Times of Deenabandhu
  • Home
  • ಜಿಲ್ಲೆ
  • ಸಂತೆ ಹಾರಾಜು ಪ್ರಕ್ರಿಯೆ ಹೊಸದಾಗಿ ನಡೆಸಲು ಆಗ್ರಹ
ಚಿಕ್ಕಮಗಳೂರು ಜಿಲ್ಲೆ

ಸಂತೆ ಹಾರಾಜು ಪ್ರಕ್ರಿಯೆ ಹೊಸದಾಗಿ ನಡೆಸಲು ಆಗ್ರಹ

ಮೂಡಿಗೆರೆ : ಪಟ್ಟಣದಲ್ಲಿ ಪ್ರತಿ ಶುಕ್ರವಾರ ವಿದ್ಯಾನಗರದಲ್ಲಿ ನಡೆಯುವ ವಾರದ ಸಂತೆಯ ಸುಂಕ ವಸೂಲಿ ಹರಾಜು ಪ್ರಕ್ರಿಯೆಯಲ್ಲಿ ಒಳ ಒಪ್ಪಂದ ಮಾಡಿಕೊಂಡು ಕಡಿಮೆ ಬೆಲೆಗೆ ಹರಾಜು ಮಾಡುವ ನಾಟಕವಾಡಿದ್ದಾರೆ. ಈ ಹರಾಜು ಪ್ರಕ್ರಿಯೆಯನ್ನು ರದ್ದುಪಡಿಸಿ ಹೊಸದಾಗಿ ಹರಾಜು ನಡೆಸಬೇಕೆಂದು ಬಿಎಸ್‌ಪಿ ಮುಖಂಡ ಬಿ.ರಾಮು ಒತ್ತಾಯಿಸಿದ್ದಾರೆ.
ಗುರುವಾರ ಹೇಳಿಕೆ ನೀಡಿರುವ ಅವರು, ಕಳೆದ ವರ್ಷ ವಾರದ ಸಂತೆಯನ್ನು ೬.೨೦ ಲಕ್ಷ ರೂ.ಗೆ ಬಿಡ್ ಕೂಗಲಾಗಿತ್ತು. ಈ ಬಾರಿ ಪಟ್ಟಣ ಪಂಚಾಯಿತಿ ಅಧಿಕಾರಿಗಳು ನಡೆಸಿದ ಹರಾಜಿನಲ್ಲಿ ೩.೫ ಲಕ್ಷ ರೂ.ಗೆ ಬಿಡ್ ಕೂಗಿದ್ದಾರೆ. ಪ್ರತಿ ವರ್ಷ ಹೆಚ್ಚಿನ ದರಕ್ಕೆ ಬಿಡ್ ಕೂಗುತ್ತಿದ್ದರೂ ಈ ಬಾರಿ ಮಾತ್ರ ಕೆಲ ಪ್ರಭಾವಿಗಳೊಂದಿಗೆ ಪ.ಪಂ. ಅಧಿಕಾರಿಗಳು ಒಳ ಒಪ್ಪಂದ ಮಾಡಿಕೊಂಡು ಕಳೆದ ವರ್ಷಕ್ಕಿಂತ ಕಡಿಮೆ ದರಕ್ಕೆ ಬಿಡ್ ಕೂಗಿ ಸರಕಾರಕ್ಕೆ ವಂಚಿಸಿದ್ದಾರೆಂದು ದೂರಿದ್ದಾರೆ.
ಪಟ್ಟಣದ ಪೊಲೀಸ್ ಠಾಣೆ ಎದುರಿನಿಂದ ವಿದ್ಯಾನಗರದ ಸಂತೆಯ ಸ್ಥಳದವರೆಗೂ ಸುಮಾರು ೬೦೦ಕ್ಕೂ ಅಧಿಕ ಅಂಗಡಿಗಳನ್ನು ಪ್ರತಿ ಶುಕ್ರವಾರ ತೆರೆಯಲಾಗುತ್ತದೆ. ಪ್ರತಿ ಅಂಗಡಿಯಿಂದ ಬಿಡ್‌ದಾರರು ೫೦ರಿಂದ ೨೦೦ ರೂಗಳ ವರೆಗೂ ಸುಂಕ ವಸೂಲಿ ಮಾಡುತ್ತಾರೆ. ಇದರಿಂದ ಹರಾಜಿನಲ್ಲಿ ಪಡೆದವರು ವಾರ್ಷಿಕ ೨೦ ಲಕ್ಷ ಆದಾಯ ಪಡೆಯಬಹುದು. ಈ ಎಲ್ಲಾ ಮಾಹಿತಿ ಪ.ಪಂ. ಅಧಿಕಾರಿಗಳಿಗೆ ತಿಳಿದಿದ್ದರೂ, ಬಿಡ್‌ದಾರರೊಂದಿಗೆ ಶಾಮೀಲಾಗಿ ಒಳ ಒಪ್ಪಂದ ಮಾಡಿಕೊಂಡು ಬಿಡ್‌ದಾರರಿಂದ ೨ ಲಕ್ಷ ಮುಂಗಡ ಹಣ ಪಡೆದು ಬೇರೆಯವರಿಗೆ ಬಿಡ್‌ನಲ್ಲಿ ಪಾಲ್ಗೊಳ್ಳದಂತೆ ಮಾಡಿದ್ದಾರೆಂದು ಆರೋಪಿಸಿದ್ದಾರೆ.
ಹರಾಜು ಪ್ರಕ್ರಿಯೆ ನಡೆದು ೧೫ ದಿನವಾಗಿದೆ. ಹರಾಜಿನ ಅನುಮೋದನೆಗಾಗಿ ಜಿಲ್ಲಾಧಿಕಾರಿಗಳಿಗೆ ಕಳಿಸಲಾಗಿದೆ. ಜಿಲ್ಲಾಧಿಕಾರಿಗಳು ಕಡಿಮೆ ದರದ ಹರಾಜು ಒಪ್ಪಕೊಳ್ಳಬಾರದು. ಹರಾಜು ಪ್ರಕ್ರಿಯೆಯನ್ನು ರದ್ದುಗೊಳಿಸಿ ಮರು ಹರಾಜು ನಡೆಸಲು ಕ್ರಮ ಕೈಗೊಳ್ಳಬೇಕು. ಕಡಿಮೆ ಮೊತ್ತದ ಮುಂಗಡ ಹಣ ಪಡೆದು ಎಲ್ಲರೂ ಹರಾಜಿನಲ್ಲಿ ಭಾಗವಹಿಸುವಂತೆ ಅನುವು ಮಾಡಿಕೊಡಬೇಕೆಂದು ಒತ್ತಾಯಿಸಿದ್ದಾರೆ.

ಸರಕಾರಿ ನೌಕರರು ಸಾರ್ವಜನಿಕರಿಗೆ ಉತ್ತಮ ಸೇವೆ ನೀಡಬೇಕು: ಎಚ್.ಎಂ.ರಮೇಶ್

ಮೂಡಿಗೆರೆ: ರಾಜ್ಯ ಸರಕಾರದ ನೌಕರರು ತಮ್ಮ ದೈನಂದಿನ ಕರ್ತವ್ಯದಲ್ಲಿ ಶ್ರದ್ದೆ, ಭಕ್ತಿಯಿಂದ ಸಾರ್ವಜನಿಕರ ಸೇವೆಯಲ್ಲಿ ತೊಡಗಿ ಸರಕಾರಕ್ಕೆ ಉತ್ತಮ ಹೆಸರು ತರಬೇಕೆಂದು ತಹಸೀಲ್ದಾರ್ ಎಚ್.ಎಂ.ರಮೇಶ್ ಕರೆ ನೀಡಿದರು.
ಅವರು ಬುಧವಾರ ಸಂಜೆ ಪಟ್ಟಣದ ಶಾಸಕರ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಆವರಣದ ಉರ್ದುಶಾಲೆಯಲ್ಲಿ ಕರ್ನಾಟಕ ರಾಜ್ಯ ಸರಕಾರಿ ಮುಸ್ಲಿಂ ನೌಕರರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಹಾಗೂ ತಾಲೂಕು ಘಟಕದ ವತಿಯಿಂದ ಮುದ್ರಿಸಿದ ವಾರ್ಷಿಕ ಕ್ಯಾಲೆಂಟರ್ ಬಿಡುಗಡೆಗೊಳಿಸಿ ಮಾತನಾಡಿದರು. ಸಾರ್ವಜಜಿಕರು ತಮ್ಮ ಮೂಲಬೂತ ಸಮಸ್ಯೆಗಳಾದ ಕುಡಿಯುವ ನೀರು, ರಸ್ತೆ,ವಿದ್ಯುತ್ ಅಲ್ಲದೇ ತಮ್ಮ ಮಕ್ಕಳಶಿಕ್ಷಣಕ್ಕಾಗಿ ಸಹಾಯಧನ, ವೃದ್ಧಾಪ್ಯವೇತನ, ಕುಟುಂಬ ಪಡಿತರ ಚೀಟಿ, ಆದಾಯ ದೃಡೀಕರಣಕ್ಕಾಗಿ ಅರ್ಜಿಗಳನ್ನು ಹಿಡಿದು ಕಚೇರಿಯಿಂದ ಕಚೇರಿಗೆ ಅಲೆದಾಡುತ್ತಿರುವುದು ಕಂಡು ಬರುತ್ತಿದೆ. ಅಂತವರ ಅರ್ಜಿಯನ್ನು ತ್ವರಿತವಾಗಿ ವಿಲೇವಾರಿ ಮಾಡಿಕೊಟ್ಟಲ್ಲಿ ರೈತರು, ಕೂಲಿ ಕಾರ್ಮಿಕರು ಹಾಗೂ ಸಾರ್ವಜನಿಕರಿಗೆ ಸಹಕಾರಿಯಾಗುತ್ತದೆ. ಆ ನಿಟ್ಟಿನಲ್ಲಿ ಸರಕಾರಿ ನೌಕರರು ಶ್ರಮ ವಹಿಸಬೇಕೆಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮುಸ್ಲಿಂ ಸರಕಾರಿ ನೌಕರರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಫೈರೋಜ್ ಅಹಮ್ಮದ್ ಮಾತನಾಡಿ, ಉನ್ನತ ಮಟ್ಟದ ಅಧಿಕಾರಿಗಳ ಮಾರ್ಗದರ್ಶನದಂತೆ ಪ್ರತಿನಿತ್ಯ ದುಡಿಯುತ್ತಿರುವ ರಾಜ್ಯ ಸರಕಾರಿ ನೌಕರರು ಅನೇಕಸಂಕಷ್ಟವನ್ನು ಎದುರಿಸುತ್ತಾರೆ. ವರ್ಗಾವಣೆಗೊಂಡಾಗ ವಾಸದ ಮನೆ,ಮಕ್ಕಳ ವಿದ್ಯಾಭ್ಯಾಸ ಮತ್ತು ಜೀವನದ ಅಗತ್ಯತೆಗೆ ಬೇಕಾದ ಸವಲತ್ತುಗಳಿಗಾಗಿ ಪರಿತಪಿಸಬೇಕಾಗುತ್ತದೆ. ಅಂತಹ ನೌಕರರಿಗೆ ಅಧಿಕಾರಿಗಳು ಅಗತ್ಯ ಸವಲತ್ತುಗಳನ್ನು ಒದಗಿಸಲು ಕ್ರಮ ಕೈಗೊಳ್ಳಬೇಕೆಂದು ತಿಳಿಸಿದರು.
ಈ ವೇಳೆ ತಹಸೀಲ್ದಾರ್‌ಎಚ್.ಎಂ.ರಮೇಶ್ ಅವರನ್ನು ಸನ್ಮಾನಿಸಲಾಯಿತು. ಶಿಕ್ಷಣ ಇಲಾಖೆಯ ಟಿಪಿಇಒ ಗಣೇಶಪ್ಪ, ಜಿಲ್ಲಾ ಉಪಾಧ್ಯಕ್ಷ ಅಫ್ತಾಬ್ ಅಹಮ್ಮದ್, ರಾಜ್ಯ ಸದಸ್ಯ ಇಸ್ಮಾಯಿಲ್‌ಸಾಬ್, ತಾಲೂಕು ಅಧ್ಯಕ್ಷ, ಆರೋಗ್ಯ ಇಲಾಖೆಯ ಆಮೀನ್, ಆರೀಫ್, ರಹೀಮ್ ಸಾಬ್, ಯಾಸ್ಮೀನ್ ಸುಲ್ತಾನ ಮತ್ತಿತರರಿದ್ದರು.

Related posts

ಕೈಗಾರಿಕೆಗಳ ಸ್ಥಾಪನೆಗೆ ಯೋಗ್ಯ ಜಮೀನು ಗುರುತಿಸಿ: ಜಿಲ್ಲಾಧಿಕಾರಿ

Times fo Deenabandhu

‘ನಾಯಕತ್ವ-ಯುವಜನಾಂಗ ಹಾಗೂ ರಾಷ್ಟ್ರ ನಿರ್ಮಾಣ’ ಶಿಬಿರ

Times fo Deenabandhu

ಸಾಹಿತ್ಯ ಕಮ್ಮಟಗಳು ವಿದ್ಯಾರ್ಥಿಗಳ ಸಾಹಿತ್ಯ ಆಸಕ್ತಿಗೆ ದಾರಿದೀಪವಾಗಲಿದೆ

Times fo Deenabandhu