Times of Deenabandhu
  • Home
  • ಪ್ರಧಾನ ಸುದ್ದಿ
  • ಕೊರೊನಾಗೆ ಸಾಂಕ್ರಾಮಿಕ ರೋಗ ಎಂದ WHO, ಕೇಂದ್ರದಿಂದ ಏ.15ರವರೆಗೆ ಪ್ರವಾಸಿ ವೀಸಾ ರದ್ದು
ದೇಶ ಪ್ರಧಾನ ಸುದ್ದಿ ಮುಖ್ಯಾಂಶಗಳು

ಕೊರೊನಾಗೆ ಸಾಂಕ್ರಾಮಿಕ ರೋಗ ಎಂದ WHO, ಕೇಂದ್ರದಿಂದ ಏ.15ರವರೆಗೆ ಪ್ರವಾಸಿ ವೀಸಾ ರದ್ದು

ಹೊಸದಿಲ್ಲಿ: ಎಲ್ಲ ದೇಶಗಳ ಪ್ರವಾಸಿ ವೀಸಾಗಳನ್ನು ಕೇಂದ್ರ ಸರಕಾರ ರದ್ದುಗೊಳಿಸಿದೆ. ಬುಧವಾರ ಈ ಬಗ್ಗೆ ಆದೇಶ ಹೊರಡಿಸಿರುವ ಕೇಂದ್ರ ಏ. 15ರವರೆಗೆ ವೀಸಾ ನಿರ್ಬಂಧ ಜಾರಿ ಇರುತ್ತದೆ. ರಾಜತಾಂತ್ರಿಕರು, ವಿಶ್ವಸಂಸ್ಥೆ ಪ್ರತಿನಿಧಿಗಳ ವೀಸಾಗಳಿಗೆ ರದ್ದತಿ ಅನ್ವಯಿಸಲ್ಲ ಎಂದು ಹೇಳಿದೆ.

ಜತೆಗೆ ಫೆ.15ರ ನಂತರ ವಿದೇಶಕ್ಕೆ ತೆರಳಿದ್ದು ಸದ್ಯ ಆಗಮಿಸುವ ಪ್ರತಿಯೊಬ್ಬರು ಕೂಡ ಕನಿಷ್ಠ 14 ದಿನಗಳ ನಿಗಾಕ್ಕೆ ಒಳಪಡುವುದು ಕಡ್ಡಾಯ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಇನ್ನು, ಇಂದೋರ್‌ನಲ್ಲಿನ ಇಂಡಿಯನ್‌ ಇನ್ಸ್‌ಟಿಟ್ಯೂಟ್‌ ಆಫ್‌ ಮ್ಯಾನೆಜ್‌ಮೆಂಟ್‌ ತನ್ನ ವಾರ್ಷಿಕ ಘಟಿಕೋತ್ಸವವನ್ನು ಮುಂದೂಡಿದೆ.

ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 11ಕ್ಕೆ ಏರಿದೆ. ಬೆಂಗಳೂರಿನಲ್ಲಿ 4 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಸೋಂಕಿತರನ್ನು ಐಸಾಲೇಟೆಡ್‌ ವಾರ್ಡ್‌ಗಳಲ್ಲಿ ಇರಿಸಲಾಗಿದೆ. ಇನ್ನು, ದೇಶಾದ್ಯಂತ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಿದ್ದು, ಇದುವರೆಗೂ 60 ಕೊರೊನಾ ಪ್ರಕರಣಗಳು ಭಾರತದಲ್ಲಿ ಪತ್ತೆಯಾಗಿವೆ.
ಸರ್ವವ್ಯಾಪಿ ಸಾಂಕ್ರಾಮಿಕ
ಜಗತ್ತಿನಾದ್ಯಂತ 1.22 ಲಕ್ಷ ಜನರನ್ನು ಬಾಧಿಸುತ್ತಿರುವ ಕೊರೊನಾ ವೈರಸ್‌ (ಕೊವಿಡ್‌-19)ಅನ್ನು ಸರ್ವವ್ಯಾಪಿ ಸಾಂಕ್ರಾಮಿಕ ರೋಗ (ಪ್ಯಾಂಡೆಮಿಕ್‌) ಎಂದು ವಿಶ್ವ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಘೋಷಿಸಿದೆ. ಇದುವರೆಗೆ 4,389 ಜನರು ಕೊರೊನಾಗೆ ಬಲಿಯಾಗಿದ್ದಾರೆ. ಒಟ್ಟು 109 ದೇಶಗಳಲ್ಲಿ ಈ ಸೋಂಕು ಪತ್ತೆಯಾಗಿದೆ.

Related posts

ಮೋದಿ ಕಾರ್ಯಕ್ರಮದಿಂದ ದೂರ ಉಳಿದ ಮಾಧುಸ್ವಾಮಿ

Times fo Deenabandhu

 ರಾಜ್ಯದಲ್ಲಿ ಇಂದು 2798 ಕೋವಿಡ್‌ ಪ್ರಕರಣಗಳು ಪತ್ತೆ

ಬ್ರಿಟನ್ ನಾಗರಿಕನಿಗೆ ಕರೋನ ಸೋಂಕು: 289 ಪ್ರಯಾಣಿಕನ್ನು ಕೆಳೆಗಿಳಿಸಿದ ಎಮಿರೇಟ್ಸ್ ವಿಮಾನ

Times fo Deenabandhu