Times of Deenabandhu
  • Home
  • ಪ್ರಧಾನ ಸುದ್ದಿ
  • ಕೊರೊನಾ ವೈರಸ್​ ಭೀತಿ; ಮಾಸ್ಕ್​ಗಳ ರಕ್ಷಣೆಯೇ ಕಷ್ಟವಾಗುತ್ತಿದೆ…ಆಸ್ಪತ್ರೆಯಿಂದ ಕಳವಾದವು ಬರೋಬ್ಬರಿ 2000 ಸರ್ಜಿಕಲ್​ ಮಾಸ್ಕ್​ಗಳು..
ದೇಶ ಪ್ರಧಾನ ಸುದ್ದಿ ಮುಖ್ಯಾಂಶಗಳು ವಿದೇಶ

ಕೊರೊನಾ ವೈರಸ್​ ಭೀತಿ; ಮಾಸ್ಕ್​ಗಳ ರಕ್ಷಣೆಯೇ ಕಷ್ಟವಾಗುತ್ತಿದೆ…ಆಸ್ಪತ್ರೆಯಿಂದ ಕಳವಾದವು ಬರೋಬ್ಬರಿ 2000 ಸರ್ಜಿಕಲ್​ ಮಾಸ್ಕ್​ಗಳು..

ಫ್ರಾನ್ಸ್​: ಕೊರೊನಾ ವೈರಸ್​ ಭೀತಿ ಇಡೀ ಜಗತ್ತಿಗೇ ಆವರಿಸಿದೆ. ಈ ಕಾರಣದಿಂದ ಮಾಸ್ಕ್​ ಎಂಬುದು ಬಹುದೊಡ್ಡ ಅಗತ್ಯವಾಗಿ ಪರಿಣಮಿಸಿದೆ.

ಸದ್ಯದ ಮಟ್ಟಿಗೆ ಪ್ರತಿಯೊಬ್ಬರ ಬೇಡಿಕೆಯಾದ ಮಾಸ್ಕ್​ ಕೂಡ ಕಳವಾಗುತ್ತಿದೆ. ಈಗ ದಕ್ಷಿಣ ಫ್ರೆಂಚ್​​ನ ಮಾರ್ಸಿಲ್ಲೆ ನಗರದ ಆಸ್ಪತ್ರೆಯೊಂದರಿಂದ ಬರೋಬ್ಬರಿ 2000 ಸರ್ಜಿಕಲ್​ ಮಾಸ್ಕ್​ಗಳು ಕಳುವಾಗಿದ್ದಾಗಿ ವರದಿಯಾಗಿದೆ. ಇವೆಲ್ಲ ಶಸ್ತ್ರಚಿಕಿತ್ಸೆ ಸಮಯದಲ್ಲಿ ಬಳಸುವ ಮಾಸ್ಕ್​ಗಳಾಗಿದ್ದು, ಆಸ್ಪತ್ರೆಗೆ ದಾಖಲಾಗುವ ರೋಗಿಗಳಿಗೆ ಮತ್ತು ಅಲ್ಲಿನ ವೈದ್ಯರ ಬಳಕೆಗಾಗಿ ಇಡಲಾಗಿತ್ತು.

ಸರ್ಜಿಕಲ್​ ಮಾಸ್ಕ್​ಗಳು ಕಳವಾದ ಬೆನ್ನಲ್ಲೇ ಫ್ರಾನ್ಸ್​ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಅವರು ಫೇಸ್​ ಮಾಸ್ಕ್​ಗಳ ಉತ್ಪಾದನೆ ಹಾಗೂ ಸಂಗ್ರಹ ಹೆಚ್ಚಾಗಬೇಕು ಎಂದು ಆರೋಗ್ಯ ಇಲಾಖೆ, ಸಂಸ್ಥೆಗಳಿಗೆ ತಿಳಿಸಿದ್ದಾರೆ.
ಮಾಸ್ಕ್​ಗಳ ಕೊರತೆ ಆದರೆ ಹೀಗೆ ಕಳವಾಗುವ ಪ್ರಮಾಣವೂ ಹೆಚ್ಚಾಗುತ್ತದೆ. ಇದರಿಂದಾಗಿ ನಿಜಕ್ಕೂ ಅಗತ್ಯ ಇರುವವರಿಗೆ ಪೂರೈಕೆ ಆಗುವುದಿಲ್ಲ ಎಂದಿದ್ದಾರೆ.

ಫ್ರಾನ್ಸ್​ನಲ್ಲಿ ಕೊರೊನಾ ವೈರಸ್​ನಿಂದ ನಾಲ್ವರು ಮೃತಪಟ್ಟಿದ್ದು, ಒಟ್ಟು 204 ಜನರಲ್ಲಿ ಸೋಂಕು ದೃಢಪಟ್ಟಿದೆ.

Related posts

ಬೈ ಎಲೆಕ್ಷನ್‌ನಲ್ಲಿ ಸಿದ್ದುಗೆ ‘ಕೈ’ಕೊಟ್ಟ ‘ಹಿರಿಯರಿಗೆ’ ಶಾಕ್!

Times fo Deenabandhu

 ಸರ್ಕಾರಿ ನೌಕರರ ವೇತನಕ್ಕೆ ಸಮಸ್ಯೆ ಇಲ್ಲ

Times fo Deenabandhu

ಇದೆಲ್ಲಾ ಕೊರೊನಾ ಬಗ್ಗೆ ಇರುವ ಸುಳ್ಳು ಸುದ್ದಿಗಳು, ನಂಬಲೇಬೇಡಿ!

Times fo Deenabandhu