Times of Deenabandhu
  • Home
  • ಮುಖ್ಯಾಂಶಗಳು
  • ಕರ್ನಾಟಕ ಬಜೆಟ್ 2020: ರಾಜ್ಯ ಬೊಕ್ಕಸ ಹೊರೆ ತಪ್ಪಿಸಲು, ಆದಾಯ ಸಂಗ್ರಹಕ್ಕೆ ಒತ್ತು ನೀಡಿದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಮದ್ಯ, ಡೀಸೆಲ್,ಪೆಟ್ರೋಲ್ ಬೆಲೆ ಹೆಚ್ಚಳ : ಮನೆ ಖರೀದಿದಾರರಿಗೆ ಸಿಹಿ ಸುದ್ದಿ, ಅಡಿಕೆ ಬೆಳೆಗಾರರಿಗೆ 2 ಲಕ್ಷ ರೂ .ವರೆಗಿನ ಸಾಲಕ್ಕೆ ಶೇ 5 ರಷ್ಟು ಬಡ್ಡಿ ವಿನಾಯಿತಿ.
ಪ್ರಧಾನ ಸುದ್ದಿ ಮುಖ್ಯಾಂಶಗಳು ರಾಜ್ಯ

ಕರ್ನಾಟಕ ಬಜೆಟ್ 2020: ರಾಜ್ಯ ಬೊಕ್ಕಸ ಹೊರೆ ತಪ್ಪಿಸಲು, ಆದಾಯ ಸಂಗ್ರಹಕ್ಕೆ ಒತ್ತು ನೀಡಿದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಮದ್ಯ, ಡೀಸೆಲ್,ಪೆಟ್ರೋಲ್ ಬೆಲೆ ಹೆಚ್ಚಳ : ಮನೆ ಖರೀದಿದಾರರಿಗೆ ಸಿಹಿ ಸುದ್ದಿ, ಅಡಿಕೆ ಬೆಳೆಗಾರರಿಗೆ 2 ಲಕ್ಷ ರೂ .ವರೆಗಿನ ಸಾಲಕ್ಕೆ ಶೇ 5 ರಷ್ಟು ಬಡ್ಡಿ ವಿನಾಯಿತಿ.

ಬೆಂಗಳೂರು, ಮಾರ್ಚ್ 5: ನಿರೀಕ್ಷೆಯಂತೆ ಮದ್ಯದ ಮೇಲಿನ ತೆರಿಗೆ ಹೆಚ್ಚಿಸಲಾಗಿದೆ. ಪೆಟ್ರೋಲ್, ಡೀಸೆಲ್ ಬೆಲೆ ಕೂಡಾ ಏರಿಕೆಯಾಗಿದೆ. ಸರ್ಕಾರದ ಬೊಕ್ಕಸಕ್ಕೆ ಹೊರೆ ತಪ್ಪಿಸಲು, ಆದಾಯ ಸಂಗ್ರಹಕ್ಕೆ ಹೆಚ್ಚಿನ ಒತ್ತು ನೀಡಿರುವ  ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ರಾಜಸ್ವ ಸಂಗ್ರಹಕ್ಕೆ ಸರ್ಕಾರ ಮುಂದಾಗಿದೆ.

ಯಾವುದಕ್ಕೆ ಹೆಚ್ಚಳ :

ಡೀಸೆಲ್ ಮೇಲಿನ 32 ರಿಂದ 35 ರಷ್ಟು ಸೆಸ್ ಏರಿಕೆ, ಡೀಸೆಲ್ ಪ್ರತಿ ಲೀಟರ್ ಬೆಲೆ 1.60 ರು ಏರಿಕೆ  ಹಾಗೂ ಪೆಟ್ರೋಲ್ ಮೇಲಿನ ಅಬಕಾರಿ ಸುಂಕ ಶೇ 32ರಿಂದ 35ಕ್ಕೇರಿಕೆ- ಮದ್ಯ, ತಂಬಾಕು ಉತ್ಪನ್ನಗಳು, ಸಿಗರೇಟು, ಬೀಡಿ ಬೆಲೆ ಏರಿಕೆ – ಮದ್ಯದ ಮೇಲಿನ ಅಬಕಾರಿ ಸುಂಕ ಶೇ 6 ರಷ್ಟು ಹೆಚ್ಚಳ- ಅಬಕಾರಿ ಸುಂಕ 18 ಸ್ಲ್ಯಾಬ್ ಗಳಿಗೆ ಶೇ 15 ರಿಂದ ಶೇ 34ಕ್ಕೆ ಏರಿಕೆ – ಖಾಸಗಿ ಸೇವಾ ವಾಹನ ತೆರಿಗೆ: 12ಕ್ಕಿಂತ ಹೆಚ್ಚು 20 ಕ್ಕಿಂತ ಕಡಿಮೆ ಆಸನವುಳ್ಳ ಪ್ರಯಾಣಿಕರ ಒಪ್ಪಂದ ವಾಹನದ ತ್ರೈಮಾಸಿಕ ಪ್ರತಿ ಆಸನಕ್ಕೆ 900 ರು ನಿಗದಿ-1988ನೇ ಮೋಟಾರು ವಾಹನ ಕಾದ್ಯೆ ಕಲಂ 88(9) ಅನ್ವಯ ರಹದಾರಿ ಪಡೆದು ಚಾಲನೆಯಲ್ಲಿರುವ ಹೊಸ ಮಾದರಿ ಸ್ಲೀಪರ್ ಕೋಚ್ ವಾಹನಗಳ ನೋಂದಣಿ ಸಮಯದಲ್ಲಿ ತ್ರೈಮಾಸಿಕ ತೆರಿಗೆ ಪ್ರತಿ ಸ್ಲೀಪರ್ ಗೆ 4,000 ರೂ.-ವಿದ್ಯುತ್ ದರ ಹೆಚ್ಚಳ ಪ್ರತಿ ಯೂನಿಟ್ ಮೇಲೆ 10ರಿಂದ 20 ಪೈಸೆ ಏರಿಕೆ ಮುಂದುವರಿಕೆ.- ವಿದ್ಯುತ್ ಮೇಲಿನ ತೆರಿಗೆ ಶೇ.6ರಿಂದ ಶೇ.9ಕ್ಕೆ ಏರಿಕೆ ಮುಂದುವರಿಕೆ.

ಯಾವುದಕ್ಕೆ ಇಳಿಕೆ:

*ಅಡಿಕೆ ಬೆಳೆಗಾರರಿಗೆ 2 ಲಕ್ಷ ರುವರೆಗಿನ ಸಾಲಕ್ಕೆ ಶೇ 5 ರಷ್ಟು ಬಡ್ಡಿ ವಿನಾಯಿತಿ- ಮನೆ ಖರೀದಿದಾರರಿಗೆ ಶುಭ ಸುದ್ದಿ, ನೋಂದಣಿ ಶುಲ್ಕ ಕಡಿತ.- ರೈತರಿಗೆ ಹೆಕ್ಟೇರಿಗೆ 10 ಸಾವಿರ ರು ಅನುದಾನ- ಸಿರಿಧಾನ್ಯಗಳಾದ ನವಣೆ, ಸಾಮೆ, ಅರಕ ಹಾಗೂ ಬರಗು ಮೇಲಿನ ಹಿಟ್ಟುಗಳಿಗೆ ತೆರಿಗೆ ವಿನಾಯ್ತಿ- ದ್ವಿದಳ ಧಾನ್ಯ, ತೆಂಗಿನ ಕಾಯಿ ಸಿಪ್ಪೆಯ ಮೇಲಿನ ತೆರಿಗೆ ವಿನಾಯಿತಿ ಮುಂದುವರಿಕೆ. ಸಿರಿ ಧಾನ್ಯಗಳ ಪಟ್ಟಿಗೆ ಟೆಫ್, ಚಿಯಾ ಮತ್ತು ಕ್ವಿನೋವಾ ಸಿರಿಧಾನ್ಯಗಳ ಸೇರ್ಪಡೆ.-ಮಹಿಳಾ ಮೀನುಗಾರರ ಸಬಲೀಕರಣ ಯೋಜನೆಯಡಿ 1000 ಮೀನುಗಾರ ಮಹಿಳೆಯರಿಗೆ ದ್ವಿಚಕ್ರ ವಾಹನಗಳನ್ನು ನೀಡಲು 5 ಕೋಟಿ ರು ಅನುದಾನ- ಒಂದು ಲಕ್ಷ ಮಹಿಳಾ ಕಾರ್ಮಿಕರಿಗೆ ಉಚಿತ ಬಸ್ ಪಾಸ್.

Related posts

 ‘ಆಶಾ’ ಬೇಡಿಕೆಗೆ ಸ್ಪಂದಿಸದಿದ್ದರೆ ಸಿಎಂ ಮನೆಗೆ ಮುತ್ತಿಗೆ: ಡಿ.ಕೆ. ಶಿವಕುಮಾರ್

ಛಲ, ಹಠ, ಬತ್ತದ ಉತ್ಸಾಹದ ಯಡಿಯೂರಪ್ಪ

Times fo Deenabandhu

ಶಬ್ದಕ್ಕಿಂತಲೂ ಹೆಚ್ಚು ವೇಗವಾಗಿ ಅಪ್ಪಳಿಸುವ ಬ್ರಹ್ಮೋಸ್‌ ಕ್ಷಿಪಣಿ ಉಡಾವಣೆ ಯಶಸ್ವಿ

Times fo Deenabandhu