Times of Deenabandhu
  • Home
  • ಪ್ರಧಾನ ಸುದ್ದಿ
  • ಕೊರೊನಾ ಸೋಂಕು ಹರಡದಂತೆ ತಡೆದ ಸಿಂಗಾಪುರ, ಹಾಂಕಾಂಗ್‌, ಶಹಬ್ಬಾಸ್‌ ಎಂದ WHO; ಬೇರೆ ದೇಶಗಳಿಗೆ ಏಕೆ ಸಾಧ್ಯವಾಗಿಲ್ಲ?
ಪ್ರಧಾನ ಸುದ್ದಿ ಮುಖ್ಯಾಂಶಗಳು ವಿದೇಶ

ಕೊರೊನಾ ಸೋಂಕು ಹರಡದಂತೆ ತಡೆದ ಸಿಂಗಾಪುರ, ಹಾಂಕಾಂಗ್‌, ಶಹಬ್ಬಾಸ್‌ ಎಂದ WHO; ಬೇರೆ ದೇಶಗಳಿಗೆ ಏಕೆ ಸಾಧ್ಯವಾಗಿಲ್ಲ?

ಹೊಸದಿಲ್ಲಿ: ಇಡೀ ವಿಶ್ವದಲ್ಲಿ ಈಗ ಕೊರೊನಾ ಕೊರೊನಾ ಕೊರೊನಾ ಎಂಬ ರೋನಾ ಆರಂಭವಾಗಿದೆ. ವಿಶ್ವದ ದೊಡ್ಡಣ್ಣ ಅಮೆರಿಕದಿಂದ ಹಿಡಿದು ಅತಿ ಸಣ್ಣ ರಾಷ್ಟ್ರ ಕೂಡ ಕೊರೊನಾದಿಂದ ಭಾರಿ ಪರಿಣಾಮ ಎದುರಿಸುತ್ತಿದೆ.

ಭಾರತದಲ್ಲಂತೂ ಕಳೆದ ಒಂದು ವಾರದಿಂದ ಕೊರೊನಾ ಸೋಂಕು ಹರಡುತ್ತಿದೆ. ಗಾಳಿಗಿಂತಲೂ ವೇಗವಾಗಿ ಇದು ಎಲ್ಲೆಡೆ ಹರಡುತ್ತಿರುವುದು ಆತಂಕದ ವಿಷಯವಾಗಿದೆ.

ಕೊರೊನಾ ಅತಿ ದೊಡ್ಡ ಸಾಂಕ್ರಾಮಿಕ ಪಿಡುಗಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯೇ ಘೋಷಣೆ ಮಾಡಿಬಿಟ್ಟಿದೆ.

ಆದರೆ ಎರಡು ದೇಶಗಳು ಮಾತ್ರ ಕೊರೊನಾದಿಂದ ಯಾವುದೇ ಭೀತಿ ಇಲ್ಲದೇ ಮುಂದೆ ಸಾಗಿದೆ. ಹಾಗಂತ ಯಾವುದೇ ರೀತಿಯಲ್ಲೂ ಮೈ ಮರೆತು ಕೂತಿಲ್ಲ ಈ ಎರಡು ದೇಶ. ವಿಶ್ವ ಆರೋಗ್ಯ ಸಂಸ್ಥೆಯೇ ಈ ಎರಡು ದೇಶಗಳ ಕೈಗೊಂಡ ಕ್ರಮಗಳಿಗೆ ಶಹಬ್ಬಾಸ್‌ ಎಂದಿದೆ.
ಇಡೀ ಜಗತ್ತಿಗೆ ಕೊರೊನಾ ಹರಡಿಸಿದ ಅಪಖ್ಯಾತಿ ಪಡೆದಿರುವ ಚೀನಾದ ವುಹಾನ್‌ಗೆ ಈ ಎರಡೂ ದೇಶಗಳು ಅತ್ಯಂತ ಸಮೀಪ ಎಂದೇ ಹೇಳಬಹುದು.

ಗ್ರೌಂಡ್‌ ಜೀರೋ ಪ್ರದೇಶ ಎಂದೇ ಬಿಂಬಿತವಾಗಿರುವ ವುಹಾನ್‌ಗೆ ಹತ್ತಿರವಿದ್ದರೂ ಸಿಂಗಾಪುರ, ಹಾಂಕಾಂಗ್‌ ಕೊರೊನಾ ಸೋಂಕನ್ನು ಹತ್ತಿರ ಬಿಟ್ಟುಕೊಂಡಿಲ್ಲ.

ಕೊರೊನಾ ಸೋಂಕು ಹರಡುತ್ತಿದೆ ಎಂದು ಬಹಿರಂಗವಾಗುತ್ತಿದ್ದಂತೆ ಸಿಂಗಾಪುರ ಮತ್ತು ಹಾಂಕಾಂಗ್‌ ಆಡಳಿತ ಸಮರೋಪಾದಿಯಲ್ಲಿ ಕಾರ್ಯಾಚರಣೆಗಿಳಿಯಿತು.

ಒಂದೇ ಒಂದು ಸಣಣ್ಣ ಅನುಮಾನ ಬಂದರೂ ಇಡೀ ದೇಶದಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಯಿತು. ಜನರಲ್ಲಿ ಎಂದಿಗಿಂತ ಹೆಚ್ಚಿನ ಜಾಗೃತಿ ಮೂಡಿಸಲಾಯಿತು.

ಚೀನಾದಿಂದ ಬಂದ ಸಿಂಗಾಪುರ ಪ್ರಜೆಯೊಬ್ಬರಿಗೆ ವೈರಸ್‌ ತಗುಲಿರಬಹುದು ಎಂಬ ಸಣ್ಣ ಶಂಕೆಯ ಮೇರೆಗೆ ಸಿಂಗಾಪುರ ಎಷ್ಟು ಕೇರ್‌ ತೆಗೆದುಕೊಂಡಿತು ಎಂದರೆ ನಿಜಕ್ಕೂ ಹ್ಯಾಟ್ಸಾಫ್‌ ಎನ್ನಬೇಕು.

ಈಕೆ ಕೆಲಸ ಮಾಡುವ ಸಂಸ್ಥೆಯ ಬಹುತೇಕ ಮಂದಿಯನ್ನು ಹಾಗೂ ಆಕೆಯನ್ನು ನಿಕಟ ಸಂಪರ್ಕ ಹೊಂದಿರುವವರರನ್ನು ಕೆಲವು ದಿನಗಳ ಕಾಲ ಪ್ರತ್ಯೇಕವಾಗಿ ಇರಿಸಲಾಯಿತು. ಈಕೆಯ ಜತೆಗಿದ್ದ ಕೆಲವರನ್ನು ಮನೆಯಲ್ಲಿಯೇ ಪ್ರತ್ಯೇಕವಾಗಿ ಇರಿಸಲಾಗಿತ್ತು. ಮನೆಯಲ್ಲಿದ್ದವರು ಕೂಡ ಇವರೊಂದಿಗೆ ಯಾವುದೇ ಸಂಪರ್ಕ ಮಾಡುತ್ತಿರಲಿಲ್ಲ. ಇವರಿಗೆಲ್ಲ ಪ್ರತ್ಯೇಕ ಊಟದ ತಟ್ಟೆ, ಪ್ರತ್ಯೇಕ ಸ್ನಾನದ ಕೋಣೆ, ಮಲಗಲು ಪ್ರತ್ಯೇಕ ಜಾಗ. ಕೆಮ್ಮುವಾಗಲೂ, ನೆಗಡಿ ಬಂದರೆ ಸೀನುವಾಗಲೂ ಕರವಸ್ತ್ರ ಅಥವಾ ನ್ಯಾಪ್‌ಕಿನ್‌ ಸದಾ ಸಿದ್ಧವಾಗಿರುತ್ತಿತ್ತು. ಶಂಕಿತ ಸೋಂಕಿತರನ್ನು ದಿನಗಳ ಕಾಲ ‘ಕ್ವಾರನ್‌ಟೈನ್‌’ (ಸೋಂಕು ಹರಡದಂತೆ ಪ್ರತ್ಯೇಕವಾಗಿಡುವ ಕ್ರಮ) ಮಾಡಲಾಗಿತ್ತು.

ಹೀಗೆ ಅತಿ ಸಣ್ಣ ಮತ್ತು ಸೂಕ್ಷ್ಮ ವಿಷಯಗಳಲ್ಲೂ ಸಿಂಗಾಪುರ ಆಡಳಿತ ಮುನ್ನೆಚ್ಚರಿಕೆ ತೆಗೆದುಕೊಂಡಿತ್ತು ಎಂದು ಸಿಂಗಾಪುರದಲ್ಲಿರುವ ವಿಜಯ ಕರ್ನಾಟಕ ವೆಬ್‌ ಓದುಗರಾದ ಕುಮಾರಸ್ವಾಮಿ ಮಾಹಿತಿ ನೀಡಿದ್ದಾರೆ.

ಇಡೀ ನಗರದಲ್ಲಿ ಮುನ್ನೆಚ್ಚರಿಕೆ ಕ್ರಮಗಳು ಸದಾ ಇರುತ್ತಿತ್ತು. ಸ್ವಚ್ಛತೆ ಬಗ್ಗೆಯಂತೂ ಮಾತನಾಡುವ ಹಾಗಿರಲಿಲ್ಲ. ಆದರೆ ಕೊರೊನಾ ಎಂಟ್ರಿಯಾಗುತ್ತಿದೆ ಎಂಬ ಸುದ್ದಿ ಹರಡುತ್ತಿದ್ದಂತೆ ಎಲ್ಲವೂ ಡಬಲ್‌ ಆಯಿತು. ಸ್ವಚ್ಛತೆ ಪ್ಲಸ್‌ ಮುನ್ನೆಚ್ಚರಿಕೆ ಎರಡೂ ದುಪ್ಪಟ್ಟಾಯಿತು ಎಂದು ಅವರು ವಿವರಿಸಿದ್ದಾರೆ.

ಇದೇ ರೀತಿಯ ಕ್ರಮವನ್ನು ಹಾಂಕಾಂಗ್‌ ಕೂಡ ಕೈಗೆತ್ತಿಕೊಂಡಿತು.

ವಿಶ್ವ ಆರೋಗ್ಯ ಸಂಸ್ಥೆಯ ಅಧಿಕಾರಿಗಳು ಎರಡೂ ದೇಶಗಳಿಗೆ ಭೇಟಿ ನೀಡಿ ಅಲ್ಲಿ ಕೈಗೊಂಡಿರುವ ಮುನ್ನೆಚ್ಚರಿಕೆ ಕ್ರಮಗಳನ್ನು ಅಧ್ಯಯನ ಮಾಡಿದೆ.

ಈ ದೇಶಗಳಲ್ಲಿ ಆಗಿರುವ ಬದಲಾವಣೆ ಉಳಿದ ದೇಶಗಳಲ್ಲೂ ಆಗಬೇಕಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಲ್ಲಿ ಆಗುವುದಾದರೆ ನಮ್ಮ ಭಾರತದಲ್ಲಿಯೂ ಈ ರೀತಿ ಏಕೆ ಆಗುವುದಿಲ್ಲ. ಇನ್ನಾದರೂ ರಾಜ್ಯ, ಕೇಂದ್ರ ಸರಕಾರಗಳು ಬರೀ ಘೋಷಣೆಗಳನ್ನು ಮಾಡುವುದು ಬಿಟ್ಟು ಎಲ್ಲರಿಗೂ ಆರೋಗ್ಯ ಭಾಗ್ಯ ಕಲ್ಪಿಸಲಿ ಎಂಬುದೇ ಕೋಟ್ಯಂತರ ಜನರ ಆಶಯ.

Related posts

 76 ಭಾರತೀಯ ಯೋಧರಿಗೆ ಗಾಯ, ಸೈನಿಕರ ಆರೋಗ್ಯದಲ್ಲಿ ಚೇತರಿಕೆ

ನಗರಗಳಿಗೆ ಮರಳುತ್ತಿರುವ ವಲಸೆ ಕಾರ್ಮಿಕರು

ರಾಜ್ಯದ ಮೂಲೆ ಮೂಲೆಗಳಿಂದ ಹರಿದು ಬಂದ ಜನಸಾಗರ:ಬುಕ್ ಆಫ್ ರೆಕಾರ್ಡ್ ಸೇರಿದ ಅಸಂಖ್ಯ ಪ್ರಮಥರ ಗಣಮೇಳ

Times fo Deenabandhu