Times of Deenabandhu
  • Home
  • ಜಿಲ್ಲೆ
  • ವಿದ್ಯಾರ್ಥಿಗಳ ಜೀವನ ಉಜ್ವಲಗೊಳಿಸಲು ಶಿಕ್ಷಣ ಸಂಸ್ಥೆಗಳಿಂದ ಸಾಧ್ಯ: ಕೆ.ಸಿ.ರತನ್
ಚಿಕ್ಕಮಗಳೂರು ಜಿಲ್ಲೆ

ವಿದ್ಯಾರ್ಥಿಗಳ ಜೀವನ ಉಜ್ವಲಗೊಳಿಸಲು ಶಿಕ್ಷಣ ಸಂಸ್ಥೆಗಳಿಂದ ಸಾಧ್ಯ: ಕೆ.ಸಿ.ರತನ್

ಮೂಡಿಗೆರೆ: ಶಿಕ್ಷಣದ ಮೂಲಕ ವಿದ್ಯಾರ್ಥಿಗಳ ಜೀವನ ಉಜ್ವಲಗೊಳಿಸಲು ಶಿಕ್ಷಣ ಸಂಸ್ಥೆಗಳಿಂದ ಸಾಧ್ಯವಾಗುತ್ತದೆ ತಾ.ಪಂ. ಅಧ್ಯಕ್ಷ ಕೆ.ಸಿ.ರತನ್ ತಿಳಿಸಿದರು.
ಅವರು ಬುಧಾವಾರ ಸಂಜೆ ತಾಲೂಕಿನ ಜನ್ನಾಪುರದ ಫ್ಲೋರೆನ್ಸ್ ಕಾನ್ವೆಂಟ್ ಶಿಕ್ಷಣ ಸಂಸ್ಥೆಯ ನೂತನ ಕಟ್ಟಡ ಹಾಗೂ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಎಲ್ಲಾ ವರ್ಗದ ಮಕ್ಕಳನ್ನು ಸಮಾನ ರೀತಿಯಲ್ಲಿ ಕಂಡು ತಾರತಮ್ಯ ಮಾಡದೇ ಶಿಕ್ಷಣ ಸಂಸ್ಥೆಗಳು ಕಾರ್ಯ ನಿರ್ವಹಿಸಿದಾಗ ಸಂಸ್ಥೆಗೆ ಒಳ್ಳೆಯ ಹೆಸರು ಗಳಿಸಲು ಸಾಧ್ವವಾಗತ್ತದೆ. ತಾಲೂಕಿನಲ್ಲಿ ಶಿಕ್ಷಣ ವ್ಯವಸ್ಥೆ ಅತ್ಯಂತ ಹಿಂದುಳಿದಿದೆಯಾದರೂ ಕಳೆದೆರಡು ವರ್ಷ ಪಿಲಿತಾಂಶ ಗಮನಿಸಿದರೆ ತಾಲೂಕು ಕೊಂಚಮಟ್ಟದಲ್ಲಿ ಸುಧಾರಿಸಿದೆ. ಇಲ್ಲಿಯೇ ಉತ್ತಮ ಶಿಕ್ಷಣ ಸಿಕ್ಕಿದರೆ ಹೊರ ಪ್ರದೇಶಗಳಿಗೆ ತೆರಳಿ ಶಿಕ್ಷಣ ಪಡೆಯುವ ಅನಿವಾರ್ಯತೆ ಇರುವುದಿಲ್ಲ ಎಂದು ಹೇಳಿದರು.
ಸಂಸ್ಥೆಯ ಕಾರ್ಯದರ್ಶಿ ಸತ್ಯಕುಮಾರ್ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಶಿಕ್ಷಣ ನೀಡಬೇಕೆಂಬುದು ಸಂಸ್ಥೆಯ ಕನಸಾಗಿದ್ದು, ಕಳೆದ ೧೭ವರ್ಷದಿಂದ ಎಲ್‌ಕೆಜಿಯಿಂದ ಪ್ರಾರಂಭಗೊಳಿಸಿ ಅತ್ಯುತ್ತಮ ವಿದ್ಯಾಭ್ಯಾಸವನ್ನು ನೀಡುವ ಮೂಲಕ ಈ ವಿದ್ಯಾ ಸಂಸ್ಥೆಯಲ್ಲಿ ವ್ಯಾಸಾಂಗ ಮಾಡಿದ ವಿದ್ಯಾರ್ಥಿಗಳು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಹೆಸರು ಗಳಿಸಿದ್ದಾರೆ. ನಮ್ಮ ಸಂಸ್ಥೆಗೆ ದಾನಿಗಳಾದ ಜನ್ನಾಪುರ ಸೀತೆಗೌಡ ಹಾಗೂ ಯು.ಎಸ್.ರುದ್ರೇಗೌಡ ಕುಟುಂಬದವರ ನೆರವಿನಿಂದ ನಿರ್ಮಾಣಗೊಂಡು ಉದ್ಘಾಟನೆಗೊಂಡ ನೂತನ ಕಟ್ಟಡದಲ್ಲಿ ಶಿಕ್ಷಣ ವ್ಯವಸ್ಥೆಯನ್ನು ಇನ್ನಷ್ಟು ಗಟ್ಟಿಗೊಳಿಸಲು ಶ್ರಮಿಸಲಾಗುವುದು ಎಂದು ತಿಳಿಸಿದರು.
ಇದಕ್ಕೂ ಮುನ್ನ ಶಾಲೆಯ ನೂತನ ಕಟ್ಟಡವನ್ನು ಗಣಪತಿ ಪೂಜೆ ಸಲ್ಲಸಿ ಉದ್ಘಾಟಿಸಲಾಯಿತು. ನಂತರ ಶಾಲೆಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ತಾ.ಪಂ. ಸದಸ್ಯರಾದ ಸುಂದರ್ ಕುಮಾರ್ ದೇವರಾಜು, ಚಿನ್ನಿಗ ಗ್ರಾ.ಪಂ.ಅಧ್ಯಕ್ಷ ಸುನೀಲ್ ನಿಡಗೂಡು, ಸದಸ್ಯ ಜೆಎಸ್.ಸುಧೀರ್, ಗ್ರಾಮದ ಮುಖಂಡರಾದ ಯು.ಎಸ್.ರುದ್ರೇಗೌಡ, ಜೆ.ಎಸ್.ರಘು, ಪ್ರಾಂಶುಪಾಲೆ ಆಶಾರಾಣಿ ಮತ್ತಿತರರು ಉಪಸ್ಥಿತರಿದ್ದರು.

Related posts

ತೆಲಂಗಾಣ ರಾಜ್ಯ ಸರ್ಕಾರದ ಮಾದರಿಯಲ್ಲಿ ರೈತರಿಗೆ ವಿಶೇಷ ಪ್ಯಾಕೇಜ್ ನೀಡಲು ಕೃಷಿ ಸಚಿವರಿಗೆ ಮನವಿ

Times fo Deenabandhu

ಚಾರ್ಮಾಡಿ ಘಾಟಿ: ಮಿನಿ ಬಸ್‌ಗಳಿಗೆ ಅನುಮತಿ, ಭಾರೀ ವಾಹನಗಳ ಮೇಲಿನ ನಿರ್ಬಂಧ ಮಂದುವರಿಕೆ

Times fo Deenabandhu

ಡಿ.5, 6 ರಂದು ನಾಟಕೋತ್ಸವ

Times fo Deenabandhu