Times of Deenabandhu
  • Home
  • ಜಿಲ್ಲೆ
  • ಹೆಣ್ಣು ಸ್ವಾವಲಂಬಿಯಾಗಬೇಕೆ ಹೊರತು ಎಲ್ಲಕ್ಕೂ ಮತ್ತೊಬ್ಬರನ್ನು ಅವಲಂಬಿಸಬಾರದು
ಚಿಕ್ಕಮಗಳೂರು ಜಿಲ್ಲೆ

ಹೆಣ್ಣು ಸ್ವಾವಲಂಬಿಯಾಗಬೇಕೆ ಹೊರತು ಎಲ್ಲಕ್ಕೂ ಮತ್ತೊಬ್ಬರನ್ನು ಅವಲಂಬಿಸಬಾರದು

ಚಿಕ್ಕಮಗಳೂರು : ಹೆಣ್ಣು ಸ್ವಾವಲಂಬಿಯಾಗಬೇಕೆ ಹೊರತು ಎಲ್ಲಕ್ಕೂ ಮತ್ತೊಬ್ಬರನ್ನು ಅವಲಂಬಿಸಬಾರದೆಂದು ಶಿಕ್ಷಕಿ ಪಲ್ಲವಿಗಿರೀಶ್ ನುಡಿದರು.
ಅಕ್ಕಮಹಾದೇವಿ ಮಹಿಳಾ ಸಂಘ ನಗರದ ಶ್ರೀಜಗದ್ಗುರು ರೇಣುಕಾಚಾರ್ಯ ಸಮುದಾಯ ಭವನದಲ್ಲಿ ಗೃಹಮಂಡಳಿ ಬಡಾವಣೆಯ ಶರಣೆ ನೀಲಾಂಬಿಕೆ ತಂಡ ’ಹೋಳಿ ಹುಣ್ಣಿಮೆ’ ಮತ್ತು ’ವಿಶ್ವ ಮಹಿಳಾ ದಿನಾಚರಣೆ’ ಉದ್ಘಾಟಿಸಿ ನಿನ್ನೆ ಅವರು ಮಾತನಾಡಿದರು.
ಹೆಣ್ಣುಮಕ್ಕಳು ತಮ್ಮನ್ನು ತಾವೇ ಅವಲಂಬಿಸಿಕೊಳ್ಳಬೇಕೆ ಹೊರತು ಸದಾ ಪರಾಶ್ರಿತ-ಅಧೀನತೆ ಸಲ್ಲದು. ಶಿಕ್ಷಣದಿಂದ ಸ್ವಾವಲಂಬನೆ, ಸ್ವತಂತ್ರ ಆಲೋಚನೆ ಸಾಧ್ಯ. ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂಬ ಮಾತಿದೆ. ಓದು ಮುಗಿಸಿ ದುಡಿಯುವ ಹೆಣ್ಣು ಗಂಡಿಗಿಂತ ಯಾವುದರಲ್ಲೂ ಕಡಿಮೆ ಇಲ್ಲ ಎಂದು ಅಹಂ ಪಡಬಾರದು. ಸಂಸಾರದೋಣಿ ಸುಗಮವಾಗಿ ಸಾಗಲು, ಸಮಾನತೆ ಎತ್ತಿಹಿಡಿಯಲು, ಗಂಡನ ಕಷ್ಟದಲ್ಲಿ ಭಾಗಿ ಆಗಲು, ಮಕ್ಕಳ ಭವಿಷ್ಯರೂಪಿಸಲು ಕಲಿತಶಿಕ್ಷಣ ನೆರವಾದರೆ ಸಾರ್ಥಕವಾಗುತ್ತದೆ ಎಂದರು.
ವೇದಗಳ ಕಾಲದಲ್ಲಿ ಗಾರ್ಗಿ, ಮೈತ್ರಿ, ಸಾಧನೆ ಮಾಡಿದ್ದರು. ೧೨ನೆಯ ಶತಮಾನದಲ್ಲಿ ಅಕ್ಕಮಹಾದೇವಿ ಸೇರಿದಂತೆ ೩೪ಶರಣೆಯರು, ರಾಜರ ಆಳ್ವಿಕೆಯಲ್ಲಿ ಝಾನ್ಸಿರಾಣಿಲಕ್ಷ್ಮೀಬಾಯಿ, ಕಿತ್ತೂರುಚನ್ನಮ್ಮ, ಒನಕೆ ಓಬವ್ವ, ರಜಿಯಾಸುಲ್ತಾನ್, ಗಾಂಧಿಯುಗದಲ್ಲಿ ಕಸ್ತೂರಿಬಾ, ಕಮಲಾದೇವಿಚಟ್ಟೋಪಾಧ್ಯಾಯ, ಸರೋಜಿನಿನಾಯ್ಡು, ೨೦ನೇ ಶತಮಾನದಲ್ಲಿ ಬಚೇಂದ್ರಿಪಾಲ್, ಇಂದಿರಾಗಾಂಧಿ ಆ ನಂತರ ಸಾನಿಯಾಮಿರ್ಜಾ, ಕಲ್ಪನಾಚಾವ್ಲಾ, ಸುಧಾಮೂರ್ತಿ ಮತ್ತಿತರ ಮಹಿಳೆಯರು ಸಾಧನೆಮಾಡಿ ದೇಶದ ಕೀರ್ತಿ ಹೆಚ್ಚಿಸಿದ್ದಾರೆ. ತೊಟ್ಟಿಲ ತೂಗುವ ಕೈಗಳು ದೇಶವನ್ನು ಆಳುತ್ತದೆ ಎಂಬ ಮಾತು ಸತ್ಯವಾಗಿದೆ ಎಂದು ಪಲ್ಲವಿ, ಹೆಣ್ಣು ಇನ್ನೂ ಅಬಲೆ ಅಲ್ಲ ಸಬಲೆ ಎಂದರು
ಮಹಿಳೆಯರ ಮೇಲೆ ನಡೆಯುತ್ತಿರುವ ಶೋಷಣೆ, ದೌರ್ಜನ್ಯ, ಅತ್ಯಾಚಾರದಂತಹ ಕೃತ್ಯಗಳು ಖಂಡನಾರ್ಹ. ತಾಯಂದಿರು ಮನೆಯಲ್ಲಿ ಗಂಡುಹೆಣ್ಣುಮಕ್ಕಳನ್ನು ಬೆಳೆಸುವಾಗ ಸಂಸ್ಕಾರ-ಸಂಸ್ಕೃತಿಯನ್ನು ಸರಿಯಗಿ ಅರ್ಥಮಾಡಿಸಿದರೆ ಇಂತಹ ಕುಕೃತ್ಯಗಳನ್ನು ನಿಯಂತ್ರಿಸಬಹುದೆಂದ ಪಲ್ಲವಿ, ದಶಕಗಳಿಂದ ಮಹಿಳೆಯರನ್ನು ಸಂಘಟಿಸಿ ಅವರಿಗೆ ಒಂದಷ್ಟು ವಿಚಾರಗಳನ್ನು ತಿಳಿಯಪಡಿಸುವುದರೊಂದಿಗೆ ಅವರ ಪ್ರತಿಭೆಗೂ ಅಕ್ಕಮಹಾದೇವಿಸಂಘ ವೇದಿಕೆಯಾಗಿರುವುದು ಸಂತಸದ ಸಂಗತಿ ಎಂದರು..
ಸಮಾರಂಭದ ಅಧ್ಯಕ್ಷತೆವಹಿಸಿದ ಖಜಾಂಚಿ ಯಮುನಾಸಿ.ಶೆಟ್ಟಿ ಮಾತನಾಡಿ ಮಹಿಳೆಯರು ಇಂದು ಸಮಾಜದ ಎಲ್ಲಕ್ಷೇತ್ರಗಳಲ್ಲೂ ಛಾಪುಮೂಡಿಸಿದ್ದಾರೆ. ಮನೆಯ ಒಳಗೆ ಮತ್ತು ಹೊರಗೆ ದಕ್ಷತೆಯಿಂದ ಕಾರ್‍ಯನಿರ್ವಹಿಸುವ ಕ್ಷಮತೆ ಸಾಬೀತುಪಡಿಸಿದ್ದಾರೆ ಎಂದರು.
ಶರಣೆ ನೀಲಾಂಬಿಕೆ ತಂಡದ ಮುಖಂಡೆ ಸುಜಾತಾ ಪ್ರಾಸ್ತಾವಿಕವಾಗಿ ಮಾತನಾಡಿ ಮಹಿಳೆಯರ ಪ್ರತಿಭೆಯನ್ನು ಅನಾವರಣಗೊಳಿಸಲು ವೇದಿಕೆ ಅಗತ್ಯ. ಸೇವಾಕಾರ್‍ಯಗಳಿಗೆ ಸಂಘ ಸಹಕಾರ ಮುಖ್ಯ ಎಂದರು. ಸಂಘದ ಪದಾಧಿಕಾರಿಗಳಾದ ರೇಖಾಉಮಾಶಂಕರ್, ಭಾರತಿಶಿವರುದ್ರಪ್ಪ, ನಾಗಮಣಿಕುಮಾರ್, ವಕೀಲೆ ಮಮತಾ ವೇದಿಕೆಯಲ್ಲಿದ್ದರು.
ಸದಸ್ಯರಾದ ಚಂದ್ರಮತಿಬಸವರಾಜ್ ಸ್ವಾಗತಿಸಿ, ವೀಣಾಮಲ್ಲಿಕಾರ್ಜುನ ನಿರೂಪಿಸಿದರು. ಮಹಾದೇವಮ್ಮ ಪ್ರಾರ್ಥಿಸಿ, ಚೇತನಾವಿಶ್ವನಾಥ್ ಪರಿಚಯಿಸಿ, ಸುಧಾಕಾಂತರಾಜ್ ವಂದಿಸಿದರು. ನಾಗರತ್ನಜಯದೇವ್ ತಂಡ ನಾಡಗೀತೆ ಹಾಡಿದರು. ವಿವಿಧ ಆಟೋಟ ಸ್ಪರ್ಧಾವಿಜೇತರಿಗೆ ಸುಜಾತಾ ಬಹುಮಾನ ವಿತರಿಸಿದರು. ಸುನೀತಾ ಮತ್ತು ಸುಕನ್ಯಾ ತಂಡದ ಸಾಂಸ್ಕೃತಿಕ ಕಾರ್‍ಯಕ್ರಮ ಆಕರ್ಷಕವಾಗಿತ್ತು.

Related posts

ಅಕ್ರಮ ಸಕ್ರಮ ಮಾಡುವಲ್ಲಿ ಅನ್ಯಾಯ

Times fo Deenabandhu

ಸಾರ್ವಜನಿಕರು ಕೊರೋನಾ ವೈರಸ್ ವಿರುದ್ದ ಸ್ವಯಂ ನಿರ್ಬಂಧವನ್ನು ಕೈಗೊಳ್ಳಬೇಕು: ಸಿ.ಟಿ.ರವಿ

Times fo Deenabandhu

ಕೇಂಧ್ರ ಗಾಮೀಣಾಭಿವೃದ್ಧಿ ಸಚಿವರೊಂದಿಗೆ ವಿಡಿಯೊ ಕಾನ್ಫರೆನ್ಸ್ ನರೇಗಾ ಮಾನವ ದಿನ ಸೃಷ್ಟಿಯಲ್ಲಿ ದೇಶದಲ್ಲಿಯೇ ಎರಡನೇ ಸ್ಥಾನ: ಸಚಿವ ಕೆ.ಎಸ್.ಈಶ್ವರಪ್ಪ

Times fo Deenabandhu