Times of Deenabandhu
  • Home
  • ಮುಖ್ಯಾಂಶಗಳು
  • ಪಿಯು ಭೂಗೋಳ ಪರೀಕ್ಷೆಯಲ್ಲಿ ಗೊಂದಲದ ಪ್ರಶ್ನೆಗಳು, ಅಂಕ ಕಡಿತದ ಭೀತಿಯಲ್ಲಿ ವಿದ್ಯಾರ್ಥಿಗಳು
ಪ್ರಧಾನ ಸುದ್ದಿ ಮುಖ್ಯಾಂಶಗಳು ರಾಜ್ಯ ಶಿಕ್ಷಣ

ಪಿಯು ಭೂಗೋಳ ಪರೀಕ್ಷೆಯಲ್ಲಿ ಗೊಂದಲದ ಪ್ರಶ್ನೆಗಳು, ಅಂಕ ಕಡಿತದ ಭೀತಿಯಲ್ಲಿ ವಿದ್ಯಾರ್ಥಿಗಳು

ರಾಮನಗರ: ರಾಜ್ಯಾದ್ಯಂತ ಇಂದು ನಡೆದ ದ್ವಿತೀಯ ಪಿಯುಸಿ ಭೂಗೋಳ ವಿಷಯದ ಪರೀಕ್ಷೆಯಲ್ಲಿ ಮೂರು ಅಂಕಗಳಿಗೆ ತಪ್ಪು ಪ್ರಶ್ನೆಗಳನ್ನು ಕೇಳಲಾಗಿದ್ದು, ವಿದ್ಯಾರ್ಥಿಗಳಲ್ಲಿ ಅಂಕ ಕಳೆದುಕೊಳ್ಳುವ ಭೀತಿ ಆವರಿಸಿದೆ.
ಕನ್ನಡ ಪ್ರಶ್ನೆ ಪತ್ರಿಕೆಯಲ್ಲಿ ಒಂದು ರೀತಿ ಪ್ರಶ್ನೆ ಹಾಗೂ ಅದೇ ಪ್ರಶ್ನೆಯನ್ನು ಇಂಗ್ಲಿಷ್‌ ಪ್ರಶ್ನೆ ಪತ್ರಿಕೆಯಲ್ಲಿ ಬೇರೆ ರೀತಿ ಅರ್ಥ ಬರುವಂತೆ ಕೇಳಲಾಗಿದೆ. ಇದರಿಂದ ವಿದ್ಯಾರ್ಥಿಗಳು ಸೂಕ್ತ ಉತ್ತರ ಬರೆಯಲು ಗೊಂದಲಕ್ಕೀಡಾಗಿದ್ದಾರೆ. ಹಲವರು ಈ ಗೊಂದಲಕಾರಿ ಪ್ರಶ್ನೆಗಳಿಗೆ ಉತ್ತರಿಸದೆ ಹಾಗೇ ಬಿಟ್ಟಿದ್ದಾರೆ.

ಏನಿದು ಘಟನೆ:
ಭೂಗೋಳ ಪ್ರಶ್ನೆ ಪತ್ರಿಕೆಯ ಮೊದಲನೇ ಮೇಯಿನ್‌ನಲ್ಲಿ ಒಂದು ಅಂಕದ 1, 2 ಹಾಗೂ 9ನೇ ಪ್ರಶ್ನೆಗಳನ್ನು ಗೊಂದಲಕಾರಿಯಾಗಿ ಕೇಳಲಾಗಿದೆ. ಕನ್ನಡ ಪ್ರಶ್ನೆ ಪತ್ರಿಕೆಯಲ್ಲಿ 1ನೇ ಪ್ರಶ್ನೆಯನ್ನು ಮಾನವ ಭೂಗೋಳ ಶಾಸ್ತ್ರದ ಪಿತಾಮಹ ಯಾರು? ಎಂದು ಕೇಳಲಾಗಿದೆ. ಇದೇ ಪ್ರಶ್ನೆಯನ್ನು ಇಂಗ್ಲಿಷ್‌ ಪ್ರಶ್ನೆ ಪತ್ರಿಕೆಯಲ್ಲಿ ಭೂಗೋಳ ಶಾಸ್ತ್ರದ ಪಿತಾಮಹ ಯಾರು? (ಹೂ ಈಸ್‌ ದಿ ಫಾದರ್‌ ಆಫ್‌ ಜಿಯೋಗ್ರಫಿ?) ಎಂದು ಕೇಳಲಾಗಿದೆ.
ಎರಡನೇ ಪ್ರಶ್ನೆಯನ್ನು, ‘ಎಫ್‌ಡಿಐ ವಿಸ್ತರಿಸಿ’ ಎಂದು ಕನ್ನಡದಲ್ಲಿ ಕೇಳಲಾಗಿದೆ. ಇದೇ ಪ್ರಶ್ನೆಯನ್ನು ಇಂಗ್ಲಿಷ್‌ನಲ್ಲಿ ‘ಎಚ್‌ಡಿಐ ಅನ್ನು ಸಮರ್ಥಿಸಿ (ಡಿಫೈನ್‌ ಎಚ್‌ಡಿಐ)’ ಎಂದು ಕೇಳಲಾಗಿದೆ. ಕನ್ನಡ ಪ್ರಶ್ನೆ ಪತ್ರಿಕೆಯಲ್ಲಿ 9ನೇ ಪ್ರಶ್ನೆಯನ್ನು ‘ಭಾರತದ ಜಾವ’ ಪ್ರಾರಂಭಿಸಿದವರು ಯಾರು? ಎಂದು ಕೇಳಲಾಗಿದೆ. ಇದೇ ಪ್ರಶ್ನೆಯನ್ನು ಇಂಗ್ಲಿಷ್‌ನಲ್ಲಿ ‘ಭಾರತದ ಜಾವ’ ಎಂದು ಯಾವ ನಗರವನ್ನು ಕರೆಯಲಾಗುತ್ತದೆ? (ವಿಚ್‌ ಸಿಟಿ ಈಸ್‌ ಕಾಲ್ಡ್‌ ಜಾವಾ ಆಫ್‌ ಇಂಡಿಯಾ?) ಎಂದು ಕೇಳಲಾಗಿದೆ.
ಪದವಿ ಪೂರ್ವ ಶಿಕ್ಷಣ ಇಲಾಖೆಯ ತಪ್ಪಿನಿಂದಾಗಿ ವಿದ್ಯಾರ್ಥಿಗಳು ಮೂರು ಅಂಕಗಳನ್ನು ಕಳೆದುಕೊಳ್ಳುವ ಆತಂಕಕ್ಕೆ ಒಳಗಾಗಿದ್ದಾರೆ. ಆದ್ದರಿಂದ ವಿದ್ಯಾರ್ಥಿಗಳು ಮೂರು ಕೃಪಾಂಗಳನ್ನು ನೀಡುವಂತೆ ಶಿಕ್ಷಣ ಇಲಾಖೆಯನ್ನು ಒತ್ತಾಯಿಸಿದ್ದಾರೆ.

“‘‘ಭೂಗೋಳ ವಿಷಯದ ಪ್ರಶ್ನೆ ಪತ್ರಿಕೆಯಲ್ಲಿಮೂರು ಅಂಕದ ಮೂರು ಪ್ರಶ್ನೆಗಳನ್ನು ಗೊಂದಲಕಾರಿಯಾಗಿ ಕೇಳಿರುವುದು ತಿಳಿದು ಬಂದಿದ್ದು, ಹಲವು ವಿದ್ಯಾರ್ಥಿಗಳು ಕೃಪಾಂಕ ನೀಡುವಂತೆ ಒತ್ತಾಯಿಸಿದ್ದಾರೆ. ಈ ಬಗ್ಗೆ ಕೂಡಲೇ ಪದವಿ ಪೂರ್ವ ಶಿಕ್ಷಣ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗುವುದು. ಪ್ರಸ್ತಾವನೆಯನ್ನು ಕೂಲಂಕಷವಾಗಿ ಪರಿಶೀಲಿಸಿ, ಕೃಪಾಂಕ ನೀಡುವ ಅನಿವಾರ್ಯತೆಯಿದ್ದರೆ ಸಮಿತಿಯೊಂದನ್ನು ರಚಿಸಿ, ಸೂಕ್ತ ನಿರ್ಧಾರ ಕೈಗೊಳ್ಳಲಿದೆ.’’”
-ನರಸಿಂಹಮೂರ್ತಿ, ಉಪ ನಿರ್ದೇಶಕ, ಪದವಿ ಪೂರ್ವ ಶಿಕ್ಷಣ ಇಲಾಖೆ, ರಾಮನಗರ ಜಿಲ್ಲೆ

“‘‘ನಾನು ಇದುವರೆಗೆ ಪ್ರಶ್ನೆ ಪತ್ರಿಕೆಯನ್ನು ನೋಡಿಲ್ಲ. ಪ್ರಶ್ನೆ ಪತ್ರಿಕೆಯನ್ನು ಪರಿಶೀಲಿಸಿದ ನಂತರ, ಆಕ್ಷೇಪಣೆ ಸಲ್ಲಿಸಲು ಅವಕಾಶ ಕಲ್ಪಿಸಲಾಗುವುದು. ಆಕ್ಷೇಪಣೆಗಳು ಸಲ್ಲಿಕೆಯಾದ ನಂತರ ಈ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು.’’”
-ಎಂ.ಕನಗವಲ್ಲಿ, ನಿರ್ದೇಶಕಿ, ಪದವಿ ಪೂರ್ವ ಶಿಕ್ಷಣ ಇಲಾಖೆ

 

Related posts

ಕುಟುಂಬ ರಾಜಕಾರಣದ ವಿಸ್ತರಣೆಗೆ ಗೌಡರ ಮಾಸ್ಟರ್‌ ಪ್ಲಾನ್‌, 2023ಕ್ಕೆ ಅರ್ಧ ಡಜನ್‌ ಸ್ಪರ್ಧಿಗಳು ರೆಡಿ!

Times fo Deenabandhu

ಬಂಡಿಪುರದಲ್ಲಿ ತಲೈವಾ ರಜನಿ, ಅಕ್ಷಯ್ ಕುಮಾರ್, ಬೆರ್ ಗ್ರೀಲ್ಸ್!

Times fo Deenabandhu

ಚಳಿಗಾಲದಲ್ಲೂ ಬೆವರಿದ ನಾಯಕರು! ಭರ್ಜರಿ ಪ್ರಚಾರ…

Times fo Deenabandhu