Times of Deenabandhu
  • Home
  • ಜಿಲ್ಲೆ
  • ಕೋವಿದ್-19 ಹರಡುವುದನ್ನು ತಡೆಯಲು ಮುನ್ನೆಚ್ಚರಿಕೆ ಕ್ರಮ: ಕುವೆಂಪು ವಿವಿ ಘಟಿಕೋತ್ಸವ ಮುಂದೂಡಿಕೆ
ಜಿಲ್ಲೆ ನಮ್ಮ ವಿಶೇಷ ಶಿಕ್ಷಣ ಶಿವಮೊಗ್ಗ

ಕೋವಿದ್-19 ಹರಡುವುದನ್ನು ತಡೆಯಲು ಮುನ್ನೆಚ್ಚರಿಕೆ ಕ್ರಮ: ಕುವೆಂಪು ವಿವಿ ಘಟಿಕೋತ್ಸವ ಮುಂದೂಡಿಕೆ

ಶಂಕರಘಟ್ಟ, ಮಾ. 13: ಕೋವಿದ್-19 ವೈರಸ್ ಹರಡುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ವಿಶ್ವವಿದ್ಯಾಲಯ ಧನ ಸಹಾಯ ಆಯೋಗ (ಯುಜಿಸಿ) ಮತ್ತು ಕರ್ನಾಟಕ ಸರ್ಕಾರದ ನಿರ್ದೇಶಾನುಸಾರ ಕುವೆಂಪು ವಿಶ್ವವಿದ್ಯಾಲಯದ 30ನೇ ವಾರ್ಷಿಕ ಘಟಿಕೋತ್ಸವವನ್ನು ಮುಂದೂಡಲಾಗಿದೆ.

ಮಾರಣಾಂತಿಕ ಕೊರೋನಾ ಹರಡುವುದನ್ನು ತಡೆಯಲು ಮುನ್ನೆಚ್ಚರಿಕಾ ಕ್ರಮವಾಗಿ ಕಾಲೇಜು-ವಿವಿಗಳಲ್ಲಿ ಸಭೆ-ಸಮಾರಂಭಗಳನ್ನು ಹಮ್ಮಿಕೊಳ್ಳದಿರಲು ಯುಜಿಸಿ ಮತ್ತು ಕರ್ನಾಟಕ ಸರ್ಕಾರ ಸೂಚನೆ ನೀಡಿವೆ. ಹೀಗಾಗಿ ಮಾರ್ಚ್ 28ಕ್ಕೆ ನಿಗದಿಯಾಗಿದ್ದ ವಿವಿಯ ಘಟಿಕೋತ್ಸವವನ್ನು ಅನಿರ್ದಿಷ್ಠಾವಧಿಗೆ ಮುಂದೂಡಲಾಗಿದೆ ಮತ್ತು ವಿಶ್ವವಿದ್ಯಾಲಯದಲ್ಲಿ ನಡೆಯಲಿದ್ದ ವಿಚಾರ ಸಂಕಿರಣ, ಸಮಾವೇಶಗಳನ್ನು ಮುಂದೂಡಲಾಗಿದೆ ಎಂದು ವಿವಿಯ ಕುಲಪತಿ ಪ್ರೊ. ಬಿ.ಪಿ.ವೀರಭದ್ರಪ್ಪ ತಿಳಿಸಿದರು.

Related posts

SSLC ಪರೀಕ್ಷೆ ಸುಗಮ ನಿರ್ವಹಣೆಗೆ ಆರೋಗ್ಯ ಇಲಾಖೆ ಸಂಪೂರ್ಣ ಸಹಕಾರ: ಸುರೇಶ್‌ ಕುಮಾರ

ಫೆ.೧೫ ರಂದು ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣ

Times fo Deenabandhu

ಸರಕಾರಿ ನೌಕರರಿಗೆ ಹಾಗೂ ನಿರಾಶ್ರಿತರಿಗೆ ಊಟದ ವ್ಯವಸ್ಥೆ

Times fo Deenabandhu