ಲಿ ಕನ್ನಡ ಬಗ್ಗೆ ಅಭಿಮಾನ ಹುಟ್ಟುತ್ತದೆ. ಆದರೀಗ KPSC ಮುಖ್ಯ ಪರೀಕ್ಷೆಯಲ್ಲಿ “ಐಚ್ಛಿಕ ವಿಷಯ”ಗಳನ್ನು ಕೈಬಿಡಲು ತೀರ್ಮಾನಿಸಿದೆ. ಇದರಿಂದ “ಕನ್ನಡ ಸಾಹಿತ್ಯ”ವೂ ಕೈ ಬಿಟ್ಟು ಹೋಗುತ್ತಿದೆ. Bhagyalakshmi V Bilijajiಅವರು ಹೇಳಿರುವಂತೆ ‘ ಕನ್ನಡವನ್ನು ಹೊಸ ತಲೆಮಾರಿಗೆ ಕಲಿಸಲು ಇದ್ದ ಇಂತಹ ಸುವರ್ಣ ಅವಕಾಶವನ್ನು KPSC ನಾಶ ಮಾಡುತ್ತಿದೆ.

ಆಗಲೇ ಕನ್ನಡ ಭಾಷೆಯ ಬೆಳವಣಿಗೆ 3.75% ಗೆ ಇಳಿದಿದೆ. ಈಗ ಇನ್ನಷ್ಟು ವೇಗವಾಗಿ ಇಳಿಯಲಿದೆ.

ಕರ್ನಾಟಕದಾದ್ಯಂತ ಕ್ರಿಯಾಶೀಲವಾಗಿರುವ ಕನ್ನಡ ಪರ ಸಂಘಟನೆಗಳು ಐಚ್ಛಿಕ ಕನ್ನಡ ರದ್ದಾಗದಂತೆ ನೋಡಿಕೊಳ್ಳಬೇಕೆಂದು  ಡಾ.ಪುರುಷೋತ್ತಮ ಬಿಳಿಮಲೆಯವರು  ವಿನಂತಿಸಿದ್ದಾರೆ.

 

Related posts

ಮೂಲಗಳ ಪ್ರಕಾರ ನಟಿ ದೀಪಿಕಾ ಪಡುಕೋಣೆ ಜೆಎನ್​ಯು ಭೇಟಿ ಹಿಂದಿನ ಉದ್ದೇಶವೇ ಬೇರೆಯಂತೆ?

Times fo Deenabandhu

ಗಾಂಧಿಗೆ ಯಾಕೆ ಭಾರತರತ್ನ ನೀಡಿಲ್ಲ ಎಂದು ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಕೋರ್ಟ್‌

Times fo Deenabandhu

ಮಾ. 4ಕ್ಕೆ ಪೂರ್ಣ ಪ್ರಮಾಣದ ಬಜೆಟ್

Times fo Deenabandhu