Times of Deenabandhu
  • Home
  • ಜಿಲ್ಲೆ
  • ನಾಳೆ ಗೋಣಿಬೀಡು ಶ್ರೀ ಶೀಲಸಂಪಾದನಾಮಠದಲ್ಲಿ ಮಾಸಿಕ ಅನುಭಾವ ಸಂಗಮ: 25ನೇ ವರ್ಷದ ಗುರು ಸ್ಮರಣಾ ಹಾಗೂ ವಿಶ್ವ ಮಹಿಳಾ ದಿನಾಚರಣೆ
ಜಿಲ್ಲೆ ಶಿವಮೊಗ್ಗ

ನಾಳೆ ಗೋಣಿಬೀಡು ಶ್ರೀ ಶೀಲಸಂಪಾದನಾಮಠದಲ್ಲಿ ಮಾಸಿಕ ಅನುಭಾವ ಸಂಗಮ: 25ನೇ ವರ್ಷದ ಗುರು ಸ್ಮರಣಾ ಹಾಗೂ ವಿಶ್ವ ಮಹಿಳಾ ದಿನಾಚರಣೆ

ಗೋಣಿಬೀಡು ಮಾ.6: ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲ್ಲೂಕಿನ ಗೋಣಿಬೀಡು ಶ್ರೀ ಶೀಲಸಂಪಾದನಾಮಠದಲ್ಲಿ 47ನೇ ಮಾಸಿಕ ಅನುಭಾವ ಸಂಗಮವನ್ನು ಇದೇ ಮಾರ್ಚ್ 8 ರಂದು ಮಹಾಶಿವರಣೆ ಅಕ್ಕನಾಗಲಾಂಬಿಕ ದಾಸೋಹ ಮಂದಿರದಲ್ಲಿ ಆಯೋಜಿಸಲಾಗಿದೆ.

ಈ ಬಾರಿಯ ಅನುಭಾವ ಸಂಗಮದಲ್ಲಿ ಲಿಂಗೈಕ್ಯ ಶ್ರೀಮನ್ ನಿರಂಜನ ಪ್ರಣವ ಸ್ವರೂಪಿ ಶ್ರೀ ಚಂದ್ರಶೇಖರ ಮಹಾಸ್ವಾಮಿಗಳವರು, ಶ್ರೀಶೀಲಸಂಪಾದನಮಠದ ಪೂಜ್ಯರ 25ನೇ ವರ್ಷದ ಗುರು ಸ್ಮರಣಾ ಸಮಾರಂಭ ಹಾಗೂ ವಿಶ್ವ ಮಹಿಳಾ ದಿನಾಚರಣೆಯನ್ನು ಆಚರಿಸಲಾಗುವುದು.

ಸುಕ್ಷೇತ್ರದ ಮಹಾತಪಸ್ವಿ ಪೂಜ್ಯ ಡಾ.ಸಿದ್ಧಲಿಂಗಮಹಾಸ್ವಾಮಿಗಳು ದಿವ್ಯ ಮೌನ ಅನುಷ್ಠಾನದಲ್ಲಿ ತೊಡಗಿದ್ದು, ಅವರ ದಿವ್ಯಾನುಗ್ರಹದಲ್ಲಿ ನಡೆಯುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಶೀಲಸಂಪಾದನಮಠದ ಕಾರ್ಯಾಧ್ಯಕ್ಷರು ಹಾಗೂ ವಿಶ್ರಾಂತ ಐಎಎಸ್ ಅಧಿಕಾರಿಗಳಾದ ದಯಾಶಂಕರ್ ಇವರು ವಹಿಸಲ್ಲಿದ್ದಾರೆ. ಕಾರ್ಯಕ್ರಮದ ಉದ್ಘಾಟನೆಯನ್ನು ಭದ್ರಾವತಿ ತಾಲ್ಲೂಕ್ ಕುರುಬರ ಸಂಘದ ಅಧ್ಯಕ್ಷರಾದ ಸಂತೋಷ್ ಇವರು ನೆರವೇರಿಸಲ್ಲಿದ್ದಾರೆ. ಕುವೆಂಪು ವಿವಿ ಕುಲಸಚಿವರಾದ ಪ್ರೊ.ಎಸ್.ಎಸ್.ಪಾಟೀಲ್ ಮುಖ್ಯ ಅತಿಥಿಯಾಗಿದ್ದಾರೆ. ಭದ್ರಾವತಿಯ ಮನೋಚಿಕಿತ್ಸಿಕರಾದ ವಿ.ಸಂತೋಷ್ ಇವರ ಪ್ರಾಸ್ತಾವಿಕ ಮಾತುಗಳಿದೆ. ಶರಣ ಸಾಹಿತ್ಯ ಮತ್ತು ಸಾಮಾಜಿಕ ಪರಿವರ್ತನೆ ಕುರಿತು ಭದ್ರಾವತಿಯ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ.ಬಿ.ಜಿ.ಧನಂಜಯ ಇವರು ವಿಶೇಷ ಉಪನ್ಯಾಸ ನೀಡಲ್ಲಿದ್ದಾರೆ.

ಮಹಿಳಾ ದಿನಾಚರಣೆಯ ಅಂಗವಾಗಿ ಸಮಾಜದಲ್ಲಿ ಹಾಗೂ ಮಠದಲ್ಲಿ ನಿರಂತರ ಸೇವೆ ಸಲ್ಲಿಸುತ್ತಿರುವ ಮಹಿಳೆಯರಿಗೆ ವಿಶೇಷವಾಗಿ ಈ ಸಂದರ್ಭದಲ್ಲಿ ಗೌರವಿಸಲಾಗುವುದು. ಅವರುಗಳೆಂದರೆ ಭದ್ರಾವತಿ ವಕೀಲರಾದ ರೂಪಾ ರಾವ್, ಶಿವಮೊಗ್ಗದ ಶಿಕ್ಷಕಿ ಶೀಲ, ಭದ್ರಾವತಿ ಪೋಲೀಸ್ ಸಬ್‍ಇನ್ಸ್‍ಪೆಕ್ಟರು ಕವಿತಾ, ಹೊನ್ನಟ್ಟಿ ಹೊಸರು ಪ್ರಗತಿಪರ ರೈತರಾದ ಉಷಾ ಸತೀಶ್, ಶಿವಮೊಗ್ಗದ ಡಾ.ಚಿತ್ರಲೇಖ ವೆಂಕಟಕೃಷ್ಣ, ಗಿರಿಯಾಪುರದ ವಿಮಲಾ ದಾರುಕಾರಾಧ್ಯ, ಗೋಣಿಬೀಡಿನ ಲತಾ ನಾಗೇಶ್, ರಾಣೇಬೆನ್ನೂರಿನ ಡಾ.ರೋಹಿಣಿ, ಗೋಣಿಬೀಡಿನ ತೀರ್ಥಮ್ಮ, ಹೊಳಲ್ಕೆರೆ ಸವಿತಕ್ಕ ದುಮ್ಮಿ, ಭದ್ರಾವತಿ ರಶ್ಮಿ ಸಂತೋಷ್ ಕುಮಾರ್.

ಇದೇ ಸಂದರ್ಭದಲ್ಲಿ ಶ್ರೀ ಗುರುಕೃಪ ಆಯುರ್ವೇದ ಹಾಗೂ ಪ್ರಕೃತಿ ಚಿಕಿತ್ಸೆ ಆಸ್ಪತ್ರೆಯ ಅಂತರ್ಜಾಲ ತಾಣವನ್ನು ಐಎಎಸ್ ಅಧಿಕಾರಿಗಳಾಗಿದ್ದ  ಎಸ್.ದಯಾಶಂಕರ್‍ಇವರು ಉದ್ಘಾಟಿಸಲ್ಲಿದ್ದಾರೆ.

ಅಂದು ಶರಣೆ ನಾಗರತ್ನ ಚಂದ್ರಶೇಖರಯ್ಯನವರ ವಚನ ಸಂಗೀತ ಕಾರ್ಯಕ್ರಮವಿದೆ.

 

 

Related posts

೮೧೦ ಪುಟಗಳ ಗ್ರಂಥವನ್ನು ಮರು ಮುದ್ರಣದ ಸಂಕಲ್ಪ

Times fo Deenabandhu

ಜಿ ಎಮ್‌ನಲ್ಲಿ ರಾಷ್ಟ್ರೀಯ ಸಮಗ್ರತೆ ಪ್ರತಿಜ್ಞಾ ಸ್ವೀಕಾರ

Times fo Deenabandhu

ಟೆಂಟ್‌ನೊಳಗೆ ಶಾಲೆ ನಡೆಸುವ ದುರ್ಗತಿ ತಾಲೂಕಿಗೆ ಬಂದಿಲ್ಲ

Times fo Deenabandhu