Times of Deenabandhu
  • Home
  • ಪ್ರಧಾನ ಸುದ್ದಿ
  • ಮಕ್ಕಳ ಹಿತಕ್ಕಿಂತ ನಿಮ್ಮ ಪ್ರತಿಷ್ಠೆ ಪ್ರಮುಖವಲ್ಲ: ಖಾಸಗಿ ಶಿಕ್ಷಣ ಸಂಸ್ಥೆಗಳ ವಿರುದ್ಧ ಶಿಕ್ಷಣ ಸಚಿವರು ಗರಂ
ಪ್ರಧಾನ ಸುದ್ದಿ ಮುಖ್ಯಾಂಶಗಳು ರಾಜ್ಯ ಶಿಕ್ಷಣ

ಮಕ್ಕಳ ಹಿತಕ್ಕಿಂತ ನಿಮ್ಮ ಪ್ರತಿಷ್ಠೆ ಪ್ರಮುಖವಲ್ಲ: ಖಾಸಗಿ ಶಿಕ್ಷಣ ಸಂಸ್ಥೆಗಳ ವಿರುದ್ಧ ಶಿಕ್ಷಣ ಸಚಿವರು ಗರಂ

ಬೆಂಗಳೂರು: ಸರ್ಕಾರದ ಆದೇಶ ಪಾಲಿಸದ ಕೆಲವು ಶಾಲೆಗಳಿಗೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಎಚ್ಚರಿಕೆ ನೀಡಿದ್ದಾರೆ.
ಕೊರೋನಾ ಸೋಂಕಿನ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಬೆಂಗಳೂರು ನಗರ (ಜಿಲ್ಲೆ) ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಪೂರ್ವ ಪ್ರಾಥಮಿಕ, ಎಲ್‌ಕೆಜಿ, ಯುಕೆಜಿ ಹಾಗೂ ಪ್ರಾಥಮಿಕ ಶಾಲೆಗಳ ತರಗತಿಗಳಿಗೆ (1 ರಿಂದ 5) ರಜೆ ಘೋಷಿಸಲಾಗಿದೆ. ಈ ಆದೇಶವನ್ನು ಪಾಲಿಸುವುದು ಈ ಪ್ರದೇಶಗಳಲ್ಲಿರುವ ಎಲ್ಲಾ ಶಾಲೆಗಳ ಕರ್ತವ್ಯ. ಕೆಲವು ಖಾಸಗಿ ಶಾಲೆಗಳು ಸರ್ಕಾರದ ಈ ಆದೇಶಕ್ಕೆ ಗೌರವ ಕೊಡದೇ ತಮ್ಮದೇ ಬೇರೆ ಸಾಮ್ರಾಜ್ಯ ಎಂದು ತಿಳಿದು ವ್ಯತಿರಿಕ್ತವಾಗಿ ವರ್ತಿಸುತ್ತಿರುವುದು ತಿಳಿದುಬಂದಿದೆ. ರಾಜ್ಯ ಸರ್ಕಾರದ ಆದೇಶವನ್ನು ಪಾಲಿಸದೆ ಇರುವ ಖಾಸಗಿ ಶಾಲೆಗಳಿಗೆ ಈ ಮೂಲಕ ಎಚ್ಚರಿಕೆ ನೀಡಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಸರ್ಕಾರದ ಆದೇಶ ಪಾಲಿಸದಿರುವ ಶಾಲೆಗಳು, ಅದೆಷ್ಟೇ “ಪ್ರಭಾವಶಾಲಿ”ಯಾಗಿದ್ದರೂ ತಿಳಿದುಕೊಂಡಿದ್ದರೂ ಅವುಗಳ ವಿರುದ್ಧ ಕ್ರಮ ಜರುಗಿಸಲಾಗುವುದು. ಸರ್ಕಾರ ತೆಗೆದುಕೊಂಡಿರುವ ನಿರ್ಧಾರ ಎಳೆ ಮಕ್ಕಳ ಹಿತದೃಷ್ಟಿಯಿಂದ ಎಂದು ಮನಗಾಣಬೇಕು ಎಂದು ಅವರು ತಿಳಿಸಿದ್ದಾರೆ.
ಸರ್ಕಾರದ ಆದೇಶ ಪಾಲಿಸದಿರುವುದು ನಮ್ಮ ಪ್ರತಿಷ್ಠೆ ಎಂದುಕೊಂಡಿರುವ ಆ ಎಲ್ಲಾ ಶಾಲೆಗಳಿಗೆ ಇದೊಂದು ” ಕಿವಿಮಾತು”. “ಮಕ್ಕಳ ಹಿತಕ್ಕಿಂತ ನಿಮ್ಮ ಪ್ರತಿಷ್ಠೆ ಪ್ರಮುಖವಲ್ಲ” ಎಂದು ಶಿಕ್ಷಣ ಸಚಿವರು ಫೇಸ್‌ಬುಕ್ ಮೂಲಕ ಎಚ್ಚರಿಕೆ ನೀಡಿದ್ದಾರೆ.

Related posts

ಮೈಸೂರಿನಲ್ಲಿಯೇ ಕನ್ನಡ ಶಾಸ್ತ್ರೀಯ ಭಾಷೆ ಕೇಂದ್ರ, ಮೂರು ಎಕರೆ ಜಾಗ ನಿಗದಿ – ಸಿ.ಟಿ. ರವಿ

Times fo Deenabandhu

ಕರ್ನಾಟಕದ ಮಾಜಿ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ನಿಧನ

ಚೀನಾ ನೋಟುಗಳ ಮೇಲೆಯೂ ಕೊರೊನಾ ವಕ್ರದೃಷ್ಟಿ: ನೋಟುಗಳ ಬಂಡಲ್​ ಕಟ್ಟಿ ಸೈಡಿಗಿಡುತ್ತಿರುವ ಬ್ಯಾಂಕ್​ಗಳು!

Times fo Deenabandhu