Times of Deenabandhu
  • Home
  • ಜಿಲ್ಲೆ
  • ಹೊಳಲ್ಕೆರೆಯಲ್ಲಿ ರಾಜ್ಯಮಟ್ಟದ ದೇಶಿ ಗೋಸಮ್ಮೇಳನ
ಜಿಲ್ಲೆ ಶಿವಮೊಗ್ಗ

ಹೊಳಲ್ಕೆರೆಯಲ್ಲಿ ರಾಜ್ಯಮಟ್ಟದ ದೇಶಿ ಗೋಸಮ್ಮೇಳನ

ಶಿವಮೊಗ್ಗ : ಶ್ರೀ ಸೇವಾಮೃತ ಬಯೋಫ಼ಾರ್ಮ್, ಕುಡಿನೀರುಕಟ್ಟೆ, ಹೊಳಲ್ಕೆರೆ ಇಲ್ಲಿ ೬ನೇ ರಾಜ್ಯ ಮಟ್ಟದ ದೇಶಿ ಗೋ ಸಮ್ಮೇಳನ ನಡೆಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ ತರಳಬಾಳು ಬ್ರಹನ್ಮಠದ ಜಗದ್ಗುರುಗಳಾದ ಡಾ: ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಜಿ ಇವರು ಆಶೀರ್ವಚನ ನೀಡಿ ದೇಶಿ ಆಕಳುಗಳನ್ನು ಸಾಕುವ ಯೋಜನೆಯನ್ನು ಶ್ರೀಮಠವೂ ಹೊಂದಿದ್ದು ಸದ್ಯವೇ ಇದು ಸಂಪೂರ್ಣಗೊಳ್ಳಲಿದೆ ಎಂದರು. ಶ್ರೀಮಠದಿಂದ ಬರಗಾಲದಲ್ಲಿ ರೈತರ ಜಾನುವಾರುಗಳ ಸಂಕಷ್ಠಕ್ಕೆ ಸ್ಪಂಧಿಸಲು ೨ ಕೋಟಿ ರೂಪಾಯಿಗಳ ಯೋಜನೆಯಿದ್ದು ರೈತರು ಬರಗಾಲದ ಬೇಗೆಯಿಂದ ಜಾನುವಾರುಗಳನ್ನು ರಕ್ಷಿಸಿಕೊಳ್ಳಲು ಶ್ರೀಮಠಕ್ಕೆ ಅವರ ಜಾನುವಾರುಗಳನ್ನು ಉಚಿತವಾಗಿ ತಂದು ಬರಗಾಲ ಕಳೆದ ನಂತರ ವಾಪಸ್ಸು ಕರೆದುಕೊಂಡು ಹೋಗುವ ಸೌಲಭ್ಯ ಕಲ್ಪಿಸಲಾಗಿದೆ ಎಂದರು.
ಆನಂದ, ಅಧ್ಯಕ್ಷರು, ಸಾವಯವ ಕೃಷಿ ಮಿಷನ್ ಕರ್ನಾಟಕ ಸರ್ಕಾರದ ಇವರು ಮಾತನಾಡಿ ರೈತರು ಗೋಸಾಕಣೆಯಲ್ಲಿ ಸ್ವಾವಲಂಭಿಗಳಾಗಬೇಕು ಮತ್ತು ಗೋವಿಗೆ ಘನತೆಯ ಜೀವನ ನೀಡಬೇಕು. ಗೋವು ನಮ್ಮನ್ನು ಸಾಕುತ್ತದೆಯೇ ಹೊರತು ನಾವು ಗೋವನ್ನು ಸಾಕುವುದಿಲ್ಲ ಎಂದರು.
ಶಿವಮೊಗ್ಗದ ಪ್ರಧಾನ ಸಂಶೋಧಕರು ಮತ್ತು ಜಾನುವಾರು ನಿಗೂಢ ಕಾಯಿಲೆಗಳ ಸಂಶೋಧನಾ ಸಂಸ್ಥೆಯ ಮುಖ್ಯಸ್ಥ ಡಾ|| ಎನ್.ಬಿ.ಶ್ರೀಧರ ಮಾತನಾಡಿ ಗೋವಿಗೆ ಆರತಿ ಪೂಜೆ ಪುನಸ್ಕಾರಗಳಿಂತಲೂ ಅದರ ಹೊಟ್ಟೆಗೆ ಸರಿಯಾಗಿ ನೀಡಿದಲ್ಲಿ ಅದಕ್ಕೆ ತಕ್ಕಂತೆ ಫಲ ನೀಡುವಳು. ಅವುಗಳ ಪೋಷಣೆ ಮತ್ತು ಅಹಾರ ನೀಡುವಿಕೆಯನ್ನು ವೈಜ್ಞಾನಿಕವಾಗಿ ನಿರ್ವಹಿಸಿದಲ್ಲಿ ಬಹುತೇಕ ಸಮಸ್ಯೆಗಳು ಬಗೆಹರಿದು ಉತ್ತಮ ಫಲಿತಾಂಶ ಕಾಣಬಹುದು ಎಂದರು.
ಶ್ರೀ ಮಂಗೇಶ್ ಬೆಂಡೆ, ರಾಷ್ಟ್ರೀಯ ಸ್ವಯಂ ಸೇವಕ ಸಂಘ ಇವರು ಆಕಳುಗಳ ಆರೋಗ್ಯವನ್ನು ಸರಿಯಾಗಿ ನಿರ್ವಹಿಸಿ ಅವುಗಳಿಗೆ ತಕ್ಕ ಅಹಾರ ನೀಡಿದಲ್ಲಿ ಅವು ಹರಸುತ್ತವೆ ಎಂದರು.
ಕಾರ್ಯಕ್ರಮದ ಅಂಗವಾಗಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಡಾ: ಟಿ.ವಿ.ಗಿರೀಶ್, ಪಶುಪೋಷಣಾ ತಜ್ಞರು ಇವರು ದೇಶಿ ತಳಿಗಳ ವೈಜ್ಞಾನಿಕ ಪೋಷಣೆಯ ಬಗ್ಗೆ ರೈತರ ಪ್ರಶ್ನೆಗಳಿಗೆ ಉತ್ತರಿಸಿದರು. ಕಾರ್ಯಕ್ರಮವನ್ನು ಡಾ: ಜಯಸಿಂಹ, ಡಾ:ಹರೀಶ್, ಡಾ: ಲೋಕನಾಥ್ ಇವರು ಊರ ಜನರ ಸಹಕಾರದೊಂದಿಗೆ ಆಯೋಜಿಸಿದರು. ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧ ಭಾಗಗಳ ೧೫೦ ಕೃಷಿಕರು ಪಾಲ್ಗೊಂಡರು.

Related posts

ಇಂಗ್ಲಿಷ್ ಎಂಬ ವೈರಸ್ ವ್ಯಾಪಕವಾಗಿ ಹಬ್ಬುತ್ತಿರುವುದು ಅಪಾಯಕಾರಿ

ಮಂಜುನಾಥಗೌಡರ ನಡೆ ಕಾಂಗ್ರೆಸ್ ನೆಡೆಗೆ?: ಡಿ ಕೆ ಶಿವಕುಮಾರ್ ಗೌಡರನ್ನು ಕರೆಸಿಕೊಂಡಿದ್ದರ ಗುಟ್ಟೇನು?

Times fo Deenabandhu

ಮುಂದುವರಿದ ಡಾ.ಶಿವಮೂರ್ತಿ ಮುರುಘಾ ಶರಣರ ಕೊರೊನಾ ವೈರಸ್ ನಿಂದ ಸಂಕಷ್ಟಕ್ಕೀಡಾದವರಿಗೆ ದವಸಧಾನ್ಯಗಳ ವಿತರಣಾ ಅಭಿಯಾನ