Times of Deenabandhu
ಇತರೆ ಜಿಲ್ಲೆಗಳು ಮುಖ್ಯಾಂಶಗಳು

ತಾಯಿಯ ಹಾಲು ಕುಡಿಯುತ್ತಲೇ ಪ್ರಾಣ ಕಳೆದುಕೊಂಡ ಮಗು…

ತುಮಕೂರು ಮಾ.7: ತನ್ನ ಮಗುವಿನ ಭವಿಷ್ಯ ಉಜ್ವಲವಾಗಲಿ, ತನ್ನ ಮಗು ಜೀವನ ಪರ್ಯಾಂತ ಯಾವುದೇ ಕಷ್ಟಪಡದೇ ಸುಖವಾಗಿ ಬಾಳಲಿ ಎಂಬ ಹಂಬಲದಿಂದ ಹೆತ್ತವರು ಧರ್ಮಸ್ಥಳಕ್ಕೆ ಹೋಗಿ ಮಗುವಿನ ಮುಡಿಯನ್ನು ಕೊಡಿಸಿ ತಮ್ಮೂರಿಗೆ ಹಿಂತಿರುಗುವ ವೇಳೆ ತಾಯಿ ತನ್ನ ಕಂದನ್ನನ ಎದೆಗಪ್ಪಿಕೊಂಡು ಹಾಲು ಕುಡಿಸುತ್ತಿರುವಾಗಲೇ ಆ ಮಗು ತನ್ನ ಪ್ರಾಣವನ್ನು ಬಿಟ್ಟ ಹೃದಯವಿದ್ರಾವಕ ಘಟನೆ  ನಡೆದಿದೆ.

ಗುರುವಾರ ನಡುರಾತ್ರಿ ತುಮಕೂರು ಹತ್ತಿರದ ಬ್ಯಾಲದಕರೆ ಬಳಿ ತೆವೇರಾ ಹಾಗೂ ಬ್ರೆಝ ಕಾರಿನ ನಡುವೆ ನಡೆದ ಬೀಕರ ಅಪಘಾತದಲ್ಲಿ ಸಂಭವಿಸಿದ ಘಟನೆಯಿದು.

ಪುಟ್ಟ ಹಸುಗೂಸಿಗೆ ಹೆಸರನ್ನಿಡುವ ಮೊದಲೇ ಮುಡಿ ಕೊಟ್ಟು ಬರೋಣವೆಂದು ತಮಿಳುನಾಡಿನ ಮಂಜುನಾಥ್ ಎಂಬುವವರು ತನ್ನ ಕುಟುಂಬದವರು ಹಾಗೂ ಸ್ನೇಹಿತರನ್ನು ಕರೆದುಕೊಂಡು ಧರ್ಮಸ್ಥಳಕ್ಕೆ ಬಂದಿದ್ದರು. ದೇವರ ದರ್ಶನ ಹಾಗೂ ಪೂಜೆ ಮುಗಿಸಿಕೊಂಡು ಹಿಂತಿರುಗವಾಗ ಈ ಘಟನೆ ಸಂಭವಿಸಿದೆ.

ತೆವೇರಾದಲ್ಲಿದ್ದ 13 ಮಂದಿಯಲ್ಲಿ 10 ಮಂದಿ, ಬ್ರೆಝಾದಲ್ಲಿದ್ದ 4 ಜನರಲ್ಲಿ 3 ಜನ ಹೀಗೆ ಒಟ್ಟು 13 ಮಂದಿ ಈ ಅಪಘಾತದಲ್ಲಿ ಮಡಿದಿದ್ದಾರೆ. ನಾಲ್ವರು ಗಾಯಗೊಂಡಿದ್ದು ಅವರಲ್ಲಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಇವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

 

 

Related posts

ಲಾಕ್‌ಡೌನ್‌ ಉಲ್ಲಂಘನೆ ಸಲ್ಲ: ಕಠಿಣ ಕ್ರಮಕ್ಕೆ ರಾಜ್ಯಗಳಿಗೆ ಕೇಂದ್ರ ಖಡಕ್‌ ಸೂಚನೆ

Times fo Deenabandhu

 ಸುಶಾಂತ್ ಸಿಂಗ್ ಪ್ರಕರಣ: ಇಸಿಐಆರ್ ಸಲ್ಲಿಕೆಗೆ ಫಡಣವೀಸ್‌ ಒತ್ತಾಯ

ರಾಷ್ಟ್ರೀಯ ಪೌರತ್ವ ನೋಂದಣಿ, ರಾಷ್ಟ್ರೀಯ ಜನ ಸಂಖ್ಯಾ ನೋಂದಣಿ ಒಂದಕ್ಕೊಂದು ಸಂಬಂಧ ಇಲ್ಲ

Times fo Deenabandhu