Times of Deenabandhu
  • Home
  • ಜಿಲ್ಲೆ
  • ಬಡವರು ಸಪ್ತಪದಿ ಸಾಮೂಹಿಕ ವಿವಾಹ ಯೋಜನೆಯನ್ನು ಸದುಪಯೋಗ ಪಡೆದುಕೊಳ್ಳಬೇಕು
ಚಿಕ್ಕಮಗಳೂರು ಜಿಲ್ಲೆ

ಬಡವರು ಸಪ್ತಪದಿ ಸಾಮೂಹಿಕ ವಿವಾಹ ಯೋಜನೆಯನ್ನು ಸದುಪಯೋಗ ಪಡೆದುಕೊಳ್ಳಬೇಕು

ಮೂಡಿಗೆರೆ: ರಾಜ್ಯ ಸರಕಾರ ಮತ್ತು ಮುಜರಾಯಿ ಇಲಾಖೆಯಿಂದ ಸಪ್ತಪದಿ ಸಾಮೂಹಿಕ ವಿವಾಹ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಅದರಂತೆ ಮಾ.೨೪ರಂದು ಕಳಸದ ಕಳಸೇಶ್ವರ ದೇವಸ್ಥಾನದಲ್ಲಿ ಹಾಗೂ ಏ.೨೬ರಂದು ಮೂಡಿಗೆರೆಯಲ್ಲಿ ಏರ್ಪಡಿಸಲಾಗಿದೆ ಇದರ ಸದುಪಯೋಗವನ್ನು ಮದುವೆಯಾಗುವ ನವ ಜೋಡಿಗಳು ಪಡೆದುಕೊಳ್ಳಬೇಕೆಂದು ಶಾಸಕ ಎಂ.ಪಿ.ಕುಮಾರಸ್ವಾಮಿ ಹೇಳಿದರು.
ಈ ಕುರಿತು ಬುಧವಾರ ಹೇಳಿಯಲ್ಲಿ ತಿಳಿಸಿದ್ದು, ಪ್ರಸಕ್ತ ಕಾಲದಲ್ಲಿ ಬಡ ಜನರು ಮದುವೆ ಮಾಡಿಕೊಳ್ಳಲು ಸಾಧ್ಯವಾಗದಂತಾಗಿದೆ. ಬಹುತೇಕ ಕುಟುಂಬದಲ್ಲಿ ಮದುವೆಗೆ ಸಾಲ ಮಾಡಿಕೊಂಡು ತೀರಿಸಲು ಜೀವನ ಪೂರ್ತಿ ದುಡಿಯುವ ಸ್ಥಿತಿ ಉಂಟಾಗಿದೆ. ಇದನ್ನು ಮನಗೊಂಡು ನಮ್ಮ ಸರಕಾರ ಸಪ್ತಪದಿ ಸಾಮೂಹಿಕ ವಿವಾಹವನ್ನು ಜಾರಿಗೆ ತಂದಿದೆ. ಇದೇ ಮಾ.೨೪ರಂದು ಕಳಸದ ಕಳಸೇಶ್ವರ ದೇವಸ್ಥಾನದಲ್ಲಿ ಸಪ್ತಪದಿ ಸಾಮೂಹಿಕ ವಿವಾಹ ಏರ್ಪಡಿಸಲಾಗಿದೆ. ಮುಂದಿನ ತಿಂಗಳು ಏ.೨೬ರಂದು ಮೂಡಿಗೆರೆಯಲ್ಲಿ ನಡೆಯಲಿದ್ದು, ಸ್ಥಳವಿನ್ನೂ ನಿಗದಿಯಾಗಿಲ್ಲ. ನೋಂದಣಿಯಾದ ಎಲ್ಲಾ ನವ ಜೋಡಿಗಳಿಗೆ ವಿವಾಹ ಸಂದರ್ಭದಲ್ಲಿ ಅಗತ್ಯತೆಗೆ ಅನುಗುಣವಾಗಿ ವರನಿಗೆ ಹೂವಿನ ಹಾರ, ಪಂಚೆ, ಶರ್ಟ್ ಮತ್ತು ಶಲ್ಯಕ್ಕಾಗಿ ೫ ಸಾವಿರ, ವದುವಿಗೆ ಹೂವಿನ ಹಾರ, ದಾರೆ ಸೀರೆ ಮತ್ತು ರವಿಕೆ ಕಣಕ್ಕಾಗಿ ೧೦.ಸಾವಿರ, ವದುವಿಗೆ ತಾಳಿ ಸರಕ್ಕಾಗಿ ೪೦.ಸಾವಿರ ರೂ ಸೇರಿದಂತೆ ಒಟ್ಟು ೫೫ ಸಾವಿರ ರೂಗಳನ್ನು ಮುಜರಾಯಿ ಇಲಾಖೆ ವತಿಯಿಂದ ವಿತರಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ವಿವಾಹಕ್ಕೆ ಆಗಮಿಸುವ ವದು, ವರರ ಬಂದುಗಳು ಮತ್ತು ಸಾರ್ವಜನಿಕರಿಗೆ ಊಟೋಪಚಾರ ಇತರೇ ಅವಶ್ಯಕೆತೆಗೆ ತಗಲುವ ವೆಚ್ಚವನ್ನು ಮುಜರಾಯಿ ಇಲಾಖೆಯಿಂದಲೇ ಬರಿಸಲಾಗುತ್ತದೆ. ಸಾಮೂಹಿಕ ವಿವಾಹದಲ್ಲಿ ಪಾಲ್ಗೊಳ್ಳಲು ಇಚ್ಛಿಸುವ ವದುವರರು ತಾಲೂಕು ಕಚೇರಿಯ ಮುಜರಾಯಿ ಇಲಾಖೆ ಅಥವಾ ಸಂಬಂಧಿಸಿದ ದೇವಾಲಯಕ್ಕೆ ಅರ್ಜಿ ನೀಡಬಹುದಾಗಿದೆ. ಇದರ ಸದುಪಯೋಗವನ್ನು ಮದುವೆ ನವಜೋಡಿಗಳು ಪಡೆದುಕೊಳ್ಳಬೇಕೆಂದು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಬಿಜೆಪಿ ತಾಲೂಕು ಅಧ್ಯಕ್ಷ ಜೆ.ಎಸ್.ರಘು, ಸಂದರ್ಶ ಹ್ಯಾರಗುಡ್ಡೆ, ತಾಲೂಕು ವಕ್ತಾರ ನಯನ ತಳವಾರ, ಗಿರೀಶ್ ಹಳ್ಳಿಬೈಲ್, ಚಂದ್ರು ಹುಲ್ಲೇಮನೆ, ಭರತ್ ಕನ್ನೇಹಳ್ಳಿ ಮತ್ತಿತರರಿದ್ದರು.

ವಿವಿಧ ಸಂಘಟನೆಗಳ ವಿರುದ್ಧ ದಾಖಲಿಸಿದ ಪ್ರಕರಣ ಹಿಂದಕ್ಕೆ ಪಡೆದಿರುವುದು ಸ್ವಾಗತಾರ್ಹ

ಮೂಡಿಗೆರೆ:  ರಾಜ್ಯದಲ್ಲಿ ಬಿಜೆಪಿ ಮತ್ತು ವಿವಿಧ ಸಂಘಟನೆಗಳ ಮೇಲೆ ಹಿಂದಿನ ಸರಕಾರ ದಾಖಲಿಸಿದ್ದ ಪ್ರಕರಣಗಳನ್ನು ರಾಜ್ಯ ಸರಕಾರವು ಹಿಂಪಡೆದಿದ್ದು, ಪಕ್ಷದ ವತಿಯಿಂದ ಸ್ವಾಗತಿಸುವುದಾಗಿ ಬಿಜೆಪಿ ತಾಲೂಕು ಅಧ್ಯಕ್ಷ ಜೆ.ಎಸ್.ರಘು ಹಾಗೂ ತಾಲೂಕು ವಕ್ತಾರ ನಯನ ತಳವಾರ ಜಂಟಿ ಹೇಳಿಕೆಯಲ್ಲಿ ಬುಧವಾರ ತಿಳಿಸಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷ ಅಧಿಕರದಲ್ಲಿದ್ದಾಗ ವಿರೋಧ ಪಕ್ಷ ಬಿಜೆಪಿ ಮತ್ತು ಹಿಂದೂಪರ ಸಂಘಟನೆಗಳು, ರೈತರನ್ನು ಹತ್ತಿಕ್ಕಬೇಕೆಂದು ಅನೇಕ ಸುಳ್ಳು ಪ್ರಕರಣಗಳನ್ನು ದಾಖಲಿಸಲಾಗಿತ್ತು. ಇದೀಗ ರಾಜ್ಯ ಸರಕಾರ ಒಟ್ಟು ರಾಜ್ಯದಲ್ಲಿ ೪೨ ಪ್ರಕರಣಗಳನ್ನು ಹಿಂಪಡೆಯಲಾಗಿದೆ ಎಂದು ಮಾ.೫ರಂದು ಆದೇಶ ಹೊರಡಿಸಿದೆ. ಪ್ರಮುಖವಾಗಿ ಟಿಪ್ಪು ಜಯಂತಿ ವಿರೋಧಿಸಿ ನಡೆದ ಪ್ರತಿಭಟನೆ, ಕಾರವಾರದ ಪರೇಶ್ ಮಾಸ್ತ ಕೊಲೆ ಬಳಿಕ ದಾಖಲಾದ ದಾಂಧಲೆ ಪ್ರಕರಣಗಳು ಮತ್ತು ರೈತರ ಹೋರಾಟದ ಪ್ರಕರಣಗಳು, ಕೊಡಗಿನ ಗಲಭೆ, ಬಿಜೆಪಿ ಕಾರ್ಯಕರ್ತ ರುದ್ರೇಶ್ ಹತ್ಯೆ, ಬೆಂಗಳೂರು, ಬೆಳಗಾವಿಯಲ್ಲಿ ನಡೆದ ಹೋರಾಟದ ಪ್ರಕರಣಗಳು ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ನಡೆದ ಪ್ರಕರಣಗಳನ್ನು ವಾಪಾಸು ಪಡೆದುಕೊಳ್ಳುತ್ತಿರುವುದು ಉತ್ತಮ ಬೆಳೆವಣಿಗೆಯಾಗಿದೆ ಎಂದು ತಿಳಿಸಿದ್ದಾರೆ.

Related posts

ಎಲ್ಲಾ ಗ್ರಾಮ ಪಂಚಾಯತ್‌ಗಳಲ್ಲಿ ತಿಂಗಳ ಅಂತ್ಯದ ಒಳಗಾಗಿ ಘನತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆಗೆ ಜಮೀನು ಗುರುತಿಸಿ: ಸಚಿವ ಕೆ.ಎಸ್.ಈಶ್ವರಪ್ಪ

Times fo Deenabandhu

ಕರೋನಾ: ಆಯುರ್ವೇದಿಕ್ ಆಸ್ಪತ್ರೆಗಳ ಮೇಲೆ ನಿಗಾ ಇಡಲು ಆಗ್ರಹ

Times fo Deenabandhu

ಮೈಸೂರು ಸಿಲ್ಕ್ಸ್ ಶ್ರೇಷ್ಠತೆಯ ಪ್ರತೀಕ : ಕೆ.ಬಿ.ಶಿವಕುಮಾರ್

Times fo Deenabandhu